ಹೊಸಂಗಡಿಯ ಚಕ್ರವರ್ತಿ ಕ್ಲಬ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಖಾವಂದರಿಂದ 1 ಲಕ್ಷ ರೂಪಾಯಿ ಮೊತ್ತ ಅನುದಾನ.
ಮಾರ್ಚ್ 26, 2024
0
ಹೊಸಂಗಡಿಯ ಚಕ್ರವರ್ತಿ ಕ್ಲಬ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಖಾವಂದರಿಂದ 1 ಲಕ್ಷ ರೂಪಾಯಿ ಮೊತ್ತ ಅನುದಾನ.
ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.)
ಮಂಜೇಶ್ವರ ತಾಲೂಕಿನ ತಲಪಾಡಿ ವಲಯದ ಹೊಸಂಗಡಿಯಲ್ಲಿರುವ ಚಕ್ರವರ್ತಿ ಕ್ಲಬ್ ನ ಸಮಿತಿಯವರು ಕ್ಲಬ್ ನ ಕಟ್ಟಡ ನಿರ್ಮಾಣಕ್ಕೆ ಕ್ಷೇತ್ರಕ್ಕೆ ಅನುದಾನದ ಮನವಿಯನ್ನು ಸಲ್ಲಿಸಿದ್ದು, ಸಲ್ಲಿಸಿದ ಮನವಿಗೆ ಕ್ಷೇತ್ರದ ಸಮುದಾಯ ಅಭಿವೃದ್ಧಿಯಿಂದ ಪೂಜ್ಯ ಖಾವಂದರು ಪ್ರಸಾದ ರೂಪದಲ್ಲಿ ಕ್ಲಬ್ ನ ಕಟ್ಟಡ ನಿರ್ಮಾಣಕ್ಕೆ 1೦೦೦೦೦ (ಒಂದು ಲಕ್ಷ ರೂಪಾಯಿ)ಯ ಅನುದಾನವನ್ನು ಮಂಜೂರು ಮಾಡಿದ್ದಾರೆ. ಮಂಜೂರಾದ ಅನುದಾನದ ಡಿಡಿ ಮೊತ್ತವನ್ನು ಕಾಸರಗೋಡು ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಗೋಪಾಲ ಶೆಟ್ಟಿ ಅರಿಬೈಲ್, ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ಕಡಂಬಾರು, ಮಂಜೇಶ್ವರ ತಾಲೂಕಿನ ಯೋಜನಾಧಿಕಾರಿ ಶ್ರೀಮತಿ ಶಶಿಕಲಾ ಸುವರ್ಣ, ನಿಕಟ ಪೂರ್ವ ಅಧ್ಯಕ್ಷರಾದ ಅಶ್ವತ್ ಪೂಜಾರಿ ಲಾಲ್ಬಾಗ್ , ಜನಜಾಗೃತಿ ವೇದಿಕೆಯ ಸದಸ್ಯರಾದ ಹರೀಶ್ ಶೆಟ್ಟಿ ಮಾಡರವರು ಸೇರಿ ಮಂಜೂರಾತಿ ಪತ್ರವನ್ನು ಚಕ್ರವರ್ತಿ ಕ್ಲಬ್ ನ ಸಮಿತಿಯ ಅಧ್ಯಕ್ಷರಾದ ಶಿವಪ್ರಸಾದ್ ಪೆಲಪ್ಪಾಡಿ, ಕಾರ್ಯದರ್ಶಿ ಸುರೇಶ್, ಕೋಶಾಧಿಕಾರಿ ಅಶೋಕ್, ಸಾಯಿ ಕಿರಣ್ ಮತ್ತು ಸಮಿತಿಯ ಪದಾಧಿಕಾರಿ ಸದಸ್ಯರಿಗೆ ನೀಡಲಾಯಿತು, ಪತ್ರವನ್ನು ನೀಡಿದ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷರು ಹಾಗೂ ಸದಸ್ಯರಾದ ಹರೀಶ್ ಶೆಟ್ಟಿ ಮಾಡ ಕ್ಷೇತ್ರದ ಬಗ್ಗೆ ಮತ್ತು ಯೋಜನೆಯ ಬಗ್ಗೆ ಹಿತನುಡಿಗಳನ್ನು ನುಡಿದರು ತಾಲೂಕಿನ ಯೋಜನಾಧಿಕಾರಿಯವರು ಯೋಜನೆಯ ಕಾರ್ಯವೈಖರಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಈ ವೇಳೆ ಊರಿನ ಸಾರ್ವಜನಿಕ ಭಕ್ತಾದಿಗಳು, ಗಣ್ಯರು ಸ್ವ - ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮ ವನ್ನು ವಲಯದ ಮೇಲ್ವಿಚಾರಕ ಭಾಸ್ಕರ್ ನಿರೂಪಿಸಿ ಸ್ವಾಗತಿಸಿದರು.

