Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕಾಸರಗೋಡು ರೆವೆನ್ಯೂ ಜಿಲ್ಲಾ ಕರಾಟೆ ಚಾಂಪಿಯನ್ ಶಿಪ್ ಕುಂಬಳೆ ಶಾಟೊಕನ್ ಕಾನ್ ಕರಾಟೆ ಅಕಾಡೆಮಿಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ.

ಕಾಸರಗೋಡು ರೆವೆನ್ಯೂ ಜಿಲ್ಲಾ ಕರಾಟೆ ಚಾಂಪಿಯನ್ ಶಿಪ್ ಕುಂಬಳೆ ಶಾಟೊಕನ್ ಕಾನ್ ಕರಾಟೆ ಅಕಾಡೆಮಿಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ.
ಕುಂಬಳೆ: ಕಾಸರಗೋಡು ರೆವೆನ್ಯೂ ಜಿಲ್ಲಾ ಕರಾಟೆ ಚಾಂಪಿಯನ್ ಶಿಪ್ ನಿನ್ನೆ ಸೀತಾಂಗೋಳಿ ಕರಾಟೆ ಅಂಡ್ ಫಿಟ್ನೆಸ್ ಟುಟೋರಿಯಲ್ ನಲ್ಲಿ ನಡೆಯಿತು. ಸೀನಿಯರ್ ವನಿತಾ ಬಿಲೋ 52 ಕೆಜಿ ವಿಭಾಗದಲ್ಲಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮಂಗಲ್ಪಾಡಿಯನ್ನು ಪ್ರತಿನಿಧಿಕರಿಸಿಕೊಂಡ ಪ್ಲಸ್ ಟು ವಿದ್ಯಾರ್ಥಿಯಾದ ಮೇಘಾದಾಸ್ ಪ್ರಥಮ ಬಹುಮಾನವನ್ನುಗಳಿಸಿದ್ದಾರೆ. ಇವರು ಡಿಸೆಂಬರ್ 10 ರಂದು ತಿರುವನಂತಪುರದಲ್ಲಿ ನಡೆಯುವ ಕೇರಳ ರೆವೆನ್ಯೂ ಸ್ಟೇಟ್ ಶಿಫ್ ಗೆ ಆಯ್ಕೆಯಾಗಿದ್ದಾರೆ. ಇವರು ಕುಂಬಳೆ ನಿವಾಸಿ ಸುನೀತಾ ರವರ ಪುತ್ರಿಯಾಗಿದ್ದಾರೆ. ಕುಂಬಳೆ ಶಾಟೊಕನ್ ಕಾನ್ ಕರಾಟೆ ಅಕಾಡೆಮಿಯ ತರಬೇತುದಾರರಾದ ಶೈನಿದಾಸ್ ರ ಶಿಷ್ಯೆಯಾಗಿದ್ದು, ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
ಸೀನಿಯರ್ ಬಿಲೋ 35 ಕೆಜಿ ಪುರುಷ ವಿಭಾಗದಲ್ಲಿ ಎಂ.ಎಚ್. ಸಿ.ಎಚ್ ನೀರ್ಚಾಲ್ ಶಾಲೆಯನ್ನು ಪ್ರತಿನಿಧಿಕರಿಸಿಕೊಂಡು 9 ನೇ ತರಗತಿಯ ವಿದ್ಯಾರ್ಥಿಯಾದ ರಾಮಕೃಷ್ಣ ದ್ವಿತೀಯ ಸ್ಥಾನವನ್ನುಗಳಿಸಿದ್ದಾರೆ. ಇವರು ಪ್ರಶಾಂತ ರಾಜ್ ಮೋಹಿನಿ ದಂಪತಿಗಳ ಪುತ್ರರಾಗಿದ್ದಾರೆ.
ಸೀನಿಯರ್ ಪುರುಷ ವಿಭಾಗ ಬಿಲೋ 40 ಕೆಜಿಯಲ್ಲಿ ಎಂ. ಎಸ್. ಸಿ. ಎಚ್. ನಿರ್ಚಾಲ್ ಶಾಲೆಯನ್ನು ಪ್ರತಿನಿಧಿಕರಿಸಿಕೊಂಡು ಎಂಟನೇ ತರಗತಿಯ ವಿದ್ಯಾರ್ಥಿಯಾದ ರಂದೀಪ್ ಪಿ. ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ಇವರು ರಾಮ ಮತ್ತು ರಂಜಿನಿ ದಂಪತಿಗಳ ಪುತ್ರರಾಗಿದ್ದಾರೆ.
9 ನೇ ಕಾಸರಗೋಡು ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಚಾಂಪಿಯನ್ ಶಿಪ್ ನೆಹರು ಕಾಲೇಜಿನಲ್ಲಿ ನಡೆಯಿತು. ಕೆಡೆಟ್ ಬಾಯ್ಸ್ (ಕತಾ) ಎಂಬ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಅಭಿನವ್ ಡಿ. ಈತ ಜಿ.ಎಸ್. ಬಿ.ಎಸ್ ಕುಂಬಳೆ ಶಾಲೆಯ 4 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಡಿಸೆಂಬರ್ 25, 26, 27 ರಂದು ಎರ್ನಾಕುಲಂನಲ್ಲಿ ನಡೆಯಲಿರುವ ರಾಜ್ಯ ಸ್ಪೋರ್ಟ್ಸ್ ಕರಾಟೆ ಅಶೋಷಿಯೇಶನ್ ನಲ್ಲಿ ಕಾಸರಗೋಡನ್ನು ಜಿಲ್ಲೆಯನ್ನು ಪ್ರತಿನಿಧಿಕರಿಸಿಕೊಂಡು ಭಾಗವಹಿಸಲಿರುವನು. ಇವನು ದಿನೇಶ್ ಸರಳ ದಂಪತಿಗಳ ಪುತ್ರನಾಗಿದ್ದಾನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.