Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಶ್ರೀ ರಾಮಾಂಜನೇಯ ಫ್ರೆಂಡ್ಸ್ ಕ್ಲಬ್ ಪಲ್ಲೆದಪಡ್ಪು ಇದರ 17 ನೇ ವರ್ಷದ ವಾರ್ಷಿಕೋತ್ಸವ ಈ ತಿಂಗಳ 20 ರಂದು.

ಶ್ರೀ ರಾಮಾಂಜನೇಯ ಫ್ರೆಂಡ್ಸ್ ಕ್ಲಬ್ ಪಲ್ಲೆದಪಡ್ಪು ಇದರ 17 ನೇ ವರ್ಷದ ವಾರ್ಷಿಕೋತ್ಸವ ಈ ತಿಂಗಳ 20 ರಂದು.
ವರ್ಕಾಡಿ: ಶ್ರೀ ರಾಮಾಂಜನೇಯ ಫ್ರೆಂಡ್ಸ್ ಕ್ಲಬ್ ಪಲ್ಲೆದಪಡ್ಪು ಇದರ 17 ನೇ ವರ್ಷದ ವಾರ್ಷಿಕೋತ್ಸವ ಈ ತಿಂಗಳ 20ರಂದು ಶನಿವಾರ ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಪ್ರದರ್ಶನ, 7 ರಿಂದ ಸಭಾ ಕಾರ್ಯಕ್ರಮ ಜರಗಲಿದ್ದು, ಕೊಡ್ಲಮೊಗರು ಶಾಲೆಯ ಶಿಕ್ಷಕಿ ಶ್ರೀಮತಿ ಆಶಾ ದಿಲೀಪ್, ಕೇರಳ ಗ್ರಾಮೀಣ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಕುಶಲ ಕುಮಾರ ಪಾತುರಾಯ ಬೀಡು, ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಲ್ಚಪ್ಪಾಡ, ಪಲ್ಲೆದಪಡ್ಪು ಶ್ರೀ ರಾಜರಾಜೇಶ್ವರೀ ಭಜನಾ ಮಂದಿರದ ಗೌರವ ಅಧ್ಯಕ್ಷರಾದ ಮಹಾಲಿಂಗ ಭಟ್ ಪಜ್ವ, ಕೊಡ್ಲಮೊಗರು ಆಚಿಮನೆ ಬಂಟು ಶೆಟ್ಟಿ ಯಾನೆ ಶೇಖರ ಶೆಟ್ಟಿ, ಶ್ರೀ ರಾಜರಾಜೇಶ್ವರೀ ಭಜನಾ ಮಂದಿರದ ಅಧ್ಯಕ್ಷರಾದ ಮಾಧವ ಬೀಡು, ಶ್ರೀ ರಾಮಾಂಜನೇಯ ಫ್ರೆಂಡ್ಸ್ ಕ್ಲಬ್ಬಿನ ಅಧ್ಯಕ್ಷರಾದ ಚಂದ್ರಹಾಸ್ ಮಡ್ವ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿರುವರು. ಈ ವೇಳೆ ದಕ್ಷಿಣ ಕನ್ನಡ ಹೆಸರಾಂತ ಡ್ಯಾನ್ಸ್ ಟ್ರೂಫ್ ಆರ್ಯನ್ಸ್ ಮಂಗಳೂರು ಇವರಿಂದ ನೃತ್ಯ ವೈಭವ, ಬಳಿಕ ಶಾರದಾ ಕಲಾ ಆರ್ಟ್ಸ್ ಮಂಜೇಶ್ವರ ಇವರಿಂದ "ಕಥೆ ಎಡ್ಡೆಂಡು" ನಾಟಕ ಪ್ರದರ್ಶನಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.