ವರ್ಕಾಡಿ "ವಿಶ್ವಪ್ರಭಾ" ಸಮೂಹ ಸಂಸ್ಥೆಗಳ ಮಾಲಕ ಪ್ರಭಾಕರ ಆಚಾರ್ಯ (78) ನಿಧನ.
ಡಿಸೆಂಬರ್ 17, 2023
0
ವರ್ಕಾಡಿ "ವಿಶ್ವಪ್ರಭಾ" ಸಮೂಹ ಸಂಸ್ಥೆಗಳ ಮಾಲಕ ಪ್ರಭಾಕರ ಆಚಾರ್ಯ (78) ನಿಧನ.
ಮಂಜೇಶ್ವರ: ವರ್ಕಾಡಿ ಸುಂಕದಕಟ್ಟೆಯಲ್ಲಿರುವ "ವಿಶ್ವ ಪ್ರಭಾ" (ಜ್ಯುವೆಲ್ಲರಿ, ಸಭಾಂಗಣ, ಕಾಂಪ್ಲೆಕ್ಸ್, ಟೂರ್ಸ್ & ಟ್ರಾವೆಲ್ಸ್) ಸಮೂಹ ಸಂಸ್ಥೆಗಳ ಮಾಲಕರಾಗಿರುವ ಪ್ರಭಾಕರ ಆಚಾರ್ಯ (78) ಪ್ರಾಯ ಪ್ರಬುದ್ಧರಾಗಿದ್ದು, ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದರು. ಇಂದು ಮುಂಜಾನೆ 2.50 ರ ವೇಳೆ ಸ್ವ - ಗೃಹದಲ್ಲಿ ನಿಧನರಾದರು. ಮೃತರು ದಿ. ನಾರಾಯಣ ಆಚಾರ್ಯ - ದಿ. ಸಂಜೀವಿ ದಂಪತಿಯ ಪುತ್ರರಾಗಿದ್ದು, ಪತ್ನಿ: ಲಲಿತಾ, ಮಕ್ಕಳಾದ: ಪ್ರಮೀಳಾ, ಪ್ರವೀಣ್ ಆಚಾರ್ಯ, ಪ್ರಕಾಶ್ ಆಚಾರ್ಯ, ಸೌಮ್ಯ, ಅಳಿಯಂದಿರಾದ: ರಮೇಶ್ ಆಚಾರ್ಯ ಮಂಗಳೂರು, ಕಿರಣ್ ಆಚಾರ್ಯ ಮಂಗಳೂರು (ಬೆಂಗಳೂರು), ಸೊಸೆಯಂದಿರಾದ: ಲಾವಣ್ಯ, ಅಕ್ಷತಾ (ಗಾಯಕಿ), ಸಹೋದರ - ಸಹೋದರಿಯರಾದ: ಜಗದೀಶ್ ಆಚಾರ್ಯ ವರ್ಕಾಡಿ, ಯೋಗೀಶ್ ಆಚಾರ್ಯ ವರ್ಕಾಡಿ (ಸ್ವರ್ಣ ಶ್ರೀ ಜ್ಯುವೆಲ್ಲರಿ), ದಿನೇಶ್ ಆಚಾರ್ಯ ವರ್ಕಾಡಿ, ವಸಂತಿ, ಸುನಿತ, ಶಾಲಿನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಸಹೋದರ - ಸಹೋದರಿ ಪೈಕಿ ಹರೀಶ್ಚಂದ್ರ ಆಚಾರ್ಯ ಹಾಗೂ ಸುಮತಿ ಈ ಹಿಂದೆ ನಿಧನರಾಗಿದ್ದಾರೆ. ಮೃತರು ವರ್ಕಾಡಿಯ ಶ್ರೀ ವಿಶ್ವಕರ್ಮ ಸಂಘದ ಮಾಜಿ ಅಧ್ಯಕ್ಷರಾಗಿ, ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮತ್ತು ಮಂಗಳೂರು ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ ವರ್ಕಾಡಿ ಕೂಡುವಳಿಕೆಯ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ಶ್ರೀ ಗುರು ಸೇವಾ ಪರಿಷತ್ ವರ್ಕಾಡಿ ಸಮಿತಿಯ ಗೌರವಾಧ್ಯಕ್ಷರಾಗಿದ್ದರು. ಮೃತರ ಅಂತ್ಯಕ್ರಿಯೆ ಇಂದು ಬೆಳಗ್ಗೆ 11 ಗಂಟೆಗೆ ಮೊರತ್ತನೆಯ ಸಾರ್ವಜನಿಕ ಹಿಂದೂ ರುದ್ರ ಭೂಮಿಯಲ್ಲಿ ನಡೆಯಲಿದೆ. ನಿಧನಕ್ಕೆ ಶ್ರೀ ಗುರು ಸೇವಾ ಪರಿಷತ್ ಕೇಂದ್ರಿಯ ಮಂಡಳಿ ಪಡುಕುತ್ಯಾರು, ಅಸೆಟ್ ಸಮಿತಿ ಪಡುಕುತ್ಯಾರು, ಶ್ರೀ ಗುರು ಪೀಠ ಪ್ರತಿಷ್ಟಾನದ ಸಮಿತಿ, ಮಂಗಳೂರು ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತ ಸಮಿತಿ, ಶ್ರೀ ವಿಶ್ವಕರ್ಮ ಸಂಘ ವರ್ಕಾಡಿ, ಮತ್ತು ವರ್ಕಾಡಿಯ ವಿಶ್ವಕರ್ಮ ಸಮಾಜ ಬಾಂಧವರು ಸಂತಾಪ ಸೂಚಿಸಿದ್ದಾರೆ.

