Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಪವಿತ್ರವಾದ ರಂಜಾನ್ ವ್ಯತಗಳನ್ನೊಳಗೊಂಡ ಹಬ್ಬ ಈದ್ - ಉಲ್ - ಫಿತರ್.

ಪವಿತ್ರವಾದ ರಂಜಾನ್ ವ್ಯತಗಳನ್ನೊಳಗೊಂಡ ಹಬ್ಬ ಈದ್ -ಉಲ್- ಫಿತರ್.
ಪ್ರಾಚೀನ ಕಾಲದಿಂದಲೂ ಮನುಷ್ಯ ಸಂಘ ಜೀವಿಯಾಗಿದ್ದಾನೆ. ಮನುಷ್ಯರು ಎಲ್ಲರೊಡನೆ ಬದುಕಿ ಬಾಳುವ ಸಂಸ್ಕøತಿಯನ್ನು ಅವಲಂಬಿಸಿಕೊಂಡಿದ್ದಾನೆ. ಅವರು ದಿನನಿತ್ಯ ಕೆಲಸ ಕಾರ್ಯಗಳಿಂದ ಬೇಸತ್ತ ಮನುಷ್ಯನು ವರ್ಷದಲ್ಲಿ ಕೆಲವು ಸಲ ತನ್ನ ಈ ಕೆಲಸಗಳ ಒತ್ತಡಗಳನ್ನು ಬದಿಗೊತ್ತಿ ಸಂತೋಷಪಡುವ, ಅಹ್ಲಾದಿಸಿ ಅನುಭವಿಸುವ ಕೆಲವು ದಿನಗಳು ಬರಬೇಕೆಂದು ಮನುಷ್ಯ ಆಗ್ರಹ ನ ಜಗತ್ತಿನ ಮೂಕ್ಕು ಮೂಲೆಗಳಲ್ಲಿರುವ ಎಲ್ಲಾ ಧರ್ಮೀಯರಲ್ಲೂ ಹಬ್ಬಗಳನ್ನು ಆಚರಿಸುವ ಸಂಪ್ರದಾಯವಿದೆ. ಉಪವಾಸ ವ್ರತ ಇಸ್ಲಾಂ ಧರ್ಮದ ರೀತಿಯಲ್ಲಿ ಎಲ್ಲಾ ಮುಸ್ಲಿಂ ಭಾಂದವರಿಗೆ ಪವಿತ್ರವಾದ ರಂಜಾನ್ ತಿಂಗಳಲ್ಲಿ ಒಂದು ತಿಂಗಳ ಕಾಲ ಉಪವಾಸ ವೃತ ಖಡ್ಡಾಯ. ಉಪವಾಸ ವೃತ ಅನುಷ್ಠಾನ ಮಾಡುವ ಮುಸ್ಲಿಂ ಭಾಂದವರು ಮುಂಜಾನೆ ಉಪಾಹಾರ ಸೇವಿಸಿ ದಿನವಿಡೀ ನೀರು, ಪಾನೀಯಗಳು, ತಿನಿಸುಗಳು ತಿನ್ನದೆ ಸಾಯಂಕಾಲದವರೆಗೂ (ಮಗ್ರಿಬ್)ವರೆಗೆ ಪುಣ್ಯ ಕಾರ್ಯ ಆರಾಧನೆ ಮಾಡುವಲ್ಲಿ ತೊಡಗಿಸಿಕೊಳ್ಳುವುದಲ್ಲದೆ ಉಪವಾಸಿ ಉಪವಾಸವು ಒಂದು ವಿಶಿಷ್ಟ ಆರಾಧನೆಯಾಗಿದೆ. ಉಪವಾಸವು ಮುಸ್ಲಿಂ ಸಮುದಾಯಗಳ ಮೇಲೆ ಕಡ್ಡಾಯವಾಗಿ ಅಚರಿಸಬೇಕಾದ ವೃತಾನುಷ್ಠಾನವಾಗಿದೆ. ಉಪವಾಸ ಆಚರಿಸುವವರು ಸುಳ್ಳು, ಕಪಟ, ಮೋಸ, ವಂಚನೆ, ಚಾಡಿ, ಕಳವು ಇತ್ಯಾದಿಗಳಿಂದ ದೂರವಿದ್ದರೆ ಮಾತ್ರ ಅಲ್ಲಾಹನ ಕೃಪೆಗೆ ಪಾತ್ರರಾಗುತ್ತಾರೆ. ಉಪವಾಸ ಕೇವಲ ಹೊಟ್ಟೆಯ ಉಪವಾಸವಲ್ಲ. ಬದಲಿಗೆ, `ಅಂಗಾಂಗದ ಉಪವಾಸ’ ಎಂದು ಕರೆಯಲಾಗುತ್ತದೆ. ಉಪವಾಸವು ಸಹನೆ ಮತ್ತು ತಾಳ್ಮೆಯ ಪಾಠವನ್ನು ಕಲಿಸುತ್ತದೆ. ಅನುಕಂಪ ಹಾಗೂ ಮಾನವೀಯತೆಯನ್ನು ಕಲಿಸುತ್ತದೆ. ಉಪವಾಸ ಆಚರಿಸುವವರು ಕೃತಜ್ಞತೆ, ವಿನಮ್ರತೆ ಹಾಗೂ ದಾಸ್ಯ ಭಾವನೆಯನ್ನು ಕಲಿಯುತ್ತಾರೆ. ಹಸಿವನ್ನು ಅನುಭವಿಸಿದವರಿಗೆ ಮಾತ್ರ ಹಸಿವಿನ ಕಷ್ಟವನ್ನರಿಯಲು ಸಾಧ್ಯ. ರಂಜಾನ್ ತಿಂಗಳಿನಲ್ಲಿ ಅನೇಕರು ಉಪವಾಸ ಆಚರಿಸಿದವರಿಗೆ ಸಾಮೂಹಿಕ ಸೆಹರಿ ಮತ್ತು ಇಫ್ತಾರ್ ಕೂಟಗಳನ್ನು ಮಸೀದಿಗಳು ಮತ್ತು ಮನೆಗಳಲ್ಲಿ ಆಚರಿಸುತ್ತಾರೆ. ರಂಜಾನ್ ಶ್ರೇಷ್ಠ ಮಾಸ. ಸಹನೆಯ ತಿಂಗಳಾಗಿದೆ. ಸತ್ಯ, ವಿಶ್ವಾಸೀಯ ಸಮೃದ್ಧಿಯ ತಿಂಗಳಾಗಿದೆ. ಉಪವಾಸದಿಂದ ಆತ್ಮಶುದ್ಧಿಯಾದಂತೆ ದೇಹದ ಶುದ್ಧಿಯೂ ಆಗುತ್ತದೆ. ಆತ್ಮ ನಿಯಂತ್ರಣ, ಆತ್ಮ ಸಂಸ್ಕರಣೆ, ಇಂದ್ರಿಯಗಳ ಮೇಲೆ ಹತೋಟಿ, ಭಾವವಿಕಾರಗಳ ಹತೋಟಿಗಳಿರುತ್ತದೆ. ಜೀವನಾವಶ್ಯಕತೆಗಳನ್ನು ವೈಭವದಿಂದ ಪೂರೈಸುವ ಅಥವಾ ಅವುಗಳ ಕಡೆಗೆ ವೈರಾಗ್ಯ ಬೆಳೆಸಿಕೊಳ್ಳುವುದರ ನಡುವೆ ಸಂತುಲಿತ ರೂಪದಲ್ಲಿ ನ್ಯಾಯ ಮಾರ್ಗದಿಂದ ಅವುಗಳನ್ನು ಪೂರೈಸುವುದು ಉಪವಾಸದ ಶಿಕ್ಷಣವಾಗಿದೆ.
ಜಕಾತ್: ರಂಜಾನ್ ತಿಂಗಳಿನಲ್ಲಿ ತಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವುಳ್ಳವರು ಕಡ್ಡಾಯವಾಗಿ ಅರ್ಹರಿಗೆ ಜಕಾತ್ (ದಾನ) ನೀಡಲೇಬೇಕಾಗಿದೆ. ಧನಿಕರ ಸ್ವತ್ತಿನಲ್ಲಿರುವ ಬಡವರ ಹಕ್ಕಿಗೆ ಜಕಾತ್ ಎಂದು ಕರೆಯುತ್ತಾರೆ. ಜಕಾತ್ ಇಸ್ಲಾಂ ಧರ್ಮದ ಆರ್ಥಿಕ ವ್ಯವಸ್ಥೆಯನ್ನು ಹಾಗೂ ಸಾಮಾಜಿಕ ಹೊಣೆಯನ್ನು ನಮಗೆ ತಿಳಿಸಿಕೊಡುತ್ತದೆ. ಒಬ್ಬ ಮನುಷ್ಯನು ತಾನು ದುಡಿದ ಐಶ್ವರ್ಯದ ಶೇಕಡ ಎರಡೂವರೆ ಅಷ್ಟು ಭಾಗವನ್ನು ಬಡಬಗ್ಗರಿಗೆ, ದೀನದಲಿತರಿಗೆ, ದರಿದ್ರರಿಗೆ, ವಿಧವೆಯರಿಗೆ ವರ್ಷದಲ್ಲಿ ಒಂದು ಬಾರಿ ದಾನ ಮಾಡಬೇಕು. ದಾನ ಮಾಡಿದಾಗ ನಾನು ಕೊಟ್ಟಿದ್ದೇನೆ ಎಂಬ ಅಹಂಭಾವ ಅವನಿಗೆ ಬರಬಾರದು. ಜೊತೆಗೆ ಅವನು ದುಡಿಯುವ ಐಶ್ವರ್ಯ ಧರ್ಮ ಬದ್ಧವಾಗಿರಬೇಕು. ಹಲಾಲ್ ಆಗಿರಬೇಕು. ಇರುವವನು ಇಲ್ಲದವನಿಗೆ ಮಾಡಬೇಕಾದ ಧನ ಸಹಾಯ ಜಕಾತ್ ಮೂಲಕ ನಡೆದು ಹೋಗುತ್ತದೆ. ಜಕಾತ್ ದಾನವಾಗಲಿ, ಭಿಕ್ಷೆಯಾಗಲಿ ಅಲ್ಲ. ಅದು ಬಡವರ ಹಕ್ಕು.ಜಕಾತ್ ಸಮಾಜದ ಎಲ್ಲ ವರ್ಗದ ಜನಗಳಿಗೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಸಮಾನ ಅವಕಾಶ ನೀಡುತ್ತದೆ. ತನ್ಮೂಲಕ ಸೋದರತ್ವ ಭಾವನೆಯನ್ನು ಅವರಲ್ಲಿ ಬಿತ್ತುತ್ತದೆ. ಈದುಲ್ ಪಿತರ್ ಇಸ್ಲಾಂ ಕ್ಯಾಲೆಂಡರಿನ 9 ನೇ ತಿಂಗಳು ರಂಜಾನ್, ಇಸ್ಲಾಂ ಧರ್ಮದ ಅತಿ ಪ್ರಮುಖವಾದ ಹಬ್ಬವೆಂದರೆ ಈದುಲ್ ಪಿತ್ರ್ (ರಂಜಾನ್) ಜಗತ್ತಿನ ಮುಸ್ಲಿಮರೆಲ್ಲರೂ ಒಂದು ತಿಂಗಳ ಕಾಲ ಸತತ ಉಪವಾಸ ವ್ರತ ಆಚರಿಸಿದ ನಂತರ “ಶವ್ವಾಲ್’’ ತಿಂಗಳ ಒಂದನೇ ತಾರೀಖಿನಂದು ಆಚರಿಸಲಾಗುವ ಹಬ್ಬವಿದು. ಒಂದು ತಿಂಗಳು ಪೂರ್ತಿ ಪುಣ್ಯಕಾರ್ಯಗಳು ಮಾಡಿದ ಪ್ರತಿಫಲವಾಗಿ ನಡೆಯುವ ಬಹುಮಾನವು “ಈದ್ ಹಬ್ಬ’’. ಈ ಹಬ್ಬದ ಸಮಯದಲ್ಲಿ ನೀಡಲಾಗುವ ದಾನ (ಪಿತ್ರ) ಕ್ಕೆ ಸಂಬಂಧಿಸಿದಂತೆ “ಈದಲ್ ಪಿತರ್’’ ಎಂಬ ಹೆಸರು ಬಂದಿದೆ. ಭಯ ಭಕ್ತಿಯೊಂದಿಗೆ ಆಚರಿಸಲು ಜಗತ್ತಿನ ಮುಸ್ಲಿಮರೆಲ್ಲರೂ ಸಂತೋಷದಿಂದ ಈದ್ ಹಬ್ಬವನ್ನು ಆಚರಿಸುತ್ತಾರೆ. ಇಂದು ಜಗತ್ತಿನ ವಿವಿಧ ಕಡೆಗಳಲ್ಲಿ ಮುಸ್ಲಿಂ ಸಮುದಾಯದ ಜನತೆ ಈದ್ ನ್ನು ಆಚರಿಸುತ್ತಿದ್ದು ಎಲ್ಲಾರಿಗೂ ಈದ್ ಹಬ್ಬದ ಶುಭಾಶಯಗಳು.
✍️ ಸಲಾಂ ವರ್ಕಾಡಿ 963371 2192.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.