ರಾಣಿಪುರದಲ್ಲಿ ಸಿಡಿಲು ಬಡಿದು ದಿನಸಿ ಅಂಗಡಿ ಭಸ್ಮ. ಲಕ್ಷಾಂತರ ರೂಪಾಯಿ ಮೊತ್ತ ನಷ್ಟ. ಸ್ಥಳಕ್ಕೆ ಅಧಿಕಾರಿಗಳ ಭೇಟಿ.
ತೊಕ್ಕೊಟ್ಟು: ಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೀಟರ್ ಅಪೋಸ್ ಮಾಲಕತ್ವದ ರಾಣಿಪುರ ಸ್ಟೋರ್ ನಿನ್ನೆ ರಾತ್ರಿ ಸುರಿದ ಮಳೆ ಹಾಗೂ ಗುಡುಗಿಗೆ ಅಂಗಡಿ ಸಂಪೂರ್ಣ ಭಸ್ಮವಾಗಿದೆ. ಅಂಗಡಿಯಲ್ಲಿರುವ ದಿನಸಿ ಸಾಮಾಗ್ರಿ, 3 ಫ್ರಿಡ್ಜ್, ಹಾಗೂ ಕಟ್ಟಡ ಸೇರಿ ಸುಮಾರು 20 ಲಕ್ಷಕ್ಕಿಂತಲೂ ಅಧಿಕ ನಷ್ಟವಾಗಿದೆ. ಬೆಂಕಿಯ ತಾಪಕ್ಕೆ ಹಿಂದುಗಡೆಯಲ್ಲಿರುವ ಮನೆಗೆ ಹಾನಿಯಾಗಿದ್ದು, ಮನೆಯು ಸೋರುತ್ತಿದೆ. ಘಟನೆಯನ್ನು ಅರಿತು ಸ್ಥಳಕ್ಕೆ ಭೇಟಿ ನೀಡಿದ ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ಕೇಂದ್ರೀಯ ಅಧ್ಯಕ್ಷ ಅಲ್ವಿನ್ ಡಿಸೋಜ, ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಫರೆಡ್ ಡಿಸೋಜ, ರಾಣಿಪುರ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಅರುಣ್ ಮೊಂತೆರೋ ಮಾತನಾಡಿ ಪ್ರಕೃತಿ ವಿಕೋಪದಿಂದ ಹಾನಿಯಾದ ಇವರಿಗೆ ಸರಕಾರದಿಂದ ಹೆಚ್ಚಿನ ಪರಿಹಾರ ಸಿಗಲಿ ಎಂದು ಹೇಳಿದರು. ತಹಶಿಲ್ದಾರ್ ಪ್ರಭಾಕರ್ ಕಜೂರು ಸ್ಥಳಕ್ಕೆ ಭೇಟಿಯಿತ್ತು ಸರಕಾರದಿಂದ ಸಿಗುವ ಪರಿಹಾರಕ್ಕಾಗಿ ಪ್ರಯತ್ನ ಮಾಡುತ್ತೇನೆಂದು ನುಡಿದರು.
ಮ್ಯಾಕ್ಸಿಮ್ ಡಿಸೋಜ, ಪ. ಸದಸ್ಯರಾದ ಹಸನಬ್ಬ, ನವೀನ್ ಡಿಸೋಜ, ಬಾಬು ಶೆಟ್ಟಿ, ಪುಷ್ಪಲತಾ ಅಂಚನ್,ಗ್ರಾಮ ಕರಣಿಕ ರೇಷ್ಮಾ,
ಕಂದಾಯ ಅಧಿಕಾರಿ ಮಂಜುನಾಥ್, ಪಂ.ಅಭಿವೃದ್ದಿ ಅಧಿಕಾರಿ ರವೀಂದ್ರ ರಾಜೀವ ನಾಯಕ್ ಸ್ಥಳಕ್ಕೆ ಭೇಟಿ ನೀಡಿದರು.


