ಮಜಿಬೈಲ್ ಕಟ್ಟೆ ನಿವಾಸಿ ಸರಸ್ವತಿ (79) ನಿಧನ.
ಹೊಸಂಗಡಿ: ಮಜಿಬೈಲ್ ಕಟ್ಟೆ ನಿವಾಸಿ ಸರಸ್ವತಿ (79) ಅಸೌಖ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಇಂದು ಮುಂಜಾನೆ ಒಂದು ಗಂಟೆ ವೇಳೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ: ಬಾಲಕೃಷ್ಣ, ಸತ್ಯಾವತಿ, ಜಯಲಕ್ಷ್ಮಿ, ಅರುಣಾಕ್ಷಿ, ಮೋಹನ, ಮೋಹಿನಿ, ಆಶಾಲತಾ, ಸವಿತಾ, ಪ್ರವೀಣ್, ಅಳಿಯಂದಿರು - ಸೊಸೆಯಂದಿರಾದ: ಶ್ಯಾಮಲ, ಸುರೇಶ್ ಗುರಿಕಾರ ಸವಣೂರು, ದಾಮೋದರ ಹೇರೂರು, ಅಮಿತಾ, ಹರೀಶ ಮುಳಿಹಿತ್ಲು ಮಂಗಳೂರು, ಹರೀಶ ಸೀತಂಗೋಳಿ, ರತೀಶ್ ಕಾನ್ಯಂಗಾಡ್ ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಳಿಯಂದಿರ ಪೈಕಿ ರಾಜೇಶ್ ಕಟ್ಟೆ ಬಜಾರ್ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ 11 ಗಂಟೆಗೆ ರಾಮತ್ತ ಮಜಾಲು ಸಾರ್ವಜನಿಕ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.
