Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಹೊಸಂಗಡಿ ಬಳಿಯ ಕೊಪ್ಪಳ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ.

ಹೊಸಂಗಡಿ ಬಳಿಯ ಕೊಪ್ಪಳ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ.
ಮಂಜೇಶ್ವರ: ಹೊಸಂಗಡಿ ಬಳಿಯ ಕೊಪ್ಪಳದಲ್ಲಿರುವ "ಉಪ್ಪಳ ನದಿ"ಯಲ್ಲಿ ಸುಮಾರು 35 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಅರೆನಗ್ನ ಸ್ಥಿತಿಯಲ್ಲಿ ಮಗುಚಿ ಬಿದ್ದ ರೀತಿಯಲ್ಲಿ ಮೃತದೇಹವನ್ನು ಸ್ಥಳೀಯರು ಕಂಡು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಠಾಣೆಯ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡಿನ ಸರಕಾರಿ ಆಸ್ಪತ್ರೆಯ ಶವ ಮಹಜರಿಗೆ ದಾಖಲಿಸಿದ್ದಾರೆ. ಕಳೆದೆರಡು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಕಣ್ಣು ಹಾಗೂ ಮುಖದ ಭಾಗ ಕೊಳೆತು ಹೋದ ಕಾರಣ ಮುಖದ ಚಹರೆ ತಿಳಿಯಲು ಅಸಾಧ್ಯವಾಗಿದೆ.ಈ ನದಿಯು ಪುತ್ತೂರು, ವಿಟ್ಲ ಭಾಗದಿಂದ ಹರಿದು ಆನೆಕಲ್ಲು, ಮುನ್ನಿಪ್ಪಾಡಿ, ಕೊಡಂಗೆ, ವಾಮಂಜೂರು ಚೆಕ್ ಪೋಸ್ಟ್, ಕೊಪ್ಪಳ ಮೂಲಕ ಹೊಸಬೆಟ್ಟು ಸಮುದ್ರಕ್ಕೆ ಸೇರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.