Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೃಷಿ ಕಾರ್ಮಿಕರ ಫೇಡರೇಶನ್ (B.K.M.U) ವತಿಯಿಂದ ವಿವಿಧ ಗ್ರಾಮ ಕಚೇರಿ (ವಿಲೇಜ್ ಆಫೀಸ್)ಗೆ ಮಾರ್ಚ್.

ಮಂಜೇಶ್ವರ: ಕ್ಷೇಮನಿಧಿ ಬಾಕಿ ಕಂತು ತಕ್ಷಣ ವಿತರಿಸಬೇಕು. ಕೃಷಿ ಕಾರ್ಮಿಕರಿಗೆ ಆದಾಯ ರಹಿತ ಪಿಂಚಣಿ ನೀಡಬೇಕು. ಉದ್ಯೋಗ ಖಾತರಿ ಕಾರ್ಮಿಕರಿಗೆ 700 ರೂ ವೇತನ ನೀಡಬೇಕು. ಕೃಷಿ ಕಾರ್ಮಿಕರ ಕ್ಷೇಮನಿಧಿಗೆ ಸರಕಾರ 500 ಕೋಟಿ ರೂ ಅನುದಾನ ನೀಡಬೇಕೆಂಬ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೃಷಿ ಕಾರ್ಮಿಕರ ಫೇಡರೇಶನ್(B.K.M.U) ವತಿಯಿಂದ ವಿವಿಧ ಗ್ರಾಮ ಕಚೇರಿ (ವಿಲೇಜ್ ಆಫೀಸ್)ಗೆ ಮಾರ್ಚ್ ಧರಣಿ ನಡೆಯಿತು.
ಹೊಸಬೆಟ್ಟು ವಿಲೇಜ್ ಆಪೀಸ್ ಧರಣಿಯನ್ನು B.K.M.U ಮಂಡಲ ಅಧ್ಯಕ್ಷ ಎಸ್. ರಾಮಚಂದ್ರ ಬಡಾಜೆ ಉದ್ಘಾಟಿಸಿದರು. ಸಿಪಿಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ ಅಧ್ಯಕ್ಷತೆ ವಹಿಸಿದರು. AIYF ಮಂಜೇಶ್ವರ ಮಂಡಲ ಕಾರ್ಯದರ್ಶಿ ದಯಾಕರ ಮಾಡ ಸ್ವಾಗತಿಸಿ, ಸಿಪಿಐ ಲೋಕಲ್ ಸಮಿತಿ ಸದಸ್ಯ ರಮೇಶ್ ಉದ್ಯಾವರ ವಂದಿಸಿದರು.
ಮೀಂಜ ವಿಲೇಜ್ ಆಪೀಸ್ ಧರಣಿಯನ್ನು B.K.M.U ಮಂಡಲ ಕಾರ್ಯದರ್ಶಿ ಗಂಗಾಧರ್ ಕೊಡ್ಡೆ ಉದ್ಘಾಟಿಸಿದರು, ಸಿಪಿಐ ಹಿರಿಯ ಕಾರ್ಯಕರ್ತರಾದ ವಿಶ್ವನಾಥ ಶೆಟ್ಟಿ ಕುಳೂರು ಅಧ್ಯಕ್ಷತೆ ವಹಿಸಿದರು. AIYF ಮಂಜೇಶ್ವರ ಮಂಡಲ ಅಧ್ಯಕ್ಷ ಶರತ್ ಬೆಜ್ಜ ಸ್ವಾಗತಿಸಿ, ವಂದಿಸಿದರು.
ಉಪ್ಪಳ ವಿಲೇಜ್ ಆಪೀಸ್ ಧರಣಿಯನ್ನು ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್ ಉದ್ಘಾಟಿಸಿದರು. ಸಿಪಿಐ ಉಪ್ಪಳ ಲೋಕಲ್ ಕಾರ್ಯದರ್ಶಿ ಹರೀಶ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸಿಪಿಐ ಉಪ್ಪಳ ಲೋಕಲ್ ಸಮಿತಿ ಸದಸ್ಯ ದಯಾನಂದ ಪಂಡಿತ್ ಸ್ವಾಗತಿಸಿ, ಸಿಪಿಐ ಮೂಸೋಡಿ ಬ್ರಾಂಚ್ ಕಾರ್ಯದರ್ಶಿ ಫಾರೂಕ್ ಮೂಸೋಡಿ ವಂದಿಸಿದರು.
ವರ್ಕಾಡಿ ವಿಲೇಜ್ ಆಪೀಸ್ ಧರಣಿಯನ್ನು AITUC ಮಂಜೇಶ್ವರ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್ ಉದ್ಘಾಟಿಸಿದರು. ಪೂವಪ್ಪ ಕಲ್ಲೂರು ಅಧ್ಯಕ್ಷತೆ ವಹಿಸಿದರು. ಭುಜಂಗ ಸ್ವಾಗತಿಸಿ ಲೋಕೇಶ್ ಪಾವಳ ವಂದಿಸಿದರು. ವಿವಿಧ ಕಡೆ ಧರಣಿಗೆ ಸಿಪಿಐ, BKMU, AIYF, NFIW ನೇತಾರರು, ಕಾರ್ಯಕರ್ತರು ನೇತೃತ್ವ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.