ವರ್ಕಾಡಿ: ಕೇರಳ ರಾಜ್ಯ ಹಿಂದುಳಿದ ವಿಭಾಗ ವಿಕಸನ ಕೊರ್ಪರೇಷನ್ (KDBCDC), ಕಾಸರಗೋಡು, ಸಹಯೋಗದಲ್ಲಿ ಕುಟುಂಬಶ್ರೀ CDS ವರ್ಕಾಡಿ ಗ್ರಾಮ ಪಂಚಾಯತ್ ಮಹಿಳಾ ಸಮೃದ್ದಿ ಮೈಕ್ರೋ ಕ್ರೆಡಿಟ್ ಸಾಲ ವಿತರಣೆ ಕಾರ್ಯಕ್ರಮ ಸುಂಕದಕಟ್ಟೆ ವಿಶ್ವಪ್ರಭ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ .ಎಸ್ ವಹಿಸಿದರು. ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿ, ಕುಟುಂಬಶ್ರೀ ಸದಸ್ಯರು ಸ್ವಉದ್ಯೋಗ ಕ್ಕೆ ಒತ್ತು ನೀಡಿ ಸ್ವಾವಲಂಬಿಗಳಾಗಿ ಬದುಕುವ ಬಗ್ಗೆ ಸ್ತ್ರೀ ಶಾಕ್ತೀಕರಣದ ಬಗ್ಗೆ ತಿಳಿಸಿದರು.
1,35,96,000 ರೂ. ಗಳ ಚೆಕ್ ನ್ನು 23 ಕುಟುಂಬಶ್ರೀ ಗುಂಪುಗಳಿಗೆ ಹಸ್ತಾಂತರಿಸಿದರು. KSBCDC ಮ್ಯಾನೇಜರ್ ಶ್ರೀ ಎನ್.ಎಂ. ಮೋಹನ್ ರವರು ಸಾಲದ ಬಗೆಗೆ ಮಾಹಿತಿಯನ್ನು ನೀಡಿದರು. ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಅಬೂಬಕ್ಕರ್ ಸಿದ್ದೀಕ್, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕೆ. ಕಮಲಾಕ್ಷಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಶ್ರೀ ಮೊಯ್ದೀನ್ ಕುಂಜ್ಞಿ, ಶ್ರೀಮತಿ ಅಶ್ವಿನಿ ಎಂ.ಎಲ್, ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ವಿ ಸಾಮಾನಿ, ಸದಸ್ಯರಾದ ಕಮರುನ್ನಿಸ, ಶಿವರಾಜ್, ಅಬ್ದುಲ್ ಲತೀಫ್, ಪದ್ಮಾವತಿ, ಅಬ್ದುಲ್ ಮಜೀದ್ ಬಿ. ಎ, ಸೀತಾ ಡಿ, ಉಮ್ಮರ್ ಬೋರ್ಕಳ, ಆಶಾಲತಾ,ಮಾಲತಿ. ಕೆ , ಉದ್ಯೋಗಸ್ಥ ವಸಂತ ಶೆಟ್ಟಿ, ಆಸೂತ್ರಣ ಸಮಿತಿ ಉಪಾಧ್ಯಕ್ಷ ಮೊಹಮ್ಮದ್ ಮಜಾಲ್, ಮೆಂಬರ್ ಸೆಕ್ರೆಟರಿ ಮನೋಜ್ ಕೆ. ಪಿ ಉಪಸ್ಥಿತರಿದ್ದು ಶುಭ ಹಾರೈಸಿದರು.
CDS ಅಧ್ಯಕ್ಷೆ ವಿಜಯಲಕ್ಷ್ಮಿ ಸ್ವಾಗತಿಸಿ, ಉಪಾಧ್ಯಕ್ಷೆ ಶ್ವೇತಾ ವಂದಿಸಿದರು.ಜಯಂತಿ ಪಾವಳ ಕಾರ್ಯಕ್ರಮವನ್ನು ನಿರೂಪಿಸಿದರು.



