ಅಯೋಧ್ಯೆಯಿಂದ ಪುತ್ತೂರು ಹಾರಾಡಿ ಗ್ರಾಮಕ್ಕೆ ತಲುಪಿದ ಶ್ರೀರಾಮನ ಮಂತ್ರಾಕ್ಷತೆ. ಮೊಳಗಿತು ಜಯಘೋಷ.! ಪ್ರತೀ ದಿನ ಶ್ರೀ ಸತ್ಯ ದೇವತೆ ಕಲ್ಲುರ್ಟಿ ಸನ್ನಿಧಾನದಲ್ಲಿ ಪೂಜೆ ಪುನಸ್ಕಾರ.
ಡಿಸೆಂಬರ್ 10, 2023
0
ಅಯೋಧ್ಯೆಯಿಂದ ಪುತ್ತೂರು ಹಾರಾಡಿ ಗ್ರಾಮಕ್ಕೆ ತಲುಪಿದ ಶ್ರೀರಾಮನ ಮಂತ್ರಾಕ್ಷತೆ. ಮೊಳಗಿತು ಜಯಘೋಷ.! ಪ್ರತೀ ದಿನ ಶ್ರೀ ಸತ್ಯ ದೇವತೆ ಕಲ್ಲುರ್ಟಿ ಸನ್ನಿಧಾನದಲ್ಲಿ ಪೂಜೆ ಪುನಸ್ಕಾರ.
ಪುತ್ತೂರು: ಅಯೋಧ್ಯೆಯ ಶ್ರೀರಾಮ ಮಂದಿರದಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಆಗಮಿಸಿದ ರಾಮ ಮಂತ್ರಾಕ್ಷತೆಯನ್ನು ಪ್ರತೀ ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಪುತ್ತೂರು ಹಾರಾಡಿ ಗ್ರಾಮಕ್ಕೆ ವಿತರಿಸಲು ತಂದ ಮಂತ್ರಾಕ್ಷತೆಯನ್ನು ಶ್ರೀ ಸತ್ಯ ದೇವತೆ ಕಲ್ಲುರ್ಟಿ ಸನ್ನಿಧಿಗೆ ತಲುಪಿದಾಗ, ಊರ ಭಕ್ತರು ಹರ್ಷೋದ್ಘಾರದ ಮೂಲಕ ಸ್ವೀಕರಿಸಿ, ಜಯಘೋಷ ಮೊಳಗಿಸಿದರು. ಇನ್ನು ಇಲ್ಲಿ ಪ್ರತೀ ದಿನ ಬೆಳಗ್ಗೆ ಗುಡ್ಡೆಮನೆ ವಿಶ್ವನಾಥ ಆಚಾರ್ಯರ ನೇತೃತ್ವದಲ್ಲಿ ಮಂತ್ರಾಕ್ಷತೆಗೆ ಪೂಜೆ ಪುನಸ್ಕಾರ ನಡೆಯಲಿದ್ದು, ಜನವರಿ 1 ರಂದು ನಡೆಯುವ ಅಯೋಧ್ಯೆ ಶ್ರೀ ರಾಮಮಂದಿರದ ಪ್ರತಿಷ್ಠೆ ದಿನ ಪೂಜೆ ಸಲ್ಲಿಸಿ, ಬಳಿಕ ಹಾರಾಡಿ ಗ್ರಾಮದ ಪ್ರತೀ ಮನೆ ಮನೆಗೆ ಅಯೋಧ್ಯಾ ಶ್ರೀ ರಾಮ ದೇವರ ಮಂತ್ರಾಕ್ಷತೆಯನ್ನು ವಿತರಿಸಲಾಗುವುದು.