ಸಹಕಾರಿ ನೌಕರರನ್ನು ಧಿಕ್ಕರಿಸೋದು ಕೇರಳ ಸರಕಾರಕ್ಕೆ ಭೂಷಣವಲ್ಲ:ಕೇರಳ ಕೋ-ಓಪರೇಟಿವ್ ಎಂಪ್ಲಾಯಿಸ್ ಕೌನ್ಸಿಲ್(AITUC)
ಮಂಜೇಶ್ವರ: ಸಹಕಾರಿ ನೌಕರರೊಂದಿಗೆ ಕೇರಳ ಸರಕಾರ ತೋರಿಸುತ್ತಿರುವ ಅವಗಣನೆ ಕೊನೆಗೊಳಿಸಬೇಕು, ನೀಡಲು ಬಾಕಿ ಇರುವ ಡಿ.ಎ ತಕ್ಷಣ ನೀಡಬೇಕು, ಹುರಿಹಗ್ಗ, ಕೈಮಗ್ಗ, ಸಹಕಾರಿ ಸಂಘಗಳನ್ನು ಸಂರಕ್ಷಿಸಬೇಕು, ಕ್ಷೀರ ಸಂಘಗಳಲ್ಲಿ ಸೆಕ್ಷನ್ 80 ಪೂರ್ಣವಾಗಿ ಜಾರಿಗೊಳಿಸಬೇಕು, ಪಿಗ್ಮಿ ಸಂಗ್ರಾಹಕರನ್ನು ಖಾಯಂ ನೌಕರರಾಗಿ ಅಂಗೀಕರಿಸಬೇಕು, ನೀಡಲು ಬಾಕಿ ಇರುವ ಪೆನ್ಶನ್ ವಿತರಣಾ ಕಮಿಷನ್ ಹಿಂದಿನ ಒಪ್ಪಿಗೆ ಪ್ರಕಾರ ನೀಡಬೇಕು, ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಸೆಪ್ಟೆಂಬರ್ 14,15,16 ತಾರೀಕಿಗೆ ತಿರುವನಂತಪುರ ಸೆಕ್ರಟರಿಯೇಟ್ ಮುಂಭಾಗ ನಡೆಯಲಿರುವ 72 ಗಂಟೆಗಳ ಹೋರಾಟದ ಪೂರ್ವಭಾವಿಯಾಗಿ ಕೇರಳ ಕೋಓಪರೇಟಿವ್ ಎಂಪ್ಲಾಯಿಸ್ ಕೌನ್ಸಿಲ್(AITUC) ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ನಡೆದ ಸಮಾವೇಶವನ್ನು ಉದ್ಘಾಟಿಸಿ KCEC(AITUC)ರಾಜ್ಯಾಧ್ಯಕ್ಷರಾದ ಕಾಂ|| ವಿ.ಎಂ ಅನಿಲ್ ಮಾತನಾಡುತ್ತಿದ್ದರು. KCEC(AITUC)ಜಿಲ್ಲಾಧ್ಯಕ್ಷರಾದ ರಾಮಕೃಷ್ಣ ಕಡಂಬಾರ್ ಅಧ್ಯಕ್ಷತೆ ವಹಿಸಿದರು.
KCEC(AITUC)ರಾಜ್ಯ ಕಾರ್ಯದರ್ಶಿ ಬಿ.ಸುಕುಮಾರನ್, ಸಿಪಿಐ ಜಿಲ್ಲಾ ನಿರ್ವಾಹಕ ಸಮಿತಿ ಸದಸ್ಯ ಬಿ.ವಿ ರಾಜನ್, ಜಿಲ್ಲಾ ಸಮಿತಿ ಸದಸ್ಯ ಬಿ.ವಿಜಯ ಕುಮಾರ್, ಜಯರಾಮ್ ಬಲ್ಲಂಗುಡೇಲ್, ರಾಜನ್ ನಾಯರ್, ಉಮೇಶ್ ಕುಂಜತ್ತೂರ್ ಪದವು, ಹರೀಶ್ ಕೆ.ಆರ್, ಗಂಗಾಧರ್ ಕೊಡ್ಡೆ, ಕೇಶವ ಬಾಯಿಕಟ್ಟೆ, ವಿಜಯನ್ ರಾವಣೇಶ್ವರಂ, ವಲ್ಸಲಾ ಕಾಞಂಗಾಡ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೊದಲಿಗೆ ಬಿ.ಸುಕುಮಾರನ್ ಸ್ವಾಗತಿಸಿ, ಕೊನೆಯಲ್ಲಿ ಗಂಗಾಧರ ಕೊಡ್ಡೆ ವಂದಿಸಿದರು.

