Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸ್ಥಳೀಯಾಡಳಿತ ಚುನಾವಣೆ - ಮೊದಲ ಹಂತದ ಅಭ್ಯರ್ಥಿಗಳನ್ನು ಘೋಷಿಸಿದ ಎಸ್.ಡಿ.ಪಿ.ಐ.

ಸ್ಥಳೀಯಾಡಳಿತ ಚುನಾವಣೆ - ಮೊದಲ ಹಂತದ ಅಭ್ಯರ್ಥಿಗಳನ್ನು ಘೋಷಿಸಿದ ಎಸ್.ಡಿ.ಪಿ.ಐ.

ಕುಂಬಳೆ: ಮುಂಬರುವ ತ್ರಿಸ್ತರ ಸ್ಥಳೀಯಾಡಳಿ ಚುನಾವಣೆಯಲ್ಲಿ, ಎಸ್.ಡಿ.ಪಿ.ಐ. ಪಕ್ಷವು ಕುಂಬಳೆ ಪಂಚಾಯತಿಯ ಹತ್ತು ವಾರ್ಡ್‌ಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಜಿಲ್ಲಾ ಪ್ರ.ಕಾರ್ಯದರ್ಶಿ ಖಾದರ್ ಅರಾಫ ಕುಂಬಳೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅರ್ಹರಿಗೆ ಹಕ್ಕುಗಳನ್ನು ನೀಡಲು ಮತ್ತು ಭ್ರಷ್ಟಾಚಾರ ಮುಕ್ತ ಅಭಿವೃದ್ಧಿಗಾಗಿ ಮುಂಬರುವ ಸ್ಥಳೀಯಾಡಳಿತ ಚುನಾವಣೆಯಲ್ಲಿ ಪಕ್ಷವು ಜನರನ್ನು ಸಂಪರ್ಕಿಸುತ್ತಿದೆ. ಕುಂಬಳೆ ಗ್ರಾಮ ಪಂಚಾಯತಿ ಆಡಳಿತ ಸಮಿತಿಗಳು ಹಿಂದೆ ಮಾಡಿದ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವನ್ನು ವ್ಯಾಪಕವಾಗಿ ಚರ್ಚಿಸಲಾಗಿದೆ. ಜಿಲ್ಲೆಯ ಪ್ರಮುಖ ಪಟ್ಟಣವಾದ ಕುಂಬಳೆ ಪೇಟೆಯ ಬಸ್ ನಿಲ್ದಾಣ ಸಂಕೀರ್ಣದಲ್ಲಿನ ಭ್ರಷ್ಟಾಚಾರವು ಕೇರಳದಾದ್ಯಂತ ಚರ್ಚೆಯ ವಿಷಯವಾಗಿದೆ. ಇದು ನಮ್ಮ ಅವಮಾನಕರ.ಭ್ರಷ್ಟಾಚಾರ ಮುಕ್ತ ಚುನಾವಣೆಯ ಗುರಿಯನ್ನು ಪಕ್ಷ ಹೊಂದಿದೆ. ಊರಿನ ಸಮಗ್ರ ಅಭಿವೃದ್ಧಿಗಾಗಿ ಕುಂಬಳೆ ಗ್ರಾಮ ಪಂಚಾಯತ್‌ನಲ್ಲಿ SDPI ಸ್ಪರ್ಧಿಸುತ್ತಿರುವ ಮೊದಲ ಹಂತದ ಅಭ್ಯರ್ಥಿಗಳನ್ನು ಈ ಸಂದರ್ಭ ಅವರು ಘೊಷಿಸಿದರು. ವಾರ್ಡ್ 1 ಕುಂಬೋಲ್ - ರುಕಿಯಾ ಅನ್ವರ್, 3 ನೇ ವಾರ್ಡ್ ಕಕ್ಕಳಮ ಕುನ್ನು - ನಾಸರ್ ಬಂಬ್ರಾಣ, 18 ನೇ ವಾರ್ಡ್ ರೈಲು ನಿಲ್ದಾಣ - ಫಹಿಮಾ ನೌಶಾದ್, 20 ನೇ ವಾರ್ಡ್ ಬದ್ರಿಯಾ ನಗರ - ಅನ್ವರ್ ಅರಿಕ್ಕಾಡಿ ಕಣದಲ್ಲಿದ್ದಾರೆ. ಇತರ ವಾರ್ಡ್‌ಗಳ ವಿವರಗಳನ್ನು ಎರಡನೇ ಹಂತದಲ್ಲಿ ಘೊಷಿಸಲಾಗುವುದೆಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾದರ್ ಅರಫಾ, ಮಂಜೇಶ್ವರ ಮಂಡಲ ಕಾರ್ಯದರ್ಶಿ ಶಬೀರ್ ಕುಂಬಳೆ, ಪಂಚಾಯತಿ ಕಾರ್ಯದರ್ಶಿ ಶಾನಿಫ್ ಮೊಗ್ರಾಲ್ ಮತ್ತು ಖಜಾಂಚಿ ನೌಶಾದ್ ಮನ್ಸೂರ್ ಕುಂಬಳೆ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.