ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಮಂಜೇಶ್ವರದ ಬೀದಿ ಬದಿ ವ್ಯಾಪಾರಿಗಳಿಂದ ಮಂಜೇಶ್ವರ ಪಂಚಾಯತ್ ಕಛೇರಿ ಎದುರುಗಡೆ ಪ್ರತಿಭಟನೆ.
ಜುಲೈ 06, 2024
0
ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಮಂಜೇಶ್ವರದ ಬೀದಿ ಬದಿ ವ್ಯಾಪಾರಿಗಳಿಂದ ಮಂಜೇಶ್ವರ ಪಂಚಾಯತ್ ಕಛೇರಿ ಎದುರುಗಡೆ ಪ್ರತಿಭಟನೆ.
ಮಂಜೇಶ್ವರ: ಬೀದಿ ಬದಿ ವ್ಯಾಪಾರಿಗಳು ಮಂಜೇಶ್ವರ ಪಂಚಾಯತ್ ಕಛೇರಿ ಎದುರುಗಡೆ ಪ್ರತಿಭಟನೆ ನಡೆಸಿದರು. ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣೆ ಎಲ್ಲಾ ಪಂಚಾಯತ್ ಮುನ್ಸಿಪಾಲಿಟಿಗಳು ಜಾರಿಗೊಳಿಸಬೇಕು, ಕಡಿಮೆ ಬಡ್ಡಿ ದರದಲ್ಲಿ ಸ್ವಂತ ಜಾಮೀನುನಲ್ಲಿ ಬ್ಯಾಂಕ್ ಗಳು ಸಾಲ ನೀಡಬೇಕು. ಬೀದಿ ಬದಿ ವ್ಯಾಪಾರಿಗಳನ್ನು ತೆರವು ಗೊಳಿಸುವುದನ್ನು ನಿಲ್ಲಿಸಬೇಕು, ವೆಂಟಿಂಗ್ ಸಮಿತಿಗಳಲ್ಲಿ ಪಿ.ಡಬ್ಲ್ಯೂ.ಡಿ ಉದ್ಯೋಗಸ್ತರನ್ನು ನೇಮಿಸಬೇಕು. ಅರ್ಹವಾದ ಎಲ್ಲಾ ಕಾರ್ಮಿಕರಿಗೆ ಐಡೆಂಟಿ ಕಾರ್ಡ್ ಕೊಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಸಿ. ಐ.ಟಿ.ಯು ಮಂಜೇಶ್ವರ ಬೀದಿ ವ್ಯಾಪಾರಿಗಳ ಯೂನಿಯನ್ ನೇತೃತ್ವದಲ್ಲಿ ಮಂಜೇಶ್ವರ ಪಂಚಾಯತ್ ಕಚೇರಿಗೆ ನಡೆಸಿದ ಪ್ರತಿಭಟನೆಯನ್ನು ಸಿ. ಐ.ಟಿ.ಯು ಜಿಲ್ಲಾ ಉಪಾಧ್ಯಕ್ಷೆ ಕಾಂ. ಬೇಬಿ ಶೆಟ್ಟಿ ಉದ್ಘಾಟಿಸಿ, ಮಾತನಾಡಿದರು. ಪುರುಷೋತ್ತಮ ಪಾವೂರು ಅಧ್ಯಕ್ಷತೆ ವಹಿಸಿದ್ದರು. ಸಿ. ಐ.ಟಿ.ಯು ಏರಿಯಾ ಕಾರ್ಯದರ್ಶಿ ಪ್ರಶಾಂತ್ ಕನಿಲ ಪಂಚಾಯತ್ ಸದಸ್ಯೆ ಯಾದ ಜಯಂತಿ ಕಾಜೂರ್ ಮೊದಲಾದವರು ಮಾತನಾಡಿದರು. ರಾಜನ್ ಸ್ವಾಗತಿಸಿದರು.


