ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಧನುರ್ಮಾಸ ಪೂಜೆ ಆರಂಭ.
ಡಿಸೆಂಬರ್ 17, 2023
0
ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಧನುರ್ಮಾಸ ಪೂಜೆ ಆರಂಭ.
ಮಂಜೇಶ್ವರ: ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಧನುರ್ಮಾಸ ಪೂಜೆಯು ಇಂದಿನಿಂದ ಆರಂಭಗೊಂಡಿದ್ದು ಜನವರಿ 14 ರ ಮಕರ ಸಂಕ್ರಮಣದ ವರೆಗೆ ಪ್ರತೀ ನಿತ್ಯ ಬೆಳಗ್ಗೆ 6.15 ಕ್ಕೆ ದೇವರಿಗೆ ಪೂಜೆ ಪುನಸ್ಕಾರ ನಡೆಯಲಿದೆ. ಇಂದು ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮ ಶ್ರೀ ಉಮೇಶ್ ತಂತ್ರಿ ಮಂಗಳೂರು ದೀಪ ಬೆಳಗಿಸುವ ಮೂಲಕ ಪೂಜಾ ಕೈಂಕರ್ಯಕ್ಕೆ ಚಾಲನೆ ನೀಡಿದರು. ಕ್ಷೇತ್ರದ ಆಡಳಿತ ಮೊಕ್ತೇಸರರಾದ ಮುಳಿಗದ್ದೆ ವೆಂಕಟ್ರಮಣ ಆಚಾರ್ಯ, ದೇವದಾಸ ಆಚಾರ್ಯ ಕೋಟೆಕಾರ್, ಉಳುವಾರು ವೆಂಕಟ್ರಮಣ ಆಚಾರ್ಯ, ಕ್ಷೇತ್ರದ ಅಧ್ಯಕ್ಷರಾದ ಬಿ.ಎಂ ಯದುನಂದನ ಆಚಾರ್ಯ ಕಡಂಬಾರು ದೀಪ ಬೆಳಗಿಸಿದರು. ಈ ವೇಳೆ ಕ್ಷೇತ್ರದ ಅಂಗ ಸಂಸ್ಥೆ ಓಜ ಸಾಹಿತ್ಯ ಕೂಟದವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಶ್ರೀ ದೇವರಿಗೆ 6.15 ರ ಮುಹೂರ್ತದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಇನ್ನು ಪ್ರತೀ ದಿನ ಬೆಳಗ್ಗೆ 6.15 ಕೆ ಪೂಜೆ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ, ಫಲಾಹಾರ ನಡೆಯಲಿದೆ.




