Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ವಾರೀಸುದಾರರಿಲ್ಲದ ವರ್ಕಾಡಿ ಗ್ರಾ.ಪಂ. ಬೊಲೇರೋ ಜೀಪು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್. ರಿಪೇರಿಗೆಂದು ಗ್ಯಾರೇಜ್ ಮುಂಭಾಗ ನಿಲ್ಲಿಸಿದೆಂದು ಪಂಚಾಯತ್ ಅಧ್ಯಕ್ಷೆ ಪ್ರತಿಕ್ರಿಯೆ.

ವಾರೀಸುದಾರರಿಲ್ಲದ ವರ್ಕಾಡಿ ಗ್ರಾ.ಪಂ. ಬೊಲೇರೋ ಜೀಪು.ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್. ರಿಪೇರಿಗೆಂದು ಗ್ಯಾರೇಜ್ ಮುಂಭಾಗ ನಿಲ್ಲಿಸಿದೆಂದು ಪಂಚಾಯತ್ ಅಧ್ಯಕ್ಷೆ ಪ್ರತಿಕ್ರಿಯೆ.
ವರ್ಕಾಡಿ: ವರ್ಕಾಡಿ ಗ್ರಾಮ ಪಂಚಾಯತಿನ ಬೊಲೆರೋ ಜೀವು ಉಪೇಕ್ಷಿತ ರೀತಿಯಲ್ಲಿ ಪತ್ತೆಗೊಂಡಿದೆ. ಪಂಚಾಯತಿನ ವಾಹನವನ್ನು ಸಮರ್ಪಕವಾಗಿ ಬಳಸಲಾಗದ ಆಡಳಿತ ಸಮಿತಿ ಯಾವ ರೀತಿಯಲ್ಲಿ ಆಡಳಿತ ನಡೆಸಬಹುದು ಎಂಬುದಕ್ಕೆ ಈ ವಾಹನ ಪ್ರತ್ಯಕ್ಷ ಸಾಕ್ಷಿಯಾಗಿದೆ. ಗುರುವಾರ ತಡರಾತ್ರಿ ಪಂಚಾಯತಿನ ಈ ವಾಹನ ಬೇಕರಿ ಜಂಕ್ಷನ್ ನಲ್ಲಿ ಪತ್ತೆಗೊಂಡಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದೇ ಜೀಪ್ ಉದ್ಯಾವರ ಸಮೀಪ ಇದೇ ಸ್ಥಿತಿಯಲ್ಲಿ ಪತ್ತೆಗೊಂಡು ವಿವಾದವಾಗಿತ್ತು. ಕಂಡ ಕಂಡಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಹೋಗುವಷ್ಟು ಬೇಜವಾಬ್ಥಾರಿತನ ಪಂಚಾಯತಿನ ಅಧಿಕೃತರದ್ದಾದರೆ ಪಂಚಾಯತಿನ ಆಡಳಿತ ವೈಖರಿ ಹೇಗಿರಬಹುದು ಎಂಬುದನ್ನು ಊಹಿಸಿ ನೋಡಬೇಕೆ.? ಎಂದು ಜನರಾಡಿಕೊಳ್ಳುತ್ತಿದ್ದಾರೆ. ಈ ಬೊಲೆರೋ ಜೀಪನ್ನು ನಿಲ್ಲಿಸಿದ ಸಮೀಪವೇ ಹೈಮಾಸ್ಟ್ ಲೈಟೊಂದು ಹಾಳಾಗಿ ವರ್ಷಗಳೇ ಕಳೆದರೂ ಅದನ್ನು ರಿಪೇರಿ ಮಾಡಲಾಗದವರು ಈ ಜೀಪನ್ನು ಪರಿಪಾಲನೆ ಮಾಡುವುದುಂಟೇ. ಗತಿ ಗೋತ್ರವಿಲ್ಲದ ರೀತಿಯಲ್ಲಿ ಒಂದು ಸ್ಥಳಿಯಾಡಳಿತ ಸಂಸ್ಥೆಯ ಈ ಜೀಪನ್ನು ಈ ರೀತಿ ಉಪೇಕ್ಷಿಸಿ ಹೋಗುವುದೆಂದರೆ ಇದಕ್ಕಿಂತ ದೊಡ್ಡ ದುರಂತ ಇನ್ನು ಯಾವುದಿದೆ.? ಕೂಡಲೇ ಈ ಬಗ್ಗೆ ಅಧಿಕೃತರು ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.ಈ ಬಗ್ಗೆ ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆಯವರಲ್ಲಿ "ನಮ್ಮ ಮಂಜೇಶ್ವರ ನ್ಯೂಸ್ ಚಾನೆಲ್" ಇದೀಗ ವಿಚಾರಿಸಿದಾಗ ಪಂಚಾಯತ್ ನ ಬುಲೆರೋ ಗಾಡಿ ರಿಪೇರಿಗೆಂದು ಬೇಕರಿ ಜಂಕ್ಷನ್ ನಲ್ಲಿರುವ ಗ್ಯಾರೇಜ್ ಬಳಿ ನಿಲ್ಲಿಸಲಾಗಿದೆ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.