Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

"100 ನೇ" ಶತಮಾನೋತ್ಸವದ ಸಂಭ್ರಮದಲ್ಲಿ ಮಂಜೇಶ್ವರದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಶ್ರೀಮತ್ ಅನಂತೇಶ್ವರ ದೇವಳದ ಶಾಲೆ. 2025 ಮೇ ತಿಂಗಳಲ್ಲಿ ಬೃಹತ್ ಕಾರ್ಯಕ್ರಮ ನಡೆಸಲು ನಿರ್ಧಾರ. ಇಂದು ಶತಮಾನೋತ್ಸವದ ಲಾಂಛನ ಬಿಡುಗಡೆ ಹಾಗೂ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಪೂರ್ವಭಾವಿ ಸಿದ್ಧತಾ ಸಭೆ.

"100 ನೇ" ಶತಮಾನೋತ್ಸವದ ಸಂಭ್ರಮದಲ್ಲಿ ಮಂಜೇಶ್ವರದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಶ್ರೀಮತ್ ಅನಂತೇಶ್ವರ ದೇವಳದ ಶಾಲೆ. 2025 ಮೇ ತಿಂಗಳಲ್ಲಿ ಬೃಹತ್ ಕಾರ್ಯಕ್ರಮ ನಡೆಸಲು ನಿರ್ಧಾರ. ಇಂದು ಶತಮಾನೋತ್ಸವದ ಲಾಂಛನ ಬಿಡುಗಡೆ ಹಾಗೂ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಪೂರ್ವಭಾವಿ ಸಿದ್ಧತಾ ಸಭೆ.
ಮಂಜೇಶ್ವರ: ಮಂಜೇಶ್ವರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀಮದ್ ಅನಂತೇಶ್ವರ ದೇವಳದ ಶಾಲೆಯು 2024 - 25 ರ ಶೈಕ್ಷಣಿಕ ವರ್ಷದಲ್ಲಿ ಶತಮಾನೋತ್ಸವದ ಹೊಸ್ತಿಲಲ್ಲಿದೆ.
ಶತಮಾನೋತ್ಸವ ಕಾರ್ಯಕ್ರಮದ ಮೊದಲ ಹೆಜ್ಜೆ ಎಂಬಂತೆ,
"ಶತಮಾನೋತ್ಸವದ ಲಾಂಛನ"ವನ್ನು ದೇವಸ್ಥಾನದ ವಸಂತ ಮಂಟಪದಲ್ಲಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಟಿ. ಗಣಪತಿ ಪೈಯವರು ಇಂದು ಅನಾವರಣಗೊಳಿಸಿದರು.
ಈ ವೇಳೆ ದೇವಳದ ಖಜಾಂಚಿ ಪ್ರಶಾಂತ್ ಪೈ, ಶಾಲಾ ಮ್ಯಾನೇಜರ್ ಪ್ರಶಾಂತ್ ಹೆಗ್ಡೆ, ಶಾಲಾ ಕರಸ್ಪಾಂಡೆಂಟ್ ನಿತಿನ್ ಚಂದ್ರ ಪೈ, ದೇವಳದ ಮ್ಯಾನೇಜರ್ ರಾಹುಲ್ ಕಾಮತ್, ಮಂಜೇಶ್ವರ ಪೇಟೆಯ ಪ್ರತಿನಿಧಿ ದೇವದಾಸ ಪ್ರಭು, ಮಂಜೇಶ್ವರ ಜಿ.ಎಸ್‌.ಬಿ ಸಂಘದ ಅಧ್ಯಕ್ಷರಾದ ಪ್ರಸಾದ್ ಪ್ರಭು, ಶಾಲಾ ಎಲ್. ಪಿ ವಿಭಾಗದ ಮುಖ್ಯೋಪಾಧ್ಯಾಯರಾದ ತೇಜಸ್ ಕಿರಣ್, ಶಾಲೆಯ ಅಧ್ಯಾಪಕ ವೃಂದ, ದೇವಳದ ಅರ್ಚಕ ವೃಂದ, ದೇವಳದ ಆಚಾರ್ಯರು ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು. ಶ್ರೀಮತಿ ಗ್ರೀಷ್ಮಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಶತಮಾನೋತ್ಸವ ಕಾರ್ಯಕ್ರಮ 2025 ರ ಮೇ ತಿಂಗಳಲ್ಲಿ ನಡೆಯಲಿದೆ. ಈ ಅಭೂತ ಪೂರ್ವ ಕಾರ್ಯಕ್ರಮದ ಪೂರ್ವಭಾವಿಯಾಗಿ ಈ ವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮೊದಲ ಹಂತದ ಔಪಚಾರಿಕ ಉದ್ಘಾಟನಾ ಸಮಾರಂಭ ಮುಂದಿನ ಮೇ ತಿಂಗಳ 6 ನೇ ತಾರೀಕಿನಂದು ಶಾಲೆಯಲ್ಲಿ ಜರಗಲಿದೆ.
ಇದರ ರೂಪುರೇಷೆಗಾಗಿ ಪೂರ್ವಭಾವಿ ಸಿದ್ದತಾ ಸಭೆ ಶಾಲಾ ಮೇನೇಜರ್ ಪ್ರಶಾಂತ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಶಾಲೆಯ ಸಭಾಂಗಣದಲ್ಲಿ ಜರಗಿತು. ಶಾಲಾ ಕರಸ್ಪಾಂಡೆಂಟ್ ನಿತಿನ್ ಚಂದ್ರ ಪೈ, ನಿವೃತ ಶಿಕ್ಷಕರಾದ ಪುಂಡಲೀಕ ನಾಯಕ್, ಶಾಲಾ ಪ್ರಾಂಶುಪಾಲೆ ಸುಮನ ಐಲ್, ಮುಖ್ಯೋಪಾಧ್ಯಾಯಿನಿ ಸುರೇಖ ಮಲ್ಯ ಮತ್ತು ಶಾಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು. ಶಾಲಾ ಶತಮಾನೋತ್ಸವದ ಅಂಗವಾಗಿ ವರ್ಷಪೂರ್ತಿ ವಿವಿಧ ಕ್ರೀಡಾ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನ ಆಯೋಜಿಸಲು ಸಭೆ ತೀರ್ಮಾನಿಸಿತು. ಶಾಲಾ ಪ್ರಾಂಶುಪಾಲೆ ಸುಮನ ಐಲ್ ಧನ್ಯವಾದವಿತ್ತರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.