ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರಕ್ಕೆ ಆಗಮಿಸಿ, ಅಯ್ಯಪ್ಪ ಸ್ವಾಮಿ ಇರುಮುಡಿಗೆ ಪತಿಯ ತುಪ್ಪಕಾಯಿ ಹರಕೆ ತೀರಿಸಿದ "ಸ್ವರ್ಗೀಯ ಪ್ರವೀಣ್ ನೆಟ್ಟಾರ್" ಪತ್ನಿ ನೂತನ ನೆಟ್ಟಾರ್.
ಜನವರಿ 12, 2024
0
ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರಕ್ಕೆ ಆಗಮಿಸಿ, ಅಯ್ಯಪ್ಪ ಸ್ವಾಮಿ ಇರುಮುಡಿಗೆ ಪತಿಯ ತುಪ್ಪಕಾಯಿ ಹರಕೆ ತೀರಿಸಿದ "ಸ್ವರ್ಗೀಯ ಪ್ರವೀಣ್ ನೆಟ್ಟಾರ್" ಪತ್ನಿ ನೂತನ ನೆಟ್ಟಾರ್.
ಮಂಜೇಶ್ವರ: ಧಾರ್ಮಿಕ ಶ್ರದ್ಧಾ ಕೇಂದ್ರವೆಂದೇ ಖ್ಯಾತಿ ಪಡೆದಿರುವ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರಕ್ಕೆ ಇಂದು ಬೆಳಗ್ಗೆ ದಕ್ಷಿಣ ಕನ್ನಡ ಬಿಜೆಪಿ ಯುವ ನೇತಾರ ದಿ. ಪ್ರವೀಣ್ ನೆಟ್ಟಾರ್ ರ ಧರ್ಮಪತ್ನಿ ಶ್ರೀಮತಿ ನೂತನ ನೆಟ್ಟಾರುರವರು ಆಗಮಿಸಿ, ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ಸಮರ್ಪಿಸಲು "ಪ್ರವೀಣ್ ನೆಟ್ಟಾರ್" ರವರ ಹರಕೆಯ ತುಪ್ಪಕಾಯಿಯ ಸೇವೆಯನ್ನು ಸಲ್ಲಿಸಿದರು. ಇಂದು ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಶಬರಿಮಲೆ ಯಾತ್ರೆಗೈಯ್ಯಲು "ಇರುಮುಡಿ ಕಟ್ಟುವ ಕಾರ್ಯಕ್ರಮ" ನಡೆಯುತ್ತಿದೆ. ಕ್ಷೇತ್ರದ ಗುರು ಸ್ವಾಮಿಗಳಾದ ಉದಯ ಪಾವಳರವರು ಹಾಗೂ ಕ್ಷೇತ್ರದ ಪ್ರಧಾನ ಅರ್ಚಕರಾದ ತಿರುಮಲೇಶ್ ಆಚಾರ್ಯರು ಅಯ್ಯಪ್ಪ ಸ್ವಾಮಿಗೆ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿ, ಪ್ರವೀಣ್ ನೆಟ್ಟಾರ್ ರವರ ಹರಕೆಯ ತುಪ್ಪವನ್ನು ನೂತನರವರ ಕೈಯಿಂದಲೇ ಹರಕೆಕಾಯಿಗೆ ತುಂಬಿಸಿದ್ದಾರೆ, ಇಂದು ಸಂಜೆ ಶಬರಿಮಲೆ ಯಾತ್ರೆಗೈಯಲ್ಲಿರುವ ಕ್ಷೇತ್ರದ ಅಯ್ಯಪ್ಪ ಭಕ್ತವೃಂದ, 16 ರಂದು ಸನ್ನಿಧಿಗೆ ತಲುಪಿ, ಅಯ್ಯಪ್ಪ ವೃತಧಾರಿಗಳ ಹಾಗೂ ಭಕ್ತರ ಹರಕೆ ತುಪ್ಪವನ್ನು ಅಯ್ಯಪ್ಪ ಸ್ವಾಮಿಗೆ ಅಭಿಷೇಕ ನೆರವೇರಿಸಲಿರುವರು. ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ ಪರಮ ಭಕ್ತನಾಗಿರುವ ಪ್ರವೀಣ್ ನೆಟ್ಟಾರ್ ರವರು ತಮ್ಮ 17 ನೇ ವರ್ಷದಲ್ಲಿ ಹಾಗೂ 18 ನೇ ವರ್ಷದಲ್ಲಿ ಎರಡು ಬಾರಿ ಹೊಸಂಗಡಿಯಲ್ಲಿ ಮಾಲೆ ಧರಿಸಿ ಶಬರಿಮಲೆ ಯಾತ್ರೆಗೈದಿದ್ದರು. ಯಾವ ಬಿರಿಯಲ್ಲಿ ಮಾಲೆ ಧರಿಸಿ, ಯಾತ್ರೆಗೈದಿದ್ದಾರೆ ಎಂದು ನನಗೆ ತಿಳಿದಿಲ್ಲ, ಆದರೆ ಹೊಸಂಗಡಿಯಲ್ಲಿಯೇ ಮಾಲೆ ಧರಿಸಿ, ಶಬರಿಮಲೆಗೆ ತೆರಳಿದ್ದೆ ಎಂದು ಹೇಳಿದನ್ನು ಪತ್ನಿ "ನಮ್ಮ ಮಂಜೇಶ್ವರ ನ್ಯೂಸ್" ನ ಜೊತೆ ಹಂಚಿಕೊಂಡಿದ್ದಾರೆ. ಆ ಬಳಿಕ ಪ್ರತೀ ವರ್ಷ ತಮ್ಮ ಊರಾದ ನೆಟ್ಟಾರ್ ನಿಂದ ಶಬರಿಮಲೆಗೆ ಯಾತ್ರೆಗೈಯುವ ಅಯ್ಯಪ್ಪ ಭಕ್ತ ವೃಂದದವರಲ್ಲಿ ಹರಕೆ ತುಪ್ಪ ಕಾಯಿ ತುಂಬಿಸಿ, ಕಳಿಸುತ್ತಿದ್ದರು. ಆದರೆ ಅವರ ಅಗಲುವಿಕೆಯ ಬಳಿಕ ನನಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೊರಕಿದ ಸರಕಾರಿ ಉದ್ಯೋಗದಿಂದಾಗಿ, ನಮ್ಮ ಕಚೇರಿಯಲ್ಲಿ ಸಹೋದ್ಯೋಗಿಯಾಗಿರುವ ಹೊಸಂಗಡಿ ಬಳಿಯ ಬೆಜ್ಜ ನಿವಾಸಿ ಜೀತ್ ಬೆಜ್ಜರವರು ಹಲವು ವರ್ಷಗಳಿಂದ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಮಾಲಾಧಾರಿಯಾಗಿ ಶಬರಿಮಲೆಗೆ ಯಾತ್ರೆ ಗೈಯುತ್ತಿದ್ದು, ಅವರ ಸಹಕಾರದಿಂದ ಹಾಗೂ ಕ್ಷೇತ್ರದ ಗುರುಸ್ವಾಮಿಗಳ ಸಲಹೆಯಂತೆ ಹಲವು ದಿನಗಳಿಂದ ವೃತವನ್ನು ಕೈಗೊಂಡು ಇಂದು ನನ್ನ ಪತಿ "ಪ್ರವೀಣ್ ನೆಟ್ಟಾರ್" ರ ಹರಕೆ ತುಪ್ಪಕಾಯಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ಸಮರ್ಪಿಸಲು ಸಾದ್ಯವಾಯಿತು ಎಂದು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಬಿಜೆಪಿ ಯುವ ನೇತಾರ ಪ್ರವೀಣ್ ನೆಟ್ಟಾರು ಬೆಳ್ಳಾರೆಯಿಂದ ಪೆರುವಾಜೆಗೆ ಹೋಗುವ ಕ್ರಾಸ್ ಬಳಿ ಕೋಳಿ ಮಾಂಸದಂಗಡಿ ನಡೆಸುತ್ತಿದ್ದರು. ಜುಲೈ 26 ರಂದು ವ್ಯಾಪಾರ ಮುಗಿಸಿ ಅಂಗಡಿಗೆ ಬಾಗಿಲು ಹಾಕುತ್ತಿರುವಾಗ ಬೈಕೊಂದರಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಮೇಲೆ ಮಾರಾಕಾಸ್ತ್ರಗಳಿಂದ ಏಕಏಕಿ ದಾಳಿ ನಡೆಸಿ, ಹತ್ಯೆ ಮಾಡಿ, ಪರಾರಿಯಾಗಿದ್ದರು.





