Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಹೊಸಂಗಡಿ "ವಿಶ್ವಕರ್ಮ ಸ್ಟೋರ್" ನ ಮಾಲಕ ರಾಮತ್ತಮಜಾಲ್ ನಿವಾಸಿ ಚಂದ್ರಶೇಖರ ಆಚಾರ್ಯ (73) ಅಸೌಖ್ಯದಿಂದ ನಿಧನ.

ಹೊಸಂಗಡಿ "ವಿಶ್ವಕರ್ಮ ಸ್ಟೋರ್" ನ ಮಾಲಕ ರಾಮತ್ತಮಜಾಲ್ ನಿವಾಸಿ ಚಂದ್ರಶೇಖರ ಆಚಾರ್ಯ (73) ಅಸೌಖ್ಯದಿಂದ ನಿಧನ.
ಮಂಜೇಶ್ವರ: ಹೊಸಂಗಡಿ ಬಳಿಯ ರಾಮತ್ತಮಜಾಲ್ ನಿವಾಸಿ ಚಂದ್ರಶೇಖರ ಆಚಾರ್ಯ (73) ಅಸೌಖ್ಯದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇಂದು ಮುಂಜಾನೆ 3.30ಕ್ಕೆ ನಿಧನರಾದರು. ಮೃತರು ಈ ಮೊದಲು ವಿದೇಶದಲ್ಲಿ ಕಂಪೆನಿಯೊಂದರಲ್ಲಿ ಬಡಗಿ ವೃತ್ತಿಯಲ್ಲಿದ್ದು, ಬಳಿಕ ಊರಿಗೆ ಆಗಮಿಸಿ ಹೊಸಂಗಡಿ ಶ್ರೀ ವೀರಭದ್ರ ದೇವಸ್ಥಾನ ಬಳಿ "ವಿಶ್ವಕರ್ಮ ಸ್ಟೋರ್" ಎಂಬ ಸಂಸ್ಥೆಯನ್ನು ಹೊಂದಿ, ಅಡುಗೆ ಪಾತ್ರೆಗಳ ಸಾಮಗ್ರಿಗಳನ್ನು ಬಾಡಿಗೆಗೆ ವಿತರಿಸುತ್ತಿದ್ದರು. ಮೃತರು ಪೂಕಟ್ಟೆ ದಿ. ದಾಮೋದರ - ದಿ. ಕಮಲ ದಂಪತಿಗಳ ಪುತ್ರನಾಗಿದ್ದು, ಪತ್ನಿ: ಶ್ರೀಮತಿ ವೇದಾವತಿ (ಮಾಜಿ ಅಧ್ಯಕ್ಷೆ: ಶ್ರೀ ಕಾಳಿಕಾ ಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘ), ಮಕ್ಕಳಾದ: ವಾಗೇಶ ಆಚಾರ್ಯ (ದುಬೈ), ಚೇತನಾ, ಅಳಿಯ: ಪ್ರಸನ್ನ ಆಚಾರ್ಯ ಅಮೈ ಕಾಸರಗೋಡು, ಸೊಸೆ: ಅಕ್ಷತಾ, ಸಹೋದರಿ: ಶೀಲಾ ಆಚಾರ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ (ತಾ: 31.07.2024 ಬುಧವಾರ) ಮಧ್ಯಾಹ್ನ 12. ಗಂಟೆಗೆ ರಾಮತ್ತಮಜಾಲ್ ನಲ್ಲಿರುವ ಸಾರ್ವಜನಿಕ ರುದ್ರ ಭೂಮಿಯಲ್ಲಿ ನಡೆಯಲಿದೆ. ಎಂದು ಮನೆಯವರು ತಿಳಿಸಿದ್ದಾರೆ. ಮೃತರ ನಿಧನಕ್ಕೆ ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿ, ಓಜ ಸಾಹಿತ್ಯ ಕೂಟ, ಶ್ರೀ ಕಾಳಿಕಾ ಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘ, ಶ್ರೀ ಗುರು ಸೇವಾ ಪರಿಷತ್, ಸ್ವಸ್ತಿಕ್ ಫ್ರೆಂಡ್ಸ್ ಶ್ರೀ ವೀರಭದ್ರ ದೇವಸ್ಥಾನ ಬಳಿ, ಗಾಢವಾದ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.