ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ, ಧನುರ್ಮಾಸ ಪೂಜಾ ಮಹೋತ್ಸವದ ಕೊನೆಯ ದಿನವಾದ ಇಂದು ಮುಂಜಾನೆ "ವಿಶೇಷ ದೀಪೋತ್ಸವ".
ಜನವರಿ 14, 2024
0
ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ, ಧನುರ್ಮಾಸ ಪೂಜಾ ಮಹೋತ್ಸವದ ಕೊನೆಯ ದಿನವಾದ ಇಂದು ಮುಂಜಾನೆ "ವಿಶೇಷ ದೀಪೋತ್ಸವ".
ಮಂಜೇಶ್ವರ: ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ, ಧನುರ್ಮಾಸ ಪೂಜಾ ಮಹೋತ್ಸವದ ಕೊನೆಯ ದಿನವಾದ ಇಂದು ಮುಂಜಾನೆ "ವಿಶೇಷ ದೀಪೋತ್ಸವ" ಕಾರ್ಯಕ್ರಮ ನಡೆಯಿತು. ಬೆಳ್ಳಂ ಬೆಳಗ್ಗೆ ಕ್ಷೇತ್ರದಲ್ಲಿ ಮಾತೆಗೆ ವಿವಿಧ ಅಭಿಷೇಕ, ಬಳಿಕ ವಿಶೇಷ ಅಲಂಕಾರದಲ್ಲಿ ತಾಯಿಗೆ ದೀಪೋತ್ಸವದ ಪೂಜೆ ಪುನಸ್ಕಾರ ನಡೆಯಿತು. ಕೋಟೆಕಾರು ಶ್ರೀ ಕಾಳಿಕಾಂಬ ದೇವಸ್ಥಾನದ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆ ನಡೆಯಿತು. ಈ ವೇಳೆ ಕ್ಷೇತ್ರದಲ್ಲಿ ಸೇರಿದ ಭಕ್ತ ಸಮೂಹ ಸಹಸ್ರಾರು ದೀಪ ಬೆಳಗಿಸುವದರೊಂದಿಗೆ ದೇವರಿಗೆ ಮಹಾ ಪೂಜೆ ನಡೆಯಿತು. ಬಳಿಕ ಪ್ರಸಾದ ವಿತರಣೆ, ಫಲಾಹಾರ ಸೇವೆ ನಡೆಯಿತು.