ಉಪ್ಪಳ: ಕೇರಳದ ನೆಡುಮಂಗಾಡ್ ಎಂಬಲ್ಲಿ ಯುವತಿಯೊಬ್ಬಳು ಅನ್ಯಧರ್ಮದ ಯುವಕನೊಂದಿಗಿನ ಕಾಮದಾಟಕ್ಕೆ ಸ್ವಂತ ಮಗುವೇ ಅಡ್ಡಿಯಾಗುತ್ತದೆ, ಎಂದು ಹೆತ್ತ ಕರುಳಕುಡಿಯನ್ನೆ ತನ್ನ ಮುಸ್ಲಿಂ ಕಾಮುಕನೊಂದಿಗೆ ಸೇರಿ ದಾರುಣವಾಗಿ ಕೊಲೆಗೈದದನ್ನು ಪ್ರತಿಭಟಿಸಿ ಹಿಂದೂ ಹಿತರಕ್ಷಣ ವೇದಿಕೆ ಮಂಗಲ್ಪಾಡಿ ವತಿಯಿಂದ ಬೃಹತ್ ಪ್ರತಿಭಟನೆ ಇಂದು ಸಂಜೆ ಉಪ್ಪಳ ಪೇಟೆಯಲ್ಲಿ ನಡೆಯಿತು.ಭಾರತೀಯ ಜನತಾ ಪಕ್ಷದ ಕೋಝಿಕೋಡ್ ವಿಭಾಗದ ಅಧ್ಯಕ್ಷರಾದ ನ್ಯಾಯವಾದಿ ಶ್ರೀಕಾಂತ್ ಉದ್ಘಾಟಿಸಿ , ಮಾತನಾಡಿದರು. ಪುಟ್ಟ ಮಗುವಿನ ಜೀವನದ ಹಕ್ಕನ್ನು ಎಳವೆಯಲ್ಲಿಯೇ ಚಿವುಟಿ ಹಾಕಿದ, ಕಾನೂನು ಬಾಹಿರವಾಗಿ ಒಂದಾಗಿ ಜೀವಿಸುತ್ತಿದ್ದ ಅಸ್ಗರ್ ಹಾಗೂ ಅಖಿಲಾರಿಗೆ ಜಾಮೀನು ನೀಡದೆ, ಮರಣ ದಂಡನೆ ಶಿಕ್ಷೆಗೆ ಗುರಿಯಾಗಿಸ ಬೇಕೆಂದು ಸರಕಾರವನ್ನು ಒತ್ತಾಯ ಮಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ವೀರಪ್ಪ ಅಂಬಾರ್ ಹಾಗೂ ವಿವಿಧ ಸಂಘಟನೆಗಳ ನೇತಾರರು ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೆ.ಪಿ ವಲ್ಸರಾಜ್ ಸ್ವಾಗತಿಸಿ, ಸುರೇಶ್ ವಿ.ಶೆಟ್ಟಿ ಪರಂಕಿಲ ಧನ್ಯವಾದವಿತ್ತರು.
8:10:45
