ಕುಂಬಳೆ: ಸಮಸ್ತದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ವಿದೇಶ ರಾಷ್ಟ್ರಗಳಲ್ಲೂ ವ್ಯಾಪಿಸಿರುವ ಅಲ್ಬೀರ್ ವಿದ್ಯಾಸಂಸ್ಥೆ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಕಾಸರಗೋಡು ಜಿಲ್ಲಾ ಮಟ್ಟದ ವಿಜ್ಞಾನ ಮತ್ತು ಗಣಿತ ಮೇಳ ಮೊಗ್ರಾಲ್ ಸಾದತ್ ಫೌಂಡೇಶನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಗ್ರಾಲ್ ಪೆರ್ವಾಡ್ ಇಬ್ರಾಹಿಂ ಬಾತಿಶಾ ಅಲ್ಬೀರ್‍ನಲ್ಲಿ ನ.13 ರಂದು ನಡೆಯಲಿದೆ ಎಂದು ಪದಾಧಿಕಾರಿಗಳು ಕುಂಬಳೆಯಲ್ಲ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಲ್ಬೀರ್ ಆಡಳಿತ ನಿರ್ದೇಶಕ ಪ್ರೊ. ಕೆ. ಪಿ. ಮುಹಮ್ಮದ್ ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಅಧ್ಯಕ್ಷ ಸೈಯದ್ ಹಾದಿ ತಂಙಳ್ ಅಧ್ಯಕ್ಷತೆ ವಹಿಸುವರು. ಮಂಜೇಶ್ವರದಿಂದ ತ್ರಿಕರಿಪುರದವರೆಗಿನ ಹದಿನೆಂಟು ಶಾಲೆಗಳಿಂದ ಸುಮಾರು ಇನ್ನೂರು ವಿದ್ಯಾರ್ಥಿಗಳು ಸಹಿತ ಸುಮಾರು 400 ಮಂದಿ ಜನರು ಭಾಗವಹಿಸಲಿದ್ದಾರೆ.
ಅಧ್ಯಕ್ಷ ಸೈಯದ್ ಹದಿ ತಂಙಲ್, ಸಂಯೋಜಕ ಸೈಯದ್ ಹಮ್ದುಲ್ಲಾ ತಂಙಳ್, ವ್ಯವಸ್ಥಾಪಕ ಪಿಆರ್‍ಒ ಅಬ್ದುಲ್ ಖಾದರ್ ಮತ್ತು ಶಿಕ್ಷಕ ಅನ್ವರ್ ಅಶ್ಹರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
