ಚೆರುಗೋಳಿಯಲ್ಲಿರುವ ಹಿಂದೂ ರುದ್ರ ಭೂಮಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1.50 ಲಕ್ಷ ರೂಪಾಯಿ ಸಿಲಿಕಾನ್ ಚೇಂಬರ್ ಕೊಡುಗೆ. ಅನುದಾನ ಹಸ್ತಾಂತರ.
ಜನವರಿ 11, 2024
0
ಚೆರುಗೋಳಿಯಲ್ಲಿರುವ ಹಿಂದೂ ರುದ್ರ ಭೂಮಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1.50 ಲಕ್ಷ ರೂಪಾಯಿ ಸಿಲಿಕಾನ್ ಚೇಂಬರ್ ಕೊಡುಗೆ. ಅನುದಾನ ಹಸ್ತಾಂತರ.
ಉಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕಿನ ತಲಪಾಡಿ ವಲಯದ ಉಪ್ಪಳ ಕಾರ್ಯಕ್ಷೇತ್ರದಲ್ಲಿರುವ ಅಂಬಾರು ಚೆರುಗೋಳಿಯಲ್ಲಿರುವ ಹಿಂದೂ ರುದ್ರ ಭೂಮಿ ಸಮಿತಿಯವರು "ರುದ್ರ ಭೂಮಿಗೆ ಸಿಲಿಕಾನ್ ಚೇಂಬರ್" ನ ಬೇಡಿಕೆಯ ಮನವಿಯನ್ನು ಕ್ಷೇತ್ರಕ್ಕೆ ಸಲ್ಲಿಸಿದ್ದು, ಸಲ್ಲಿಸಿದ ಮನವಿಗೆ ಸ್ಪಂದಿಸಿ, ಕ್ಷೇತ್ರದ ಸಮುದಾಯ ಅಭಿವೃದ್ಧಿಯಿಂದ ಪೂಜ್ಯ ಖಾವಂದರು 1,50,000 (ಒಂದುವರೆ ಲಕ್ಷ ರೂಪಾಯಿ) ವೆಚ್ಚದ ಸಿಲ್ಕಾನ್ ಚೇಂಬರ್ ಮಂಜೂರು ಮಾಡಿದ್ದಾರೆ. ಚೇಂಬರನ್ನು ರುದ್ರಭೂಮಿ ಸಮಿತಿಯವರು ವ್ಯವಸ್ಥಿತವಾಗಿ ಅಳವಡಿಕೆ ಮಾಡಿರುತ್ತಾರೆ. ಸಿಲ್ಕನ್ ಚೇಂಬರ್ ಮಂಜೂರಾದ ಮಂಜೂರಾತಿ ಪತ್ರವನ್ನು ಇಂದು ಕಾಸರಗೋಡು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಗೋಪಾಲ ಶೆಟ್ಟಿ ಅರಿಬೈಲ್, ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ಕಡಂಬಾರು, ಮಂಜೇಶ್ವರ ತಾಲೂಕಿನ ಯೋಜನಾಧಿಕಾರಿ ಶ್ರೀಮತಿ ಶಶಿಕಲಾ ಸುವರ್ಣ, ನಿಕಟ ಪೂರ್ವ ಅಧ್ಯಕ್ಷರಾದ ಅಶ್ವತ್ ಪೂಜಾರಿ ಲಾಲ್ಬಾಗ್, ಧರ್ಮಸ್ಥಳ ಭಜನಾ ಪರಿಷತ್ ಮಂಜೇಶ್ವರ ತಾಲೂಕಿನ ಅಧ್ಯಕ್ಷರಾದ ದಿನೇಶ್ ಚೆರುಗೋಳಿ ಸೇರಿಕೊಂಡು ಮಂಜೂರಾತಿ ಪತ್ರವನ್ನು ಉಪ್ಪಳ ಚೆರುಗೋಳಿಯ ಹಿಂದು ರುದ್ರ ಭೂಮಿ ಸಮಿತಿಯ ಅಧ್ಯಕ್ಷರಾದ ರಘು ಸಿ, ಮೋಹನ ಇವರಿಗೆ ನೀಡಿದರು. ಪತ್ರವನ್ನು ನೀಡಿದ ಜನಜಾಗೃತಿ ವೇದಿಕೆ ಅಧ್ಯಕ್ಷರು ಮತ್ತು ಸ್ಥಾಪಕ ಅಧ್ಯಕ್ಷರು ಹಾಗೂ ನಿಕಟ ಪೂರ್ವ ಅಧ್ಯಕ್ಷರು ಭಜನಾ ಪರಿಷತ್ತಿನ ಅಧ್ಯಕ್ಷರು ಕ್ಷೇತ್ರದಿಂದ ಹಿಂದೂ ರುದ್ರ ಭೂಮಿ ಅಭಿವೃದ್ಧಿಗೆ ತುಂಬಾ ಸಹಕಾರವನ್ನು ನೀಡುತ್ತಿದ್ದು ನಮ್ಮ ಭಾಗದ ಎಲ್ಲಾ ಹಿಂದೂ ರುದ್ರ ಭೂಮಿಗಳು ಅಭಿವೃದ್ಧಿ ಆಗಬೇಕು ನಾವೆಲ್ಲರೂ ಅದಕ್ಕೆ ಕೈಜೋಡಿಸಬೇಕು ಎಂದು ಹಿತನುಡಿಯನ್ನು ನುಡಿದರು. ಮತ್ತು ತಾಲೂಕಿನ ಯೋಜನಾಧಿಕಾರಿಯವರು ಯೋಜನೆಯ ಕಾರ್ಯವೈಖರಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಊರಿನ ಸಾರ್ವಜನಿಕರು ಗಣ್ಯರು ಸ್ವ - ಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕ ಭಾಸ್ಕರ್ ನಿರೂಪಿಸಿ, ಸ್ವಾಗತಿಸಿ, ಸೇವಾ ಪ್ರತಿನಿಧಿ ಸುಚಿತ್ರ ವಂದಿಸಿದರು.



