ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿಕರ್ಣಕಟ್ಟೆಯ "ಉತ್ಸಾಹಿ ಯುವಕ ವೃಂದ" ದ 36 ನೇ ವಾರ್ಷಿಕೋತ್ಸವ. ಬಿಕರ್ಣಕಟ್ಟೆ ಶ್ರೀ ಕ್ಷೇತ್ರ ಬಲಮುರಿ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ನಡೆಯಿತು ಸರಳ ವಿವಾಹ ಕಾರ್ಯಕ್ರಮ. ಸನಾತನ ಸಂಸ್ಕೃತಿಗೆ ಬದ್ದವಾಗಿ, ಅತೀ ಸರಳತೆಯಲ್ಲಿ ಹಸೆ ಮಣೆ ಏರಿದ ಮೂರು ಜೋಡಿಗಳು.
ಮಾರ್ಚ್ 24, 2024
0
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿಕರ್ಣಕಟ್ಟೆಯ "ಉತ್ಸಾಹಿ ಯುವಕ ವೃಂದ" ದ 36 ನೇ ವಾರ್ಷಿಕೋತ್ಸವ.
ಬಿಕರ್ಣಕಟ್ಟೆ ಶ್ರೀ ಕ್ಷೇತ್ರ ಬಲಮುರಿ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ನಡೆಯಿತು ಸರಳ ವಿವಾಹ ಕಾರ್ಯಕ್ರಮ.
ಸನಾತನ ಸಂಸ್ಕೃತಿಗೆ ಬದ್ದವಾಗಿ, ಅತೀ ಸರಳತೆಯಲ್ಲಿ ಹಸೆ ಮಣೆ ಏರಿದ ಮೂರು ಜೋಡಿಗಳು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿಕರ್ನಕಟ್ಟೆಯ ಉತ್ಸಾಹಿ ಯುವಕ ವೃಂದದ 36 ನೇ ವರ್ಷದ ಸವಿನೆನಪಿಗಾಗಿ ಮೂರು ಜೋಡಿಗಳಿಗೆ ಸರಳ ವಿವಾಹ ಕಾರ್ಯಕ್ರಮ ನಡೆಸುವುದರೊಂದಿಗೆ ನೂತನ ದಂಪತಿಗಳ ಬಾಳಿಗೆ ಬೆಳಕನ್ನ ತೋರಿದರು. ಬಿಕರ್ನಕಟ್ಟೆ ಶ್ರೀ ಕ್ಷೇತ್ರ ಬಲಮುರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವೇದಮೂರ್ತಿ ಶ್ರೀ ವಿವೇಕಾನಂದ ನೀಗ್ಲೆ ಇವರ ಮುಂದಾಳತ್ವದಲ್ಲಿ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ ಮೂರು ಮಂದಿ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಅಂಬಾ ಮಹೇಶ್ವರಿ ಭಜನಾ ಮಂದಿರದ ಅಧ್ಯಕ್ಷರಾದ ಎ. ಸೀತಾರಾಮ್ ರವರು ಸಭಾಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಶ್ರೀ ಜಗದೀಶ್ ಕೆ ಗರೋಡಿ ಅಧ್ಯಕ್ಷರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಂಕನಾಡಿ, ಶ್ರೀ ತೋಮ ನಾಯ್ಗರು ಯಜಮಾನ್ರು ನಾಯ್ಗರ ಮನೆ, ಡಾ ಮಂಜು ಆರ್ ಮುಖ್ಯಸ್ಥರು ಎ ಬಿ ಶೆಟ್ಟಿ ಮಕ್ಕಳ ದಂತ ಚಿಕಿತ್ಸ ವಿಭಾಗ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಹೆಗ್ಡೆ ಸ್ವಾಗತಿಸಿ , ಉಪಾಧ್ಯಕ್ಷರಾದ ಶ್ರೀ ಗುರು ಪ್ರಸಾದ್ ರಾವ್ ಧನ್ಯವಾದ ವಿತ್ತರು, ಕೋಶಾಧಿಕಾರಿ ಶ್ರೀ ಯೋಗೇಶ್ ಕಾರ್ಯಕ್ರಮ ನಿರೂಪಿಸಿದರು.

