ಕುಂಬಳೆ: ಕುಂಬಳೆ ಪ್ರೆಸ್ ಫೋರಂನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ವಾರ್ಷಿಕ ಮಹಾ ಸಭೆಯಲ್ಲಿ ಉಪಾಧ್ಯಕ್ಷ ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಬ್ದುಲ್ ಲತೀಫ್ ಉಳುವಾರ್ ಸ್ವಾಗತಿಸಿದರು. ಕೆ.ಎಂ.ಎ. ಸತ್ತಾರ್, ಅಬ್ದುಲ್ಲಾ ಕುಂಬಳೆ ಮಾತನಾಡಿದರು. ಈ ವೇಳೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ:ಅಬ್ದುಲ್ಲಾ ಕುಂಬಳೆ (ಕಾರವಲ್), ಕಾರ್ಯದರ್ಶಿಯಾಗಿ: ಐ. ಮುಹಮ್ಮದ್ ರಫೀಕ್ (ಸುಪ್ರಭಾತಂ), ಕೋಶಾಧಿಕಾರಿಯಾಗಿ: ಅಬ್ದುಲ್ ಲತೀಫ್ (ಟ್ರ ನ್ಯೂಸ್), ಉಪಾಧ್ಯಕ್ಷರಾಗಿ: ಪುರುಷೋತ್ತಮ ಭಟ್ (ವಿಜಯವಾಣಿ), ಅಬ್ದುಲ್ ಲತೀಫ್ (ಕಾಸರಗೋಡು ವಿಷನ್) ಜೊತೆ ಕಾರ್ಯದರ್ಶಿಗಳಾಗಿ: ಅಬ್ದುಲ್ ಲತೀಫ್ ಉಳುವಾರ್ (ಮಾಧ್ಯಮ), ಅಬ್ದುಲ್ ರಶೀದ್ (ಮಲಯಾಳ ಮನೋರಮಾ) ಆಯ್ಕೆಯಾದರು.
8:10:45
