ಪಂಚಾಯತ್ ನ ವ್ಯಾಪ್ತಿ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟಲು ಮಂಜೇಶ್ವರ ಗ್ರಾಮ ಪಂಚಾಯತ್ ಆರೋಗ್ಯ ಇಲಾಖೆ ಸಭೆ.
ಜುಲೈ 08, 2024
0
ಪಂಚಾಯತ್ ನ ವ್ಯಾಪ್ತಿ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟಲು ಮಂಜೇಶ್ವರ ಗ್ರಾಮ ಪಂಚಾಯತ್ ಆರೋಗ್ಯ ಇಲಾಖೆ ಸಭೆ.
ಮಂಜೇಶ್ವರ: ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ, ಮುಂಜಾಗೃತ ಕ್ರಮದಂಗವಾಗಿ ಆಶಾ ಕಾರ್ಯಕರ್ತರ ಅವಲೋಕನ ಸಭೆ ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಇಂದು ಜರಗಿತು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೆಂತೆರೋ ಅಧ್ಯಕ್ಷತೆ ವಹಿಸಿದ್ದರು.
ಮೆಡಿಕಲ್ ಆಫೀಸರ್ ಡಾ ಪ್ರಭಾಕರ್ ಶೆಟ್ಟಿ ರೋಗಗಳ ಬಗ್ಗೆ ಮಾಹಿತಿ ನೀಡಿದರು, ತೆಗೆಯಬೇಕಾದ ಮುಂಜಾಗ್ರತೆಗಳ ಬಗ್ಗೆ ಅವಲೋಕಿಸಿದರು. ಆಶಾ ಕಾರ್ಯಕರ್ತರ ಕರ್ತವ್ಯವನ್ನು ಅಭಿನಂದಿಸಲಾಯಿತು. ಮಂಜೇಶ್ವರ ಅರೋಗ್ಯ ಇಲಾಖೆ ಮತ್ತು ಪಂಚಾಯತ್ ಜಂಟಿಯಾಗಿ ಸಾಂಕ್ರಾಮಿಕ ರೋಗ ತಡೆಯುವಿಕೆಗೆ ಮತ್ತು ಮಾಹಿತಿ ನೀಡಲು ತೀರ್ಮಾನಿಸಲಾಯಿತು. ರಸ್ತೆ ಬದಿಗಳಲ್ಲಿ, ಸಾರ್ವಜನಿಕ ಸ್ಥಳಗಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ತೀರ್ಮಾನಿಸಲಾಯಿತು. ಆರೋಗ್ಯ ದೃಷ್ಠಿಯಿಂದ ಆಹಾರ ಸೇವನಾ ಕೇಂದ್ರಗಳಲ್ಲಿ, ಹೋಟೆಲ್, ತಟ್ಟುಕಡಾ, ಮದುವೆ ಸಭಾಂಗಣಗಳಲ್ಲಿ ಆರೋಗ್ಯ ಇಲಾಖೆ, ಹರಿತ ಕರ್ಮಸೇನೆ, ಆಶಾ ವರ್ಕರ್, ಪಂಚಾಯತ್ ನೇತೃತ್ವದಲ್ಲಿ ಪರಿಶೋಧನೆ, ದಾಳಿ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಮತ್ತು ತ್ಯಾಜ್ಯ ಎಸೆಯುವುದು ಕಂಡರೆ ಅಂತವರ ಮಾಹಿತಿ ನೀಡಲು ಸಾರ್ವಜನಿಕರು ಮುಂದೆ ಬರಲು ಸಾರ್ವಜನಿಕರಲ್ಲಿ ಪಂಚಾಯತ್ ವಿನಂತಿಸಿದೆ. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಮೊಹಮ್ಮದ್ ಸಿದ್ದಿಕ್, ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ ಬಡಾಜೆ, ಸದಸ್ಯರಾದ ಆದರ್ಶ ಬಿ.ಎಂ, ರೇಖಾ ಕೀರ್ತಿಶ್ವರ, ಲಕ್ಷ್ಮಣ ಬಿ.ಎಂ, ಆರೋಗ್ಯ ಇಲಾಖೆಯ
ಅಖಿಲ್, ಜ್ಯೋತಿ, ಸಪ್ನಾ ಸಿಸ್ಟರ್ ಉಪಸ್ಥಿತರಿದ್ದರು


