Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಆನೆಗುಂದಿ ಶ್ರೀಗಳವರ 20 ನೇ ಚಾತುರ್ಮಾಸ್ಯ ಪಡುಕುತ್ಯಾರಿನಲ್ಲಿ ಜುಲೈ 21 ರಿಂದ ಆರಂಭ.

ಆನೆಗುಂದಿ ಶ್ರೀಗಳವರ 20 ನೇ ಚಾತುರ್ಮಾಸ್ಯ ಪಡುಕುತ್ಯಾರಿನಲ್ಲಿ ಜುಲೈ 21 ರಿಂದ ಆರಂಭ.
ಉಡುಪಿ: ಪಡುಕುತ್ಯಾರು ವಿಶ್ವ ಬ್ರಾಹ್ಮಣರ ಕುಲಗುರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧಿಶ್ವರ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಕ್ರೋಧಿ ನಾಮ ಸಂವತ್ಸರದ 20 ನೇ ವರುಷದ ಚಾತುರ್ಮಾಸ್ಯ ವ್ರತಾಚರಣೆಯು 2024 ರ ಜುಲೈ 21 ರಿಂದ ಸೆಪ್ಟಂಬರ್ 18 ರ ತನಕ ಪಡುಕುತ್ಯಾರಿನ ಶ್ರೀಮತ್ ಆನೆಗುಂದಿ ಮಹಾಸಂಸ್ಥಾನದಲ್ಲಿ ನಡೆಯಲಿದೆ. ಜುಲೈ 21ರಂದು ಸಮಾಜದ ಎಲ್ಲಾ ಹಿರಿಯ ಕಿರಿಯ ವೈದಿಕರು, ಮಠದ ವಿದ್ಯಾರ್ಥಿಗಳು, ಭಕ್ತಾದಿಗಳ ಉಪಸ್ಥಿತಿಯಲ್ಲಿ ಆನೆಗುಂದಿಶ್ರೀಗಳವರ ಚಾತುರ್ಮಾಸ್ಯ ವ್ರತ ಸಂಕಲ್ಪ, ಶ್ರೀಕರಾರ್ಚಿತ ದೇವತಾ ಪೂಜೆ, ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ಗುರುಪಾದ ಪೂಜೆ ನಡೆಯಲಿದೆ. ಮದ್ಯಾಹ್ನ 12 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ: ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ, ಕಟಪಾಡಿ ಹಾಗೂ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ಶ್ರೀ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸುವರು. ಮುಖ್ಯ ಅತಿಥಿಗಳಾಗಿ ಕಾಫು ವಿದಾನ ಸಭಾ ಕ್ಷೇತ್ರ ಶಾಸಕ ಶ್ರೀ ಸುರೇಶ್‌ ಶೆಟ್ಟಿ ಗುರ್ಮೆ ಭಾಗವಹಿಸುವರು. ದಕ್ಷಿಣ ಕನ್ನಡ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಮಂಗಳೂರಿನ ಸಹಾಯಕ ಅಭಿಯಂತರರಾದ ಶ್ರೀ ಡಿ. ಎಂ. ಶಿವಪ್ರಸನ್ನ, ವಿಶ್ವಕರ್ಮ ಸಹಕಾರ ಬ್ಯಾಂಕ್‌ ಮಂಗಳೂರು ಅಧ್ಯಕ್ಷ ಡಾ. ಎಸ್‌ ಆರ್‌ ಹರೀಶ್‌ ಆಚಾರ್ಯ ಜಲಕದಕಟ್ಟೆ, ಎಸ್ ಕೆ. ಜಿ ಐ ಕೋ ಆಪ್‌ ಸೊಸೈಟಿ ಮಂಗಳೂರು ಅಧ್ಯಕ್ಷ ಶ್ರೀ ಪಿ. ಉಪೇಂದ್ರ ಆಚಾರ್ಯ ಪೆರ್ಡೂರು, ಅಕ್ಷಯಾ ಜ್ಯುವೆಲ್ಲರಸ್‌ ದೋಹಾ ಕತಾರ್‌ ಆಡಳಿತ ನಿರ್ದೇಶಕರ ಶ್ರೀ ಕೆ.ವಿಶ್ವನಾಥ ರಾವ್ , ಕುತ್ಯಾರು ಗ್ರಾಮ ಪಂಚಾಯತು ಅಧ್ಯಕ್ಷ ಶ್ರೀ ಜನಾರ್ದನ ಆಚಾರ್ಯ ಕುತ್ಯಾರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪಡುಕುತ್ಯಾರು ಗೌರವಾಧ್ಯಕ್ಷ ಶ್ರೀ ಪಿ.ವಿ ಗಂಗಾಧರ ಆಚಾರ್ಯ, ಉಡುಪಿ ಇವರ ಘನ ಉಪಸ್ಥಿತಿಯಲ್ಲಿ ನಡೆಯುವ ಸಭೆಯಲ್ಲಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಆನೆಗುಂದಿ ಅಧ್ಯಕ್ಷ ಶ್ರೀ ದಿನೇಶ್‌ ಆಚಾರ್ಯ ಪಡುಬಿದ್ರಿ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಮಂಗಳೂರು ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿ ನಿವೃತ್ತ ತಹಸಿಲ್ದಾರ್‌ ಶ್ರೀ ಉಮೇಶ್‌ ಆಚಾರ್ಯ ಪಾಂಡೇಶ್ವರ, ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಕಟಪಾಡಿ ಆಡಳಿತ ಮೊಕ್ತೇಸರ್‌ ಶ್ರೀ ಮುರಹರಿ ಆಚಾರ್ಯ, ಉಡುಪಿ, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ ಕಾರ್ಕಳ ಆಡಳಿತ ಮೊಕ್ತೇಸರ್‌ ಶಿಲ್ಪಿ ರಾಮಚಂದ್ರ ಆಚಾರ್ಯ, ಕಾರ್ಕಳ, ಶ್ರೀಕರಸ್ಥಳ ನಾಗಲಿಂಗಸ್ವಾಮೀ ಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ ಆಡಳಿತ ಮೊಕ್ತೇಸರ್, ಆನೆಗುಂದಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀ ಚಂದ್ರಯ್ಯ ಆಚಾರ್ಯ ಕಳಿ, ಶ್ರೀಗುರುಮಠ ಕಾಳಿಕಾಂಬಾ ದೇವಸ್ಥಾನ ಮೂಡಬಿದ್ರೆ ಆಡಳಿತ ಮೊಕ್ತೇಸರ್‌ ಶ್ರೀ ಪುರೋಹಿತ್ ಜಯಕರ ಆಚಾರ್ಯ, ಮೂಡಬಿದ್ರೆ, ಶ್ರೀ ಕಾಳಿಕಾಂಬಾ ಕಮಠೇಶ್ವರ ದೇವಸ್ಥಾನ ಗೋಕರ್ಣ, ಆಡಳಿತ ಮೊಕ್ತೇಸರ ಆನೆಗುಂದಿ ಪ್ರತಿಷ್ಠಾನ ಉಪಾಧ್ಯಕ್ಷ ಶ್ರೀ ಮಧುಕರ ಚಂದ್ರಶೇಖರ ಆಚಾರ್ಯ, ಹೊನ್ನಾವರ, ಶ್ರೀ ಕಾಳಿಕಾಂಬಾ ದೇವಸ್ಥಾನ ಭಟ್ಕಳ ಆಡಳಿತ ಮೊಕ್ತೇಸರ ಶ್ರೀ ಗಜಾನನ ಎನ್‌ ಆಚಾರ್ಯ, ನೀರಕಂಠ, ಶಿರಾಲಿ, ಶ್ರೀ ಕಾಳಿಕಾಂಬಾ ದೇವಸ್ಥಾನ ಕೊಲಕಾಡಿ ಆಡಳಿತ ಮೊಕ್ತೇಸರ ಶ್ರೀ ಕೆ. ಸುಧಾಕರ ಆಚಾರ್ಯ, ಕೊಲಕಾಡಿ, ಶ್ರೀ ಕಾಳಿಕಾಂಬಾ ದೇವಸ್ಥಾನ ಕಾಪು ಮೊಕ್ತೇಸರ ಶ್ರೀ ಅಚ್ಯುತ ಆಚಾರ್ಯ, ಕಾಪು, ನೆಲ್ಲಿಸ್ಥಳ ಶ್ರೀ ಕಾಳಿಕಾಂಬಾ ದೇವಸ್ಥಾನ ಕೋಟೆಕಾರು ಅಧ್ಯಕ್ಷ ಶ್ರೀ ಸುಂದರ ಆಚಾರ್ಯ, ಕೋಟೆಕಾರು, ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನ ಬಂಗ್ರಮಂಜೇಶ್ವರ ಅಧ್ಯಕ್ಷ ಶ್ರೀ ಬಿ.ಎಂ ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಕಾರ್ಳೆ ಶ್ರೀ ಕಾಳಿಕಾಂಬಾ ದೇವಸ್ಥಾನ ಆರಿಕ್ಕಾಡಿ ಕುಂಬಳೆ ಅಧ್ಯಕ್ಷ ಶ್ರೀ ಜನಾರ್ದನ ಆಚಾರ್ಯ ಆರಿಕ್ಕಾಡಿ, ಶ್ರೀ ಕಾಳಿಕಾಂಬಾ ಮಠ, ಮಧೂರು ಅಧ್ಯಕ್ಷ ನ್ಯಾಯವಾದಿ ಕೆ. ಪ್ರಭಾಕರ ಆಚಾರ್ಯ ಕೋಟೆಕಾರು, ಶ್ರೀಮತ್ ಪರಶಿವ ವಿಶ್ವಕರ್ಮೇಶ್ವರ ದೇವಸ್ಥಾನ, ಮಾವುಂಗಾಲ್, ಕಾಞಂಗಾಡು ಅಧ್ಯಕ್ಷ ಶ್ರೀ ಪುರುಷೋತ್ತಮ ಆಚಾರ್ಯ ಕಾಞಂಗಾಡು., ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ನವಿಮುಂಬಯಿ ಅಧ್ಯಕ್ಷ ಸಿ.ಎ ಶ್ರೀಧರ ಆಚಾರ್ಯ ಪನ್ವೇಲ್, ಶ್ರೀ ಕಾಳಿಕಾಂಬಾ ಕಮಠೇಶ್ವರ ದೇವಸ್ಥಾನ ನಾಯಂಡರಹಳ್ಳಿ ಬೆಂಗಳೂರು ಅಧ್ಯಕ್ಷ ಶ್ರೀ ಚಿಕ್ಕಣ್ಣ ಆಚಾರ್ ಬೆಂಗಳೂರು, ನಾಲ್ಕೂರು ಪಂಜುರ್ಲಿ ದೈವಸ್ಥಾನ ಪಡುಪಣಂಬೂರು ಅಧ್ಯಕ್ಷ ಶ್ರೀ ಜಗದೀಶ್ ಆಚಾರ್ಯ ಪಡುಪಣಂಬೂರು, ಶ್ರಿ ಮಹಾಕಾಳಿ ದೇವಸ್ಥಾನ ಶೆಡಗೇರಿ ಅಂಕೋಲಾ ಅಧ್ಯಕ್ಷ ಶ್ರೀ ದತ್ತಾ ಎಂ ಆಚಾರ್ಯ ಅಂಕೋಲಾ, ಶ್ರೀ ಕಾಳಿಕಾ ದೇವಸ್ಥಾನ ಹಳೇ ಹುಬ್ಬಳ್ಳಿ ಅಧ್ಯಕ್ಷ ಶ್ರೀ ನಾಗರಾಜ ಹಾವನೂರು, ಶ್ರೀ ಕಾಳಿಕಾದೇವಿ ದೇವಸ್ಥಾನ ಮಂಗಳವಾರ ಪೇಟೆ ದಾರವಾಡ ಅಧ್ಯಕ್ಷ ಶ್ರೀ ಗುರುನಾಥ ಪಟ್ಟಣಕೋಡಿ, ಆನೆಗುಂದಿ ಪ್ರತಿಷ್ಠಾನ ಉಪಾಧ್ಯಕ್ಷ ಶ್ರೀ ಕೆ.ನಾಗರಾಜ ಆಚಾರ್ಯ ಕಾಡಬೆಟ್ಟು ಉಡುಪಿ, ಆನೆಗುಂದಿ ಶ್ರೀ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ (ರಿ) ಅಸೆಟ್ ಅಧ್ಯಕ್ಷ , ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲಾ ಪಡುಕುತ್ಯಾರು ಪ್ರಧಾನ ಸಂಚಾಲಕ ಶ್ರೀ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಪಡುಕುತ್ಯಾರು ಅಧ್ಯಕ್ಷ ಶ್ರೀ ಗಣೇಶ್ ಆಚಾರ್ಯ ಕೆಮ್ಮಣ್ಣು, ಆನೆಗುಂದಿ ಶ್ರೀ ಸರಸ್ವತೀ ಗೋವು ಮತ್ತು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ (ರಿ) ಪಡುಕುತ್ಯಾರು ಅಧ್ಯಕ್ಷ ಶ್ರೀ ಸುಂದರ ಆಚಾರ್ಯ ಬೆಳುವಾಯಿ, ಶ್ರೀ ಸರಸ್ವತೀ ಮಾತೃ ಮಂಡಳಿ ಪಡುಕುತ್ಯಾರು ಅಧ್ಯಕ್ಷೆ, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಶ್ರೀ ಸರಸ್ವತೀ ಪೂರ್ವ ಛಾತ್ರ ಸಂಘ ಪಡುಕುತ್ಯಾರು ಅಧ್ಯಕ್ಷ ವಿದ್ವಾನ್‌ ಬ್ರಹ್ಮಶ್ರೀ ಕೇಶವ ಶರ್ಮಾ ಇರುವೈಲು ಉಪಸ್ಥಿತರಿರುವರು. ನಂತರ ಜಗದ್ಗುರುಗಳವರಿಂದ ಅನುಗ್ರಹ ಮಂತ್ರಾಕ್ಷತೆ, ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಚಾತುರ್ಮಾಸ್ಯದ ವೇಳೆ ವಿಶೇಷ ಕಾರ್ಯಕ್ರಮಗಳು ಈ ಬಾರಿ ಚಾತುರ್ಮಾಸದ ವೇಳೆ ಶ್ರೀ ಚಕ್ರ ಅರ್ಚನೆ, ದಶ ಸಹಸ್ರ ಮೋದಕ ಮಹಾಗಣಪತಿ ಯಾಗ, ಸಾಮೂಹಿಕ ಆಶ್ಲೇಷ ಬಲಿ ಕಾರ್ಯಕ್ರಮಗಳು ಶ್ರೀ ಸರಸ್ವತೀ ಪೂರ್ವ ಚಾತ್ರ ಸಂಘದ ನೇತೃತ್ವದಲ್ಲಿ ನಡೆಯಲಿದೆ. ಚಾತುರ್ಮಾಸ್ಯದ ೨ ತಿಂಗಳ ಅವಧಿಯನ್ನು ವ್ಯವಸ್ಥಿತ ನಿರ್ವಹಣೆಗಾಗಿ ಒಂದು ವಾರದಂತೆ ಮಹಾಸಂಸ್ಥಾನದ ವ್ಯಾಪ್ತಿಯ ೨೧ ದೇವಸ್ಥಾನಗಳಿಗೆ ವಿಭಜಿಸಿ ನೀಡಲಾಗಿದ್ದು ಆಯಾ ದೇವಸ್ಥಾನದ ನೇತೃತ್ವದಲ್ಲಿ ಪ್ರತೀ ದಿನ ಭಜನೆ, ಗುರುಪಾದುಕಾ ಪೂಜೆ, ಪಾರಾಯಣ, ಸಾಂಸ್ಕ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ಶನಿವಾರ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳು ಭಾನುವಾರ ಗಣ್ಯ ವ್ಯಕ್ತಿಗಳು, ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ. ಯುವಕರ, ಮಹಿಳೆಯರ ವೈದಿಕರ, ಸಂಘ ಸಂಸ್ಥೆಗಳ ಸೇರಿದಂತೆ ವಿವಿಧ ವಿಭಾಗಗಳ ಸಮಾವೇಶಗಳೂ ನಡೆಯಲಿವೆ.
ಆನೆಗುಂದಿ ಶ್ರೀಗಳವರ ಚಾತುರ್ಮಾಸ್ಯ ವ್ರತ ಸಂಕಲ್ಪ ಪೂರ್ವಕ್ಷೇತ್ರ ಸಂದರ್ಶನ ಪರಿಸಮಾಪ್ತಿ ಕಟಪಾಡಿ: ಆನೆಗುಂದಿಶ್ರೀಗಳವರ ೨೦ನೇ ಚಾತುರ್ಮಾಸ್ಯದ ಅಂಗವಾಗಿ ಚಾತುರ್ಮಾಸ್ಯ ವ್ರತ ಸಂಕಲ್ಪ ಪೂರ್ವಕ್ಷೇತ್ರ ಸಂದರ್ಶನವು ಜೂನ್‌ ೧೪ರಂದು ಹಳೆಯಂಗಡಿಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠದಿಂದ ಆರಂಭಗೊಂಡು, ಪಡುಪಣಂಬೂರು, ಹುಬ್ಬಳ್ಳಿ, ದಾರವಾಡ, ಆನೆಗುಂದಿ, ಅಥಣಿ, ವಿಜಯಪುರ,ಕೋಟೆಕಾರು, ಬಂಗ್ರಮಂಜೇಶ್ವರ, ಆರಿಕ್ಕಾಡಿ ಕುಂಬಳೆ, ಉಪ್ರಳ್ಳಿ, ಬಾರ್ಕೂರು, ಕಾಞಂಗಾಡು, ಮಧೂರು, ಮೂಡಬಿದ್ರೆ, ಕಾರ್ಕಳ, ಕೊಲಕಾಡಿ,ಮಂಗಳೂರು, ಭಟ್ಕಳ,ಗೋಕರ್ಣ,ಅಂಕೋಲಾ,ಮಾಜಲಿ ಕಾರವಾರ,ಪನ್ವೇಲ್‌ ಮುಂಬಯಿ, ನಡೆಸಲಾಗಿ ಇಂದು ಕಾಪು ಹಾಗೂ ಕಟಪಾಡಿಯಲ್ಲಿ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಪರಿಸಮಾಪ್ತಿಗೊಂಡಿತು. ಚಾತುರ್ಮಾಸ್ಯ ಕಾರ್ಯಕ್ರಮವನ್ನು ಭಕ್ತಾದಿಗಳು ತನು,ಮನ,ಧನಗಳೊಂದಿಗೆ ಸಹಕರಿಸಿ ಯಶಸ್ವಿಗೊಳಿಸಬೇಕೆಂದು ಚಾತುರ್ಮಾಸ್ಯವ್ರತ ನಿರ್ವಹಣಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.