Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ದಿಡೀರ್ ನಾಪತ್ತೆಯಾಗಿದ್ದ ಬಿಜೆಪಿ ಯುವಮೋರ್ಚಾ ನೇತಾರ ಕುಂಬಳೆ ಬಂಬ್ರಾಣ ನಿವಾಸಿ ರಾಜೇಶ್ ರ ಮೃತದೇಹ ತೊಕ್ಕೊಟ್ಟು ಬೆಂಗರೆಯ ನೇತ್ರಾವತಿ ನದಿ ತೀರದಲ್ಲಿ ಪತ್ತೆ.

ದಿಡೀರ್ ನಾಪತ್ತೆಯಾಗಿದ್ದ ಬಿಜೆಪಿ ಕಾರ್ಯಕರ್ತನ ಮೃತ ದೇಹದಲ್ಲಿ ನೇತ್ರಾವತಿ ಹೊಳೆಯಲ್ಲಿ ಪತ್ತೆ.


ಕುಂಬಳೆ: ಸೋಮವಾರ ಸಂಜೆ ದಿಢೀರ್ ನಾಪತ್ತೆಯಾಗಿದ್ದ ಯುವಕನ ಮೃತದೇಹ ಇಂದು ಬೆಳಗ್ಗೆ ತೊಕ್ಕೊಟ್ಟು ಬಳಿಯ ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿದೆ. 
ಕುಂಬಳೆ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿರುವ ಲೋಕೇಶ್ - ಪ್ರಭಾವತಿ ದಂಪತಿಯ ಪುತ್ರ ರಾಜೇಶ್ (26) ಎಂಬವರ ಮೃತದೇಹ ಎಂದು ತಿಳಿದು ಬಂದಿದೆ. ಮೃತರು ಸಾರಣೆ ಕೆಲಸ ಮಾಡುತ್ತಿದ್ದು, ಸಾಮಾಜಿಕ ಕಾರ್ಯಗಳಲ್ಲಿ ತನ್ನನು ತಾನು ತೊಡಗಿಸಿ ಕೊಂಡಿದ್ದು ಯುವಶಕ್ತಿ ಸೇವಾ ಪಥದ ಮೂಲಕ ನೊಂದ ಹೃದಯಗಳಿಗೆ ನೆರವನ್ನು ನೀಡುವಲ್ಲಿ ಸಹಕಾರಿಯಾಗಿದ್ದರು. ಊರಿನ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದರು. ಬಂಬ್ರಾಣ ಸ್ವಾಗತ್ ಫ್ರೆಂಡ್ಸ್ ನ ಮಾಜಿ ಕಾರ್ಯದರ್ಶಿಯಾಗಿದ್ದರು. ಅಲ್ಲದೆ ಬಿಜೆಪಿ ಯುವಮೋರ್ಚಾ ಕುಂಬಳೆ ಮಂಡಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೊನ್ನೆ ಸೋಮವಾರ ಸಂಜೆ 5.45 ಕೆ ಮನೆಯಿಂದ ಬೈಕಿನಲ್ಲಿ ತೆರಳಿದವರು ಮರಳಿ ಮನೆಗೆ ಬಾರದನ್ನು ಕಂಡು ಮನೆಯವರು ಹಾಗೂ ಗೆಳೆಯರು ಮೊಬೈಲ್ ಗೆ ಸಂಪರ್ಕಿಸಿದಾಗ ಸ್ವಿಚ್ ಆಫ್ ಆಗಿತ್ತು. ಕೂಡಲೇ ಮನೆಯವರು ಕುಂಬಳೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದರು. ಇಂದು ಬೆಳಗ್ಗೆ 6 ಗಂಟೆ ವೇಳೆ ತೊಕ್ಕೊಟ್ಟು ನೇತ್ರಾವತಿ ನದಿ ತೀರವಾದ ಬೆಂಗರೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರು ಪಾಂಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರು. ಮೃತದೇಹದ ಪ್ಯಾಂಟ್ ಕಿಸೆಯಲ್ಲಿ ಲಭಿಸಿದ ಮೊಬೈಲ್ ಫೋನ್ ನ ಸಿಮ್ ನ್ನು ಬೇರೊಂದು ಮೊಬೈಲ್ ಗೆ ಇಟ್ಟಾಗ ರಾಜೇಶ್ ರ ಸಂಬಂಧಿಕರು ಕಾಲ್ ಕರೆ ಮಾಡಿದ್ದರು. ಕೂಡಲೇ ಪೊಲೀಸರು ಸಂಬಂಧಿಕರಿಗೆ ವಿಷಯವನ್ನು ತಿಳಿಸಿದ್ದು ಮನೆ ಮಂದಿ ಆಸ್ಪತ್ರೆಗೆ ತೆರಳಿ, ಮೃತದೇಹದ ಗುರುತು ಪತ್ತೆ ಹಚ್ಚಿದರು.


ಮೃತರು ತಂದೆ, ತಾಯಿ ಏಕ ಸಹೋದರ ಶುಭಂ ಹಾಗೂ ಅಪಾರ ಬಂಧು - ಮಿತ್ರರನ್ನು ಅಗಲಿದ್ದಾರೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತದೇಹದ ಶವ ಮಹಜರು ನಡೆದ ಬಳಿಕ ಸಂಜೆ ಮನೆಗೆ ತರಲಾಗುವುದು ಬಳಿಕ ಕುಂಟಗೆರಡ್ಕ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಮನೆಯವರು ತಿಳಿಸಿದ್ದಾರೆ. ಮೃತರ ನಿಧನಕ್ಕೆ ಸ್ವಾಗತ್ ಫ್ರೆಂಡ್ಸ್ ಬಂಬ್ರಾಣ, ಬಿಜೆಪಿ ಯುವ ಮೋರ್ಚಾ ಕುಂಬಳೆ ಮಂಡಲ ಸಮಿತಿ, ಯುವಶಕ್ತಿ ಸೇವಾಪಥ ದಕ್ಷಿಣ ಕನ್ನಡ, ಗಾಢವಾದ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.