ಯಾವುದೇ ಶೀರ್ಷಿಕೆಯಿಲ್ಲ
ಡಿಸೆಂಬರ್ 08, 2023
0
ಮಂಜೇಶ್ವರ: ಕುಟುಂಬಗಳ ನೆಮ್ಮದಿ ಹಾಳು ಮಾಡುವ ಸಾಮಾಜಿಕ ಪಿಡುಗು ಕುಡಿತದ ಚಟ ಜನರಲ್ಲಿ ಸಂಪೂರ್ಣ ನಿರ್ಮೂಲನೆ ಮಾಡಲು ಮದ್ಯವರ್ಜನ ಶಿಬಿರ ಸಹಕಾರಿ ಎಂದು ಕಾಸರಗೋಡು ಜನಜಾಗೃತಿ ವೇದಿಕೆ ಸದಸ್ಯರಾದ ಮಂಜುನಾಥ್ ಆಳ್ವ ನುಡಿದರು. ಅವರು ನಿನ್ನೆ ಬಂಗ್ರ ಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯುತ್ತಿರುವ 1766 ನೇ ಮದ್ಯವರ್ಜನ ಶಿಬಿರದಲ್ಲಿ ಗಣ್ಯರ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಹೊಸಂಗಡಿ ಶ್ರೀ ಅಯ್ಯಪ್ಪ ಅಧ್ಯಕ್ಷ ಪದ್ಮನಾಭ ಕಡಪ್ಪರ, ಪುತ್ತೂರು ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಲೋಕೇಶ್ ಹೆಗಡೆ, ವೀರಭದ್ರ ಮಹಾಮಾಯಿ ದೇವಸ್ಥಾನದ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿಗಾರ್, ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಯದುನಂದನ ಆಚಾರ್ಯ ಕಡಂಬಾರ್, ಕುಂಬಳೆ ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಪುಣಿಯೂರ್, ಸಾಮಾಜಿಕ ಕಾರ್ಯಕರ್ತ ಪುಷ್ಪರಾಜ್ ಐಲ, ಜನಜಾಗೃತಿ ವೇದಿಕೆ ನಾರಾಯಣ ಮಾಟೆ, ನಿವೃತ್ತ ಮುಖ್ಯೋಪಾಧ್ಯಾಯ ಈಶ್ವರ ಮಾಸ್ಟರ್, ಜನಜಾಗೃತಿ ವೇದಿಕೆ ಕಾಸರಗೋಡು ಜಿಲ್ಲಾಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಜನಜಾಗೃತಿ ವೇದಿಕೆ ಸದಸ್ಯ ಪ್ರೊ. ಶ್ರೀನಾಥ್ ಕಾಸರಗೋಡು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಾಸಂಷಣೆಗೈದರು. ಎಡನೀರು ಮೇಲ್ವಿಚಾರಕಿ ಸುನಿತ ಸ್ವಾಗತಿಸಿ, ಸುಂಕದಕಟ್ಟೆ ವಲಯದ ಮೇಲ್ವಿಚಾರಕರಾದ ಕೃಷ್ಣಪ್ಪ ನಿರೂಪಿಸಿ, ಸೇವಾ ಪ್ರತಿನಿಧಿ ಮಲ್ಲಿಕಾ ವಂದಿಸಿದರು. ಬೆಳಗ್ಗೆ ಶ್ರೀ ಮಂಜುನಾಥ ನವ ಜೀವನ ಸಮಿತಿ ಪಾವಳ ಹಾಗೂ ಶ್ರೀ ಮಂಜುನಾಥ ನವಜೀವನ ಸಮಿತಿ ಮೀಂಜ ಸದಸ್ಯರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಶಿಬಿರಾರ್ಥಿಗಳಿಗೆ ವ್ಯಕ್ತಪಡಿಸಿದರು. ಕೊಡ್ಲಮೊಗರು ಶ್ರೀ ವಾಣಿ ವಿಜಯ ಹೈಯ್ಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯಿಣಿ ಶ್ರೀಮತಿ ಕೃಷ್ಣವೇಣಿ ಕೌಟುಂಬಿಕ ಸಲಹೆ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜ್ಞಾನವಿಕಾಸ ಕೇಂದ್ರಗಳು, ಪ್ರಗತಿ ಬಂಧು ಸ್ವ - ಸಹಾಯ ಸಂಘಗಳ ಒಕ್ಕೂಟ ಸುಂಕದಕಟ್ಟೆ ವಲಯ ಇವರಿಂದ ವಿವಿಧ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಸಂಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಸುಂಕದಕಟ್ಟೆ ಹಾಗೂ ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಶಿಬಿರಾಧಿಕಾರಿ ದೇವಿ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು








