ಇಡ್ಲಿ ಉದ್ಯಮ ಪ್ರಾರಂಭಿಸಿ, ಮಂಜೇಶ್ವರದಾದ್ಯಂತ ವಿವಿಧ ಹೋಟೆಲ್, ಕ್ಯಾಂಟೀನ್ ಗಳಿಗೆ ವಿತರಿಸುತ್ತಾ "ಇಡ್ಲಿ ಸೋಜರ್" ಎಂದೇ ಖ್ಯಾತಿ ಪಡೆದ ಮಜಿಬೈಲ್ ನಿವಾಸಿ ಇಲಿಯಾಸ್ ಡಿ' ಸೋಜಾ (66) ನಿಧನ.
ಡಿಸೆಂಬರ್ 16, 2023
0
ಇಡ್ಲಿ ಉದ್ಯಮ ಪ್ರಾರಂಭಿಸಿ, ಮಂಜೇಶ್ವರದಾದ್ಯಂತ ವಿವಿಧ ಹೋಟೆಲ್, ಕ್ಯಾಂಟೀನ್ ಗಳಿಗೆ ವಿತರಿಸುತ್ತಾ "ಇಡ್ಲಿ ಸೋಜರ್" ಎಂದೇ ಖ್ಯಾತಿ ಪಡೆದ ಮಜಿಬೈಲ್ ನಿವಾಸಿ ಇಲಿಯಾಸ್ ಡಿ' ಸೋಜಾ (66) ನಿಧನ.
ಮಂಜೇಶ್ವರ: ಬೆಳ್ಳಂ ಬೆಳಗ್ಗೆ ಬಿಸಿ ಬಿಸಿ ಇಡ್ಲಿ ತಯಾರಿಸಿ, ಮಂಜೇಶ್ವರದಾದ್ಯಂತ ವಿವಿಧ ಹೋಟೆಲ್, ಕ್ಯಾಂಟೀನ್ ಗಳಿಗೆ ವಿತರಿಸುತ್ತಾ "ಇಡ್ಲಿ ಸೋಜಾರ್" ಎಂದೇ ಖ್ಯಾತಿ ಪಡೆದ ಮಜಿಬೈಲ್ ನಿವಾಸಿ ಇಲಿಯಾಸ್ ಡಿ' ಸೋಜಾ (66) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಕಳೆದ ಹಲವು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಅಪರಾಹ್ನ ನಿಧನನಾದರು. ಮೃತರು ಹಲವು ವರ್ಷಗಳಿಂದ ಹೊಸಂಗಡಿ ಪೇಟೆಯಲ್ಲಿ ರಿಕ್ಷಾ, ಜೀಪು, ಕಾರು ಚಾಲಕರಾಗಿದ್ದರು. ಬಳಿಕ ಹೊಸಂಗಡಿ ಪೈವಳಿಕೆ ಟವರ್ ನಲ್ಲಿ ಜ್ಯೂಸ್ ಅಂಗಡಿ ತೆರೆದು 10 ವರ್ಷಗಳ ಕಾಲ ಕಾರ್ಯಚರಿಸಿ, ಬಳಿಕ ಇಡ್ಲಿ ಉದ್ಯಮಕ್ಕೆ ಚಾಲನೆ ನೀಡಿದರು. ಕಳೆದ 15 ವರ್ಷಗಳಿಂದ ಪ್ರತೀ ದಿನ ಬೆಳ್ಳಂ ಬೆಳಗ್ಗೆ 2.30 ಗಂಟೆಗೆ ಎದ್ದು ಮನೆ ಮಂದಿಯ ನೆರವಿನೊಂದಿಗೆ ದಿನವೊಂದಕ್ಕೆ ಸುಮಾರು 2000 ಇಡ್ಲಿ ತಯಾರಿಸಿ, ಹೊಸಂಗಡಿ, ಮಂಜೇಶ್ವರ, ಮೀಯಪದವು, ಉಪ್ಪಳ ಭಾಗದ ಹೋಟೆಲ್, ಕ್ಯಾಂಟೀನ್ ಗಳಿಗೆ, ಕೇಟರರ್ಸ್ ಗಳಿಗೆ ವಿತರಿಸುತ್ತಿದ್ದರು. ಹಾಗೂ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಇಡ್ಲಿ ತಯಾರಿಸಿ ನೀಡುತ್ತಿದ್ದರು. ಮೃತರು ಪತ್ನಿ ಗ್ರೇಸಿ ಡಿ'ಸೋಜಾ, ಮಕ್ಕಳಾದ ಜೋಶ್ನಾ, ಜಸ್ಟಿನ್ ಅಳಿಯ ಪ್ರವೀಣ್ ಸಂತೋಷ್ ವಿಟ್ಲ ಹಾಗೂ ಸಹೋದರ ಸಹೋದರಿಯರನ್ನು ಆಗಲಿದ್ದಾರೆ. ಮೃತದೇಹವನ್ನು ನಾಳೆ ಬೆಳಗ್ಗೆ ಮನೆಗೆ ತರಲಾಗುವುದು ಬಳಿಕ 11 ಗಂಟೆಗೆ ಮಂಜೇಶ್ವರ ಮರ್ಸಿ ಮಾತೆಯ ದೇವಾಲಯದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

