ಪೊಳಲಿ ಹಜ್ರತ್ ಅಸ್ಸಯ್ಯದ್ ಬಾಬಾ ಫಕ್ರುದ್ದೀನ್ (ಖ.ಸಿ) ಜುಮ್ಮಾ ಮಸೀದಿಯಲ್ಲಿ ನಡೆಯುತ್ತಿರುವ ಉರೂಸ್ ಕಾರ್ಯಕ್ರಮದಲ್ಲಿ ಜಮಾತ್ ಆಡಳಿತ ಕಮಿಟಿಯ ನೇತೃತ್ವದಲ್ಲಿ ಜಮಾಹತಿನ ಹಿರಿಯರಿಗೆ ಹಾಗೂ ಸಾಧಕರಿಗೆ ಸನ್ಮಾನ.
ಜನವರಿ 17, 2024
0
ಪೊಳಲಿ ಹಜ್ರತ್ ಅಸ್ಸಯ್ಯದ್ ಬಾಬಾ ಫಕ್ರುದ್ದೀನ್ (ಖ.ಸಿ) ಜುಮ್ಮಾ ಮಸೀದಿಯಲ್ಲಿ ನಡೆಯುತ್ತಿರುವ ಉರೂಸ್ ಕಾರ್ಯಕ್ರಮದಲ್ಲಿ ಜಮಾತ್ ಆಡಳಿತ ಕಮಿಟಿಯ ನೇತೃತ್ವದಲ್ಲಿ ಜಮಾಹತಿನ ಹಿರಿಯರಿಗೆ ಹಾಗೂ ಸಾಧಕರಿಗೆ ಸನ್ಮಾನ.
ಪೊಳಲಿ: 800 ವರ್ಷಗಳ ಇತಿಹಾಸವಿರುವ ಪೊಳಲಿ ಹಜ್ರತ್ ಅಸ್ಸಯ್ಯದ್ ಬಾಬಾ ಫಕ್ರುದ್ದೀನ್ (ಖ.ಸಿ) ಜುಮ್ಮಾ ಮಸೀದಿಯಲ್ಲಿ ನಡೆಯುತ್ತಿರುವ ಉರೂಸ್ ಕಾರ್ಯಕ್ರಮದಲ್ಲಿ ಜಮಾತ್ ಆಡಳಿತ ಕಮಿಟಿಯ ನೇತೃತ್ವದಲ್ಲಿ ಜಮಾತಿನ ಹಿರಿಯರು ಮತ್ತು ಸಾಧಕರನ್ನು ಸನ್ಮಾನಿಸಲಾಯಿತು. ಈ ವೇಳೆ ಪೊಳಲಿ - ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯರು, ಸಮಾಜ ಸೇವಕರಾಗಿರುವ ಪೊಳಲಿ ಬಾಬಾ ಫಕ್ರುದ್ದೀನ್ ಜುಮಾ ಮಸ್ಜಿದ್ ನ ಆಡಳಿತ ಕಮಿಟಿಯ ಮಾರ್ಗದರ್ಶಕರಾದ ಲತೀಫ್ ಅಬ್ದುಲ್ ಖಾದರ್ ರನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಎಲ್.ಎಲ್.ಬಿ ಕಲಿಕೆ ಪೂರ್ತಿಗೊಳಿಸಿ ವಕೀಲ ವತ್ತಿಯನ್ನು ಆರಂಭಿಸಿರುವ ಪೊಳಲಿ ಜಮಾತಿನ ಪೈಕಿ ಮೊದನೆಯ ವಕೀಲರಾದ ಮಹಮ್ಮದ್ ಅಫೀಜ್ ಇವರನ್ನು ಕೂಡಾ ನೆರೆದ ಸಭಿಕರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.