ಅಗಲಿದ ಸಿ.ಪಿ.ಐ ರಾಜ್ಯ ಕಾರ್ಯದರ್ಶಿ ಕಾಂ. ಕಾನಂ ರಾಜೇಂದ್ರನ್ ರಿಗೆ ಸಿಪಿಐ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಹೊಸಂಗಡಿ ಎ.ಕೆ.ಜಿ ಮಂದಿರ ಸಮೀಪ ಸರ್ವಪಕ್ಷ ಸಂತಾಪ ಸೂಚಕ ಸಭೆ.
ಡಿಸೆಂಬರ್ 13, 2023
0
ಅಗಲಿದ ಸಿ.ಪಿ.ಐ ರಾಜ್ಯ ಕಾರ್ಯದರ್ಶಿ ಕಾಂ. ಕಾನಂ ರಾಜೇಂದ್ರನ್ ರಿಗೆ ಸಿಪಿಐ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಹೊಸಂಗಡಿ ಎ.ಕೆ.ಜಿ ಮಂದಿರ ಸಮೀಪ ಸರ್ವಪಕ್ಷ ಸಂತಾಪ ಸೂಚಕ ಸಭೆ.
ಮಂಜೇಶ್ವರ: ಅಗಲಿದ ಸಿ.ಪಿ.ಐ ರಾಜ್ಯ ಕಾರ್ಯದರ್ಶಿ ಕಾಂ. ಕಾನಂ ರಾಜೇಂದ್ರನ್ ರವರಿಗೆ ಸಿಪಿಐ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಹೊಸಂಗಡಿ ಎ.ಕೆ.ಜಿ ಮಂದಿರ ಸಮೀಪ ಸರ್ವಪಕ್ಷ ಸಂತಾಪ ಸೂಚಕ ಸಭೆ ನಡೆಯಿತು. ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಸಂತಾಪ ಸೂಚಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಿಪಿಐ ರಾಜ್ಯ ಸಮಿತಿ ಸದಸ್ಯರಾದ ಗೋವಿಂದನ್ ಪಳ್ಳಿಕಾಪ್ಪಿಲ್, ಸಿಪಿಐ(ಎಂ) ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಆರ್ ಜಯಾನಂದ, ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಕೋಶಾಧಿಕಾರಿ ಸೈಫುಲ್ಲ ತಂಗಳ್, ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯದರ್ಶಿ ಆದರ್ಶ್ ಬಿ.ಎಂ, ಜೆ.ಡಿ.ಎಸ್ ನೇತಾರ ಕೆ.ಎ ಖಾದರ್, ದಲಿತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಗುರುವಪ್ಪ ಮಂಜೇಶ್ವರ, ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ, AIYF ಜಿಲ್ಲಾ ಅಧ್ಯಕ್ಷ ಅಜಿತ್ ಎಂ.ಸಿ ಲಾಲ್ಬಾಗ್ ಮೊದಲಾದವರು ಮಾತನಾಡಿದರು. ಸಿಪಿಐ ಜಿಲ್ಲಾ ಸಮಿತಿ ಸದಸ್ಯ ರಾಮಕೃಷ್ಣ ಕಡಂಬಾರ್ ಸ್ವಾಗತಿಸಿ, ಸಿಪಿಐ ಮಂಜೇಶ್ವರ ಮಂಡಲ ಸಹ ಕಾರ್ಯದರ್ಶಿ ಎಸ್. ರಾಮಚಂದ್ರ ಬಡಾಜೆ ವಂದಿಸಿದರು.



