ದಶಮಾನೋತ್ಸವದ ತುಳುನಾಡ ಬಾಲೆ ಬಂಗಾರ್ - 2025 ವಿಜೇತ ಪುಟಾಣಿಗಳ ಘೋಷಣೆ ಹಾಗೂ ಬಹುಮಾನ ವಿತರಣೆ ನಾಳೆ.
ಮಂಜೇಶ್ವರ: ತುಳುವೆರೆ ಆಯನೋ ಕೂಟ ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ತುಳುನಾಡ ಸಂಸ್ಕೃತಿಗೆ ಪೂರಕವಾದ ಹತ್ತನೇ ವರ್ಷದ ದಶಮಾನೋತ್ಸವದ "ತುಳುನಾಡ ಬಾಲೆ ಬಂಗಾರ್ - 2025" ಮುದ್ದು ಮಕ್ಕಳ ಫೋಟೋ ಸ್ಪರ್ಧೆಯ ವಿಜೇತರ ಘೋಷಣೆ ಹಾಗೂ ಬಹುಮಾನ ವಿತರಣೆ ಸಮಾರಂಭ ನಾಳೆ ತಾ: 14-11-2025 ಶುಕ್ರವಾರ ಅಪರಾಹ್ನ ಗಂಟೆ 2.00 ರಿಂದ ರಾಷ್ಟ್ರಕವಿ ಗೋವಿಂದ ಪೈ ನಿವಾಸ ಗಿಳಿವಿಂಡು ಮಂಜೇಶ್ವರದಲ್ಲಿ ನಡೆಯಲಿದೆ. ಅಪರಾಹ್ನ 2.00 ರಿಂದ ನಡೆಯುವ ಕಾರ್ಯಕ್ರಮದಲ್ಲಿ
ತುಳುನಾಡ ಬಾಲೆ ಬಂಗಾರ್ ಸಮಿತಿಯ ಗೌರವ ಮಾರ್ಗದರ್ಶಕರಾದ ಶ್ರೀ ರಾಜ ಬೆಲ್ಚಪ್ಪಾಡರು ಉದ್ಯಾವರ ಮಾಡ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಡಾ. ಶ್ರೀ ರಾಜೇಶ್ ಆಳ್ವ (ತುಳು ವರ್ಲ್ಡ್.ಕಾಮ್.) ವಹಿಸಲಿರುವರು. ವಿಜೇತರ ಚಿತ್ರಪಟ ಅನಾವರಣವನ್ನು ಶ್ರೀ ಕೃಷ್ಣ ಶಿವಾಕೃಪಾ ಕುಂಜತ್ತೂರು (ಧಾರ್ಮಿಕ, ಸಾಮಾಜಿಕ ಮುಂದಾಳು.) ನೆರವೇರಿಸಲಿರುವರು. ಬಹುಮಾನ ವಿತರಣೆಯನ್ನು ಶ್ರೀ ಹರ್ಷಾದ್ ವರ್ಕಾಡಿ. (ಹಿರಿಯ ಪತ್ರಕರ್ತರು ಮಂಜೇಶ್ವರ.) ನ್ಯಾ. ಶ್ರೀ ನವೀನ್ ರಾಜ್ ಕೆ.ಜೆ. (ಧಾರ್ಮಿಕ, ಸಾಮಾಜಿಕ ಮುಂದಾಳು.) ನೀಡಲಿರುವರು. ಈ ವೇಳೆ ಶ್ರೀ ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ (ಧಾರ್ಮಿಕ, ಸಾಮಾಜಿಕ ಮುಂದಾಳು.), ಶ್ರೀ ಉಮೇಶ್ ಸಾಲ್ಯಾನ್ (ಕಾರ್ಯದರ್ಶಿ: ರಾಷ್ಟ್ರಕವಿ ಗೋವಿಂದ ಪೈ ಗಿಳಿವಿಂಡು ಸಮಿತಿ.), ಶ್ರೀ ಕಾರ್ತಿಕ್ ಶೆಟ್ಟಿ ಮಜಿಬೈಲು
(ಧಾರ್ಮಿಕ, ಸಾಮಾಜಿಕ ಮುಂದಾಳು ಹಾಗೂ ಪದಾಧಿಕಾರಿ: ಶ್ರೀ ಸದಾಶಿವ ಶೆಟ್ಟಿ ಅಭಿಮಾನಿ ಬಳಗ, ಕೇಂದ್ರೀಯ ಮಂಡಳಿ.), ಶ್ರೀ ಜಯರಾಜ್ ಶೆಟ್ಟಿ ಕುಳೂರು
(ಶ್ರೀ ಸದಾಶಿವ ಶೆಟ್ಟಿ ಅಭಿಮಾನಿ ಬಳಗ, ಕೇಂದ್ರೀಯ ಮಂಡಳಿ.), ಶ್ರೀ ದಯಾಕರ ಮಾಡ (ಮೋಕ್ತೆಸರರು: ಶ್ರೀ ದೈವಗಳು ಉದ್ಯಾವರ ಮಾಡ.) ಶ್ರೀ ಸಲಾಂ ವರ್ಕಾಡಿ (ಅಧ್ಯಕ್ಷರು: ಮಂಜೇಶ್ವರ ಪ್ರೆಸ್ ಕ್ಲಬ್.), ಶ್ರೀ ರವಿ ನಾಯ್ಕಪು
(ಅಧ್ಯಕ್ಷರು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ.), ಶ್ರೀ ಗಂಗಾಧರ ತೆಕ್ಕೆಮೂಲೆ* (ಕಾರ್ಯದರ್ಶಿ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ.), ಶ್ರೀ ತುಳಸಿದಾಸ್ ಮಂಜೇಶ್ವರ (ರೈಲ್ವೇ ಉದ್ಯೋಗಿ), ಶ್ರೀ ಜೆ.ಪಿ ಕೋಟೆಕಾರ್ (ತೀರ್ಪುಗಾರರು.), ಶ್ರೀ ಸಂಜೀವ ಶೆಟ್ಟಿ ಮಾಡ
(ಉಪಾಧ್ಯಕ್ಷರು: ತುಳುನಾಡ ಬಾಲೆ ಬಂಗಾರ್ ಸಮಿತಿ.), ಶ್ರೀ ಸತೀಶ್ ಶೆಟ್ಟಿ ಮಾಯಿಪ್ಪಾಡಿ.
(ಸಾಮಾಜಿಕ ಕಾರ್ಯಕರ್ತ.) ಶ್ರೀ ರತನ್ ಕುಮಾರ್ ಹೊಸಂಗಡಿ
(ಅಧ್ಯಕ್ಷರು: ತುಳುನಾಡ ಬಾಲೆ ಬಂಗಾರ್ ಸಮಿತಿ.), ಶ್ರೀ ಜಯ ಮಣಿಯಂಪಾರೆ
(ಪತ್ರಕರ್ತರು, ತುಳು ಸಂಘಟಕರು, ಪ್ರತಿಭಾ ಪೋಷಕರು, ಪ್ರಧಾನ ಸಂಚಾಲಕರು: ತುಳುನಾಡ ಬಾಲೆ ಬಂಗಾರ್ ಸಮಿತಿ.) ಉಪಸ್ಥಿತರಿರುವರು.
