ಬಸ್ ಪ್ರಯಾಣ ವೇಳೆ ಮಗುವಿನ ಕುತ್ತಿಗೆಯಲ್ಲಿದ್ದ 4 ಗ್ರಾಂ ಚಿನ್ನದ ಸರ ನಾಪತ್ತೆ.
ಕುಂಬಳೆ: ಕುಂಬಳೆಯಿಂದ ಕಾಸರಗೋಡು ಚೌಕಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿರುವ ವೇಳೆ ಮಗುವಿನ ಚಿನ್ನದ ಚೈನ್ ನಾಪತ್ತೆಯಾದ ಘಟನೆ ಇಂದು ಸಂಜೆ ನಡೆದಿದೆ. ಕುಂಬಳೆ ನಿವಾಸಿ ದಯಾನಂದ ಆಚಾರ್ಯರ ಪತ್ನಿ ಅಶ್ವಿನಿ ಹಾಗೂ ಮೂರು ವರ್ಷದ ಪುತ್ರಿ ಮಿಷಿತ ಕಾಸರಗೋಡು ಚೌಕಿಗೆ ತೆರಳಲು 4 ಗಂಟೆಗೆ ಕುಂಬಳೆಯಿಂದ ಕರ್ನಾಟಕ ಸಾರಿಗೆ ಬಸ್ ಗೆ ಹತ್ತಿದರು. ಚೌಕಿ ತಲುಪಿದೊಡನೆ ಮಗುವಿನ ಕುತ್ತಿಗೆಯಲ್ಲಿದ್ದ 4 ಗ್ರಾಂನ ಚಿನ್ನದ ಚೈನ್ ನಾಪತ್ತೆಯಾಗಿತ್ತು. ಕೂಡಲೇ ಬಸ್ ನಿರ್ವಾಹಕರಿಗೆ ಮಾಹಿತಿ ನೀಡಿದ್ದು, ಬಸ್ ನಲ್ಲಿ ಶೋಧ ನಡೆಸುವ ವೇಳೆ ಚಿನ್ನದ ಸರದಲ್ಲಿದ್ದ ಕೊಳಕೆ ಪತ್ತೆಯಾಗಿದೆ. ಹೊರತು ಚಿನ್ನದ ಸರ ಪತ್ತೆಯಾಗಿಲ್ಲ. ಈ ಬಗ್ಗೆ ಅಶ್ವಿನಿಯವರು ಕುಂಬಳೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಬಸ್ ಪ್ರಯಾಣ ವೇಳೆ ಯಾರಿಗಾದರೂ ಸಿಕ್ಕಿದ್ದಲ್ಲಿ ಕುಂಬಳೆ ಪೊಲೀಸ್ ಠಾಣೆ ಅಥವಾ 9567612813 ನಂಬರ್ ಗೆ ಸಂಪರ್ಕಿಸಲು ಕೋರಲಾಗಿದೆ. ಸೂಕ್ತ ಬಹುಮಾನ ನೀಡಲಾಗುವುದು ಎಂದು ಅಶ್ವಿನಿಯವರ ಮನೆಯವರು ತಿಳಿಸಿದ್ದಾರೆ.
