ಅಸೌಖ್ಯದಿಂದ ಬಳಲುತ್ತಿದ್ದ ಉಪ್ಪಳ ಕೊಂಡೆವೂರು ಮಜಾಲ್ ನಿವಾಸಿ, ಆಂಗ್ಲಭಾಷಾ ಅಧ್ಯಾಪಕಿ ಶ್ರೀಮತಿ ಮಲ್ಲಿಕಾ ಆಚಾರ್ಯ (51) ನಿಧನ.
ಏಪ್ರಿಲ್ 07, 2024
0
ಅಸೌಖ್ಯದಿಂದ ಬಳಲುತ್ತಿದ್ದ ಉಪ್ಪಳ ಕೊಂಡೆವೂರು ಮಜಾಲ್ ನಿವಾಸಿ, ಆಂಗ್ಲಭಾಷಾ ಅಧ್ಯಾಪಕಿ ಶ್ರೀಮತಿ ಮಲ್ಲಿಕಾ ಆಚಾರ್ಯ (51)
ನಿಧನ.
ಉಪ್ಪಳ: ಅಸೌಖ್ಯದಿಂದ ಬಳಲುತ್ತಿದ್ದ ಉಪ್ಪಳ ಕೊಂಡೆವೂರು ಮಜಾಲ್ ನಿವಾಸಿ, ಆಂಗ್ಲಭಾಷಾ ಅಧ್ಯಾಪಕಿ ಶ್ರೀಮತಿ ಮಲ್ಲಿಕಾ (51) ಇಂದು ಬೆಳಗ್ಗೆ ನಿಧನರಾದರು. ಉಪ್ಪಳ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಚಿನ್ನದ ಅಂಗಡಿಯಲ್ಲಿ ಕುಸುರಿ ಕೆಲಸ ನಿರ್ವಹಿಸುತ್ತಿರುವ ಚಂದ್ರ ರಾಜ ಆಚಾರ್ಯರ ಧರ್ಮಪತ್ನಿಯಾಗಿರುವ ಶ್ರೀಮತಿ ಮಲ್ಲಿಕಾರವರು ಕಳೆದ ಹಲವು ವರ್ಷಗಳಿಂದ ಉಪ್ಪಳದ ಪ್ರಸಿದ್ಧ ವಿದ್ಯಾ ಸಂಸ್ಥೆಯೊಂದರಲ್ಲಿ ಆಂಗ್ಲ ಭಾಷೆಯ ಪಠ್ಯದ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿರುವ ಮಲ್ಲಿಕಾರ ಅಕಾಲ ಅಗಲುವಿಕೆ ಶಾಲಾ ಮಕ್ಕಳಲ್ಲಿ ಅರಗಿಸಲಾರದಷ್ಟು ನೋವನ್ನು ತಂದಿದೆ. ಮೃತರು ತಂದೆ, ತಾಯಿ, ಪತಿ, ಮಕ್ಕಳಾದ: ರಿತಿಕ್, ರಿಷಿತ ಹಾಗೂ ಏಕ ಸಹೋದರಿ, ಮತ್ತು ಸಹೋದರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ಇಂದು ಸಂಜೆ ಚೆರುಗೋಳಿ ಸ್ಮಶಾನದಲ್ಲಿ ನಡೆಯಿತು.

