Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಜಿಬೈಲು ಶ್ರೀ ಅಯ್ಯಪ್ಪ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ 1.50 ಲಕ್ಷ ರೂಪಾಯಿ ಅನುದಾನ.

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಜಿಬೈಲು ಶ್ರೀ ಅಯ್ಯಪ್ಪ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ 1.50 ಲಕ್ಷ ರೂಪಾಯಿ ಅನುದಾನ.
ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕಿನ ತಲಪಾಡಿ ವಲಯದ ಮಜಿಬೈಲ್ ಕಾರ್ಯಕ್ಷೇತ್ರದಲ್ಲಿರುವ ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಮಿತಿಯವರು ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ಧರ್ಮಸ್ಥಳ ಕ್ಷೇತ್ರಕ್ಕೆ ಅನುದಾನದ ಮನವಿಯನ್ನು ಇತ್ತೀಚೆಗೆ ಸಲ್ಲಿಸಿದ್ದು, ಮನವಿಗೆ ಸ್ಪಂದಿಸಿ ಕ್ಷೇತ್ರದ ಸಮುದಾಯ ಅಭಿವೃದ್ಧಿಯಿಂದ ಪೂಜ್ಯ ಖಾವಂದರು ಪ್ರಸಾದ ರೂಪದಲ್ಲಿ ಅಯ್ಯಪ್ಪ ಮಂದಿರ ಕ್ಷೇತ್ರಕ್ಕೆ 1, 50,000 (ಒಂದುವರೆ ಲಕ್ಷ ರೂಪಾಯಿ) ಯ ಅನುದಾನವನ್ನು ಮಂಜೂರು ಮಾಡಿದ್ದಾರೆ. ಈ ಅನುದಾನವನ್ನು ಪಡೆದು ಅಯ್ಯಪ್ಪ ಕ್ಷೇತ್ರವನ್ನು ಸಮಿತಿಯವರು ಅಭಿವೃದ್ಧಿಪಡಿಸಿ ಜೀರ್ಣೋದ್ಧಾರ ಮಾಡಿಸಿರುತ್ತಾರೆ.
ಮಂಜೂರಾದ ಅನುದಾನದ ಪತ್ರವನ್ನು ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಡಾ‌. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ , ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಗೋಪಾಲ ಶೆಟ್ಟಿ ಅರಿಬೈಲ್, ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ಕಡಂಬಾರು, ಮಂಜೇಶ್ವರ ತಾಲೂಕಿನ ಯೋಜನಾಧಿಕಾರಿ ಶ್ರೀಮತಿ ಶಶಿಕಲಾ ಸುವರ್ಣ, ನಿಕಟ ಪೂರ್ವ ಅಧ್ಯಕ್ಷರಾದ ಅಶ್ವತ್ ಪೂಜಾರಿ ಲಾಲ್ಬಾಗ್, ಧರ್ಮಸ್ಥಳ ಭಜನಾ ಪರಿಷತ್ ಮಂಜೇಶ್ವರ ತಾಲೂಕಿನ ಅಧ್ಯಕ್ಷರಾದ ದಿನೇಶ್ ಚೆರುಗೋಳಿ ಮೊದಲಾದವರು ಮಂಜೂರಾತಿ ಪತ್ರವನ್ನು ಅಯ್ಯಪ್ಪ ಕ್ಷೇತ್ರದ ಸಮಿತಿಯ ಅಧ್ಯಕ್ಷರಾದ ಸಂಜೀವ ಬಂಗೇರ, ಮಂದಿರದ ಗುರುಸ್ವಾಮಿ ಕೊರಗಪ್ಪ ಗುರುಸ್ವಾಮಿ, ಮಹಿಳಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಕಮಲ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ವಿಜಯ ಬೆಜ್ಜ ರವರಿಗೆ ನೀಡಲಾಯಿತು. ಪತ್ರವನ್ನು ನೀಡಿದ ಜನಜಾಗೃತಿ ವೇದಿಕೆತ ಅಧ್ಯಕ್ಷರು ಮತ್ತು ಸ್ಥಾಪಕ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕ್ಷೇತ್ರದ ಬಗ್ಗೆ ಮತ್ತು ಯೋಜನೆಯ ಬಗ್ಗೆ ಹಿತನುಡಿಗಳನ್ನು ನುಡಿದರು. ತಾಲೂಕಿನ ಯೋಜನಾಧಿಕಾರಿ ಯವರು ಯೋಜನೆಯ ಕಾರ್ಯ ವೈಖರಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಈ ವೇಳೆ ಊರಿನ ಸಾರ್ವಜನಿಕ ಭಕ್ತಾದಿಗಳು, ಗಣ್ಯರು, ಸಂಘದ ಸದಸ್ಯರು, ಅಯ್ಯಪ್ಪ ಸ್ವಾಮಿ ಭಕ್ತರು ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕ ಭಾಸ್ಕರ್ ನಿರೂಪಿಸಿ, ಸ್ವಾಗತಿಸಿ, ಸೇವಾ ಪ್ರತಿನಿಧಿ ಸುಚಿತ್ರ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.