ಮಂಜೇಶ್ವರ ಕುಂಡುಕೊಳಕೆ ರೈಲ್ವೆ ಹಳಿಯ ಚರಂಡಿಗಳ ಅವ್ಯವಸ್ಥೆ, ಮಳೆಗಾಲದಲ್ಲಿ ಚರಂಡಿಯಲ್ಲಿ ಸಾಗಬೇಕಾದ ನೀರು ಪರಿಸರದಲ್ಲಿ ಠಿಕಾಣಿ. ಚರಂಡಿ ದುರಸ್ತಿಗೆ ಹಾಗೂ ಮಂಜೇಶ್ವರ ರೈಲು ನಿಲ್ದಾಣದಲ್ಲಿ ಹೆಚ್ಚಿನ ರೈಲು ನಿಲುಗಡೆಗೆ ಆಗ್ರಹಿಸಿ ಮಂಜೇಶ್ವರ ಪಂಚಾಯತ್ ಎಸ್.ಡಿ. ಪಿ. ಐ ಸಮಿತಿಯಿಂದ ರೈಲ್ವೆ ಸಚಿವರಿಗೆ ಮನವಿ.
ಜುಲೈ 17, 2024
0

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ಗೊಳಪಟ್ಟ 20 ನೇ ವಾರ್ಡ್ ಕುಂಡುಕೊಳಕೆಯಲ್ಲಿ ಹಾದು ಹೋಗುವ ರೈಲ್ವೆ ಹಳಿಯ ಪಕ್ಕ ಇರುವ ಚರಂಡಿಯಲ್ಲಿ ಕಸ, ಪ್ಲಾಸ್ಟಿಕ್ ಗಳು ತುಂಬಿಕೊಂಡು ನೀರು ಹರಿದು ಹೋಗಲು ಸಾಧ್ಯವಾಗದೆ ಪರಿಸರ ಪ್ರದೇಶ ಜಲಾವೃತವಾಗಿದೆ. ಈ ಚರಂಡಿಯು ರೈಲ್ವೆ ಇಲಾಖೆಗೆ ಸೇರಿದ್ದು, ಇದೀಗ ಸುರಿಯುತ್ತಿರುವ ಮಳೆಗೆ ಕಟ್ಟಿ ನಿಂತ ಪ್ಲಾಸ್ಟಿಕ್ ಕಸ ಕಡ್ಡಿಗಳನ್ನು ತೆರವುಗೊಳಿಸಿ, ನೀರು ನಿಲ್ಲದಂತೆ ಹೊಸ ಡ್ರೈನೇಜ್ ಕೂಡಾ ಅಳವಡಿಸುವಂತೆ ಆಗ್ರಹಿಸಿ ಮತ್ತು ಮಂಜೇಶ್ವರ ರೈಲ್ವೇ ಸ್ಟೇಶನ್ ನಲ್ಲಿ ಕೇರಳ/ಕರ್ನಾಟಕ ಎರಡೂ ಭಾಗದಿಂದ ಸಂಚರಿಸುವ ಹೆಚ್ಚಿನ ರೈಲುಗಳ ನಿಲುಗಡೆಗೆ ಅನುವು ಮಾಡಿಕೊಡುವಂತೆ ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣನವರಿಗೆ ಎಸ್.ಡಿ.ಪಿ. ಐ ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಮಂಗಳೂರು ಸರ್ಕ್ಯೂಟ್ ಹೌಸ್ ನಲ್ಲಿ ಇಂದು ಬೆಳಗ್ಗೆ ಭೇಟಿ ನೀಡಿ ಮನವಿ ಸಲ್ಲಿಸಲಾಯಿತು. ಈ ವೇಳೆ ಮಂಜೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ, ಎಸ್.ಡಿ. ಟಿ. ಯು ಜಿಲ್ಲಾ ಕಾರ್ಯದರ್ಶಿ ಖಾದರ್ ಹೊಸಂಗಡಿ, ಎಸ್. ಡಿ. ಪಿ. ಐ ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷ ಇಕ್ಬಾಲ್ ಕುಂಜತ್ತೂರು ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.