Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಎಣ್ಮಕಜೆ ಪಂಚಾಯತ್ ನಲ್ಲಿ ಕ್ವಾರ್ಟರ್ಸ್ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯ ತಪಾಸಣೆ ಬಿಗು: ಕಟ್ಟುನಿಟ್ಟಿನ ಕ್ರಮ

ಎಣ್ಮಕಜೆ ಪಂಚಾಯತ್ ನಲ್ಲಿ ಕ್ವಾರ್ಟರ್ಸ್ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯ ತಪಾಸಣೆ ಬಿಗು: ಕಟ್ಟುನಿಟ್ಟಿನ ಕ್ರಮ
ಪೆರ್ಲ: ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ತಪಾಸಣೆಗೆ ಸಂಬಂಧಿಸಿದಂತೆ ಕ್ವಾರ್ಟರ್ಸ್ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ತಪಾಸಣೆಗಳನ್ನು ಬಿಗಿಗೊಳಿಸಲಾಗಿದೆ.
ಎಣ್ಮಕಜೆ ಗ್ರಾಮ ಪಂಚಾಯತ್ ಎಂಪೋರ್ಸ್  ನೇತೃತ್ವದಲ್ಲಿ ಕಾರ್ಯಚರಣೆ ತೀವ್ರಗೊಳಿಸಲಾಗಿದೆ. ಈಗಾಗಲೇ ಪಂಚಾಯತಿನ ಹಲವು ಕಡೆಗಳ ಕ್ವಾರ್ಟಸ್ ಗಳಲ್ಲಿ  ತ್ಯಾಜ್ಯವನ್ನು ಬೇರ್ಪಡಿಸದಿರುವುದು, ಬಳಕೆದಾರ ಶುಲ್ಕವನ್ನು ಪಾವತಿಸದಿರುವುದು, ಸಾರ್ವಜನಿಕ ತೆರೆದ ಸ್ಥಳಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯವನ್ನು ಸುರಿಯುವುದು ಮತ್ತು ರಾಶಿ ಹಾಕುವುದು ಮತ್ತು ಸಾರ್ವಜನಿಕ ಸ್ಥಳಗಳಿಗೆ ಕೊಳಕು ನೀರನ್ನು ಬಿಡುವುದರ ವಿರುದ್ಧ ತಪಾಸಣೆಗಳನ್ನು ಬಿಗಿಗೊಳಿಸಲಾಗಿದೆ.ಕಾನೂನು  ಉಲ್ಲಂಘಿಸುವವರು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.