Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಉಪ್ಪಳ ರಚನಾದ ಸಕ್ರಿಯ ಸದಸ್ಯ ಹಾಗೂ ದೃಶ್ಯ ರೂಪಕದ ಸಂಯೋಜಕ ಸಾಯಿ ಪ್ರಸಾದ್ ಅಲ್ಪ ಕಾಲದ ಅಸೌಖ್ಯದಿಂದ ನಿಧನ.

ಉಪ್ಪಳ ರಚನಾದ ಸಕ್ರಿಯ ಸದಸ್ಯ ಹಾಗೂ ದೃಶ್ಯ ರೂಪಕದ ಸಂಯೋಜಕ ಸಾಯಿ ಪ್ರಸಾದ್ ಅಲ್ಪ ಕಾಲದ ಅಸೌಖ್ಯದಿಂದ ನಿಧನ.
ಉಪ್ಪಳ: ಕರುಳು ಸಂಬಂಧ ಅಲ್ಪ ಕಾಲದ ಅಸೌಖ್ಯದಿಂದ ಬಳತಿದ್ದ ಯುವಕನೋರ್ವ ನಿಧನರಾಗಿದ್ದಾರೆ. ಉಪ್ಪಳ ವಿಕ್ರಂ ಬಜಾರ್ ನ ಶ್ರೀರಾಮ ನಿವಾಸದ ಜಯರಾಮ ಎಂಬವರ ಪುತ್ರ ಸಾಯಿ ಪ್ರಸಾದ್ (43) ನಿನ್ನೆ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಎರಡು ವರ್ಷಗಳಿಂದ ಕರುಳು ಸಂಬಂಧಿಸಿದ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದರು. ನಾಲ್ಕು ದಿನಗಳ ಹಿಂದೆ ಉಲ್ಬಣಗೊಂಡು ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ದಾಖಿಸಲಾಗಿತ್ತು. ಇವರು ಉಪ್ಪಳದ ರಚನಾ ಸಾಂಸ್ಕೃತಿಕ ಕಲಾ ಸಂಸ್ಥೆಯ ಸಕ್ರಿಯ ಸದಸ್ಯರಾಗಿದ್ದು,
ಮುಳಿಂಜ ಶ್ರೀ ಮಹಾಗಣಪತಿಯ ವಿಸರ್ಜನಾ ಶೋಭಾಯಾತ್ರೆಯಲ್ಲಿ ರಚನಾ ಉಪ್ಪಳ ಸಂಸ್ಥೆಯ ವತಿಯಿಂದ 35 ನೇ ವರ್ಷದ ದೃಶ್ಯ ರೂಪಕ ಹಾಗೂ
ಉಪ್ಪಳ ಶ್ರೀ ಅಯ್ಯಪ್ಪ ದೀಪೋತ್ಸವ ವೇಳೆ ಸಂಸ್ಥೆಯ ವತಿಯಿಂದ 32 ವರ್ಷಗಳ ಕಾಲ ದೃಶ್ಯ ರೂಪಕವನ್ನು ಸಂಯೋಜಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಈ ವರ್ಷದ ಅಯ್ಯಪ್ಪ ದೀಪೋತ್ಸವಕ್ಕೆ 33 ನೇ ವರ್ಷದ ಕಲಾ ಕಾಣಿಕೆಯನ್ನು ಸಮರ್ಪಿಸಲು ಅಣಿ ಆಗುತ್ತಿದ್ದಂತೆ ವಿಧಿ ಇನ್ನಿಲದ ಲೋಕಕ್ಕೆ ಕರೆದೊಯ್ಯಿತು. ಮೃತರು ತಂದೆ, ತಾಯಿ ಭವಾನಿ, ಪತ್ನಿ ಪ್ರಿಯಾಂಕ, ಪುತ್ರಿ ಪೂರ್ವಿ, ಸಹೋದರಿಯರಾದ ಮಮತಾ, ಅನಿತಾ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತದೇಹವನ್ನು ನಾಳೆ (17 - 12 - 2023 ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ಮನೆಗೆ ತರಲಾಗುವುದು. ಬಳಿಕ ಅಂತಿಮ ದರ್ಶನದ ಬಳಿಕ ಮನೆ ಪರಿಸರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ. ಮೃತರ ಮನೆಗೆ ರಚನಾ ಸಾಂಸ್ಕೃತಿಕ ಕಲಾ ಸಂಸ್ಥೆಯ ಪದಾಧಿಕಾರಿಗಳು ಸಹಿತ ಹಲವಾರು ಮಂದಿ ಮನೆಗೆ ಭೇಟಿ ನೀಡಿ ಮನೆಯವರನ್ನು ಸಂತೈಸಿ, ಸಂತಾಪ ಸೂಚಿಸಿದರು. ಸಾಯಿ ಪ್ರಸಾದ್ ರ ನಿಧನಕ್ಕೆ ರಚನಾ ಸಾಂಸ್ಕೃತಿಕ ಕಲಾ ಸಂಸ್ಥೆ ಉಪ್ಪಳ, ಶ್ರೀ ಭಗವತಿ ಕ್ಷೇತ್ರ ಉಪ್ಪಳ, ಶ್ರೀ ಭಗವತಿ ಮಹಿಳಾ ಸಂಘ, ಶ್ರೀ ಭಗವತಿ ಯುವಜನ ಸಂಘ, ಶ್ರೀ ಅಯ್ಯಪ್ಪ ಸೇವಾ ಸಮಿತಿ, ಶ್ರೀ ಅಯ್ಯಪ್ಪ ಮಂದಿರ ಉಪ್ಪಳ. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮುಳಿಂಜ, ಉಪ್ಪಳ ಸಂತಾಪ ಸೂಚಿಸಿದ್ದಾರೆ. ✍️ ದೀಪಕ್ ರಾಜ್ ಉಪ್ಪಳ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.