ಮಂಜೇಶ್ವರ, ಹೊಸಬೆಟ್ಟು ಹಿಂದೂ ರುದ್ರಭೂಮಿ ಲೋಕಾರ್ಪಣೆ.
ಮಂಜೇಶ್ವರ: ಇಲ್ಲಿನ ಹೊಸಬೆಟ್ಟು ಗುಡ್ಡೆ ರುದ್ರ ಭೂಮಿಯ ನೂತನ ಕಟ್ಟಡಗಳು ಹಾಗೂ ಮೂಲಭೂತ ಸೌಕರ್ಯಗಳ ಲೋಕಾರ್ಪಣೆ ಕಾರ್ಯಕ್ರಮ ಜರಗಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಗುಡ್ಡೆ ಹಿಂದೂ ರುದ್ರಭೂಮಿ ಪರಿಪಾಲನ ಸಮಿತಿಯ ಅಧ್ಯಕ್ಷರಾದ ಯಾದವ್ ಬಡಾಜೆ ವಹಿಸಿದ್ದರು.
ಸುಸಜ್ಜಿತ ಕಟ್ಟಡಗಳು, ಸಿಲಿಕಾನ್ ಪೆಟ್ಟಿಗೆ ವ್ಯವಸ್ಥೆ, ಕೊಳವೆಬಾವಿ, ಅಶ್ವತ ಕಟ್ಟೆ ಸೇರಿದಂತೆ ಸುಮಾರು 28 ಲಕ್ಷ ರೂಪಾಯಿ ವೆಚ್ಚದ ರುದ್ರಭೂಮಿ ಅಭಿವೃದ್ಧಿ ಯೋಜನೆಗಳನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಧಾ ಎಂ. ಶಿಲಾಫಲಕವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಜೇಶ್ವರ ತಾಲೂಕು ಸಮಿತಿ ಯೋಜನಾಧಿಕಾರಿ ಶಶಿಕಲಾ ಸುವರ್ಣ, ಹಿರಿಯ ಧಾರ್ಮಿಕ ನೇತಾರರಾದ ಧಾರ್ಮಿಕ ಮುಂದಾಳು ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು, ಮಂಜೇಶ್ವರ ಸೇವಾ ಸಹಕಾರಿ ಕೋ - ಅಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ರಾಮಚಂದ್ರ ಎಸ್, ಹಿರಿಯ ಸಮಾಜಸೇವಕರಾದ ಗುರುವಪ್ಪ ಮಂಜೇಶ್ವರ, ಮಂಜೇಶ್ವರ ಗಾಣಿಗ ಸಮಾಜದ ಅಧ್ಯಕ್ಷರಾದ ದಯಾನಂದ ಬಂಗೇರ ಶುಭ ಹಾರೈಸಿ ಮಾತನಾಡಿದರು. ಉದ್ಯಾವರ ಗುತ್ತು ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಗೌರವಾಧ್ಯಕ್ಷರಾದ ಶ್ರೀ ಐತ್ತಪ್ಪ ಉದ್ಯಾವರ ಗುತ್ತು, ಭಗವತಿ ಸೇವಾ ಸಂಘದ ಅಧ್ಯಕ್ಷರಾದ ಸೋಮಶೇಖರ್ ಎಂ.ಎನ್. ಹಿರಿಯ ಉದ್ಯಮಿ ನಾಗೇಶ್ ಶೆಟ್ಟಿ ಹೊಸಬೆಟ್ಟು, ಮಂಜೇಶ್ವರ, ಹರೀಶ್ ಪೂಜಾರಿ ಹೊಸಬೆಟ್ಟು ಮಂಜೇಶ್ವರ, ಪ್ರತಾಪ್ ಫ್ರೆಂಡ್ಸ್ ಹೊಸ ಬೆಟ್ಟು ಇದರ ಅಧ್ಯಕ್ಷರಾದ ನವೀನ್ ಅಡಪ, ಹಿರಿಯ ಸಮಾಜ ಸೇವಕರಾದ ಪ್ರಕಾಶ್ ಕೂಡೇಲು, ಹಿರಿಯ ಸಮಾಜ ಸೇವಕಿ ಪ್ರೇಮ, ಯುವಕ ಸಂಘ (ರಿ.) ಬಡಾಜೆಯ ಅಧ್ಯಕ್ಷರಾದ ಗಣೇಶ್ ಶಿವಪುರ,
ಜಿ ಎಲ್ ಪಿ ಎಸ್ ಕಣ್ವತೀರ್ಥ ದ ಮುಖ್ಯೋಪಾಧ್ಯಾಯರಾದ ಮೋಹನ್ ಮಾಸ್ತರ್, ಪ್ರತಾಪ್ ಫ್ರೆಂಡ್ಸ್ ಕ್ಲಬ್ಬಿನ ವಿಜಿತ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರುದ್ರಭೂಮಿಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನಿಸ್ವಾರ್ಥ ಸೇವೆಗೈದ ಶಿವಾನಂದ ಹೊಸಬೆಟ್ಟು, ಐತ್ತಪ್ಪ ಮಂಜೇಶ್ವರ, ಮಿಥುನ್ ಮಂಜೇಶ್ವರ ಅವರನ್ನು ಗೌರವಿಸಲಾಯಿತು. ಹಿಂದೂ ರುದ್ರ ಭೂಮಿ ಪರಿಪಾಲನ ಸಮಿತಿ ಪ್ರಧಾನ ಕಾರ್ಯದರ್ಶಿ ಮನೋಜ್ ಸ್ವಾಗತಿಸಿ, ವಂದಿಸಿದರು. ಅಧ್ಯಾಪಕ ಈಶ್ವರ್ ಕಿದೂರು ಕಾರ್ಯಕ್ರಮ ನಿರೂಪಿಸಿದರು.
