ಮಧೂರಿನಿಂದ ಗುರುಪೀಠದ ಪುನರ್‌ನಿರ್ಮಾಣಕ್ಕೆ ಭದ್ರವಾದ ಭುನಾದಿ : ಆನೆಗುಂದಿಶ್ರೀ.
ಜುಲೈ 08, 2025
0
ಮಧೂರಿನಿಂದ ಗುರುಪೀಠದ ಪುನರ್‌ನಿರ್ಮಾಣಕ್ಕೆ ಭದ್ರವಾದ ಭುನಾದಿ : ಆನೆಗುಂದಿಶ್ರೀ.
ಕಾಸರಗೋಡು: ಆನೆಗುಂದಿ ಗುರುಪೀಠದ ಪುನರ್‌ನಿರ್ಮಾಣಕ್ಕಾಗಿ ಸಂಪೂರ್ಣ ಸಮಾಜಬಾಂಧವರ ಸಕ್ರೀಯಸಹಭಾಗಿತ್ವ ಇದ್ದರೂ, ಮಧೂರಿನವರು ಮುಂಚೂಣಿಯಲ್ಲಿದ್ದು ಗುರುಪೀಠದ ಪುನರ್‌ನಿರ್ಮಾಣಕ್ಕೆ ಭದ್ರವಾದ ಭುನಾದಿಯನ್ನು ಹಾಕುವಲ್ಲಿ ಯಶಸ್ವಿಯಾದರು ಎಂದು ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರ‍್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.
ಅವರು ತಮ್ಮ 21ನೇ ಚಾತುರ್ಮಾಸ್ಯ ವ್ರತಾಚರಣೆಯ ಪೂರ್ವಭಾವಿ ಕ್ಷೇತ್ರ ಸಂದರ್ಶನದ ಅಂಗವಾಗಿ ಮಧೂರು ಶ್ರೀ ಕಾಳಿಕಾಂಬಾ ಮಠಕ್ಕೆ ಚಿತೈಸಿ ಶಿಷ್ಯರಿಗೆ ಆಶೀಮಂತ್ರಾಕ್ಷತೆಯನ್ನು ನೀಡಿ ಆಶೀರ್ವಚನ ನೀಡುತ್ತಿದ್ದರು.
ಮಧೂರಿನಲ್ಲಿ 1983ರ ಕಾಲಘಟ್ಟದಲ್ಲಿ ಗುರುಪೀಠದ ಪುನರ್‌ನಿರ್ಮಾಣ ಪ್ರಯತ್ನ ನಡೆದಿದೆ. ಇದಕ್ಕಿಂತ ಮೊದಲು ಕಟಪಾಡಿಯಲ್ಲಿ ಮತ್ತು ಮಂಗಳೂರಿನಲ್ಲಿ 1931ರಿಂದ 1958ರ ಕಾಲಘಟ್ಟದಲ್ಲಿ ನಾಲ್ಕು ಬಾರಿ ಪ್ರಯತ್ನ ನಡೆದರೂ ಯಶಸ್ವಿಯಾಗಲ್ಲಿಲ್ಲ. ಮಧೂರಿನವರ ಐದನೇ ಬಾರಿಯ ಪ್ರಯತ್ನದಲ್ಲಿ ಹಿರಿಯ ಕಿರಿಯರು ಸೇರಿ ಗುರುಸೇವೆಯಲ್ಲಿ ತೊಡಗಿಸಿಕೊಂಡ ಫಲವಾಗಿ ಗುರುದೀಕ್ಷಾ ಪೂರ್ವ ಅಭಿಯಾನ ಯಶಸ್ವಿಯಾಗಿ ಸಂಪನ್ನಗೊಡು ಮುಂದೆ ಗುರುದೀಕ್ಷೆ ಮತ್ತು ಪಟ್ಟಾಭಿಷೇಕವು ಜರಗುವಂತಾಯಿತು ಎಂದು ತಮ್ಮ ಹಿಂದಿನ ದಿನಗಳನ್ನು ಮಧೂರು ಮಠದ ಪ್ರಾಮಾಣಿಕ ಪ್ರಯತ್ನವನ್ನು ಸ್ಮರಿಸಿದರು.
ಇಂದು ಗುರುಪೀಠವು ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ. ಗುರುಪೀಠದ ವ್ಯಾಪ್ತಿಯು ವಿಸ್ತರಿಸುತ್ತಿದೆ. ಸಮಾಜದ ಸರ್ವತೋಮುಖ ಅಭಿವೃದ್ಧಿ ಕಾಣಲು ಮಧೂರಿನಿಂದ ಸಕ್ರೀಯ ಕಾರ್ಯಕರ್ತರ ಅಗತ್ಯ ಇಂದು ಅಧಿಕವಾಗಿದೆ. ಇಲ್ಲಿನ ಹಳೆತಲೆಮಾರಿನವರು ಹಾಕಿದ ಹೆಜ್ಜೆಯಲ್ಲಿ ಮಧೂರಿನ ಯುವಪೀಳಿಗೆಯು ಹೆಚ್ಚಿನ ಸಂಖ್ಯೆಯಲ್ಲಿ ಮುನ್ನಡೆದು ಸುಸಂಸ್ಕ್ಕೃತ ಸಮಾಜ ನಿರ್ಮಾಣದೊಂದಿಗೆ ಆನೆಗುಂದಿ ಮಹಾಸಂಸ್ಥಾನ, ತಮ್ಮ ದೇವಸ್ಥಾನ ಮತ್ತು ಸಮಾಜದ ಅಭಿವೃದ್ದಿಯಲ್ಲಿ ತೊಡಗಿಸಿಕ್ಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಚಾತುರ್ಮಾಸ್ಯ ಕಾಲದಲ್ಲಿ ವಿವಿಧ ಯುವಗೋಷ್ಠಿಗಳನ್ನು, ಪೂರ್ವಛಾತ್ರ ಸಂಘದ ವತಿಯಿಂದ ರಾಶಿದೋಷಗಳ ಪರಿಹಾರಕ್ಕಾಗಿ ದ್ವಾದಶ ರಾಶಿಪೂಜೆಯನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಚಾತುರ್ಮಾಸ್ಯ ಕಾಲದಲ್ಲಿ ಸಮಾಜಬಾಂಧವರು ಗುರುಪೀಠಕ್ಕೆ ಆಗಮಿಸಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಾಗಲಿ ಎಂದು ಹಾರೈಸಿದರು.
ಆಡಳಿತ ಸಮಿತಿಯ ಪದಾಧಿಕಾರಿಗಳಾದ ,ಮಧೂರು ಯೋಗೇಂದ್ರ ಆಚಾರ್ಯ ಪರಕ್ಕಿಲ, ಪುರುಷೋತ್ತಮ ಆಚಾರ್ಯ ಬದಿಯಡ್ಕ, ಎಂ ಪುರುಷೋತ್ತಮ ಆಚಾರ್ಯ ಕಂಬಾರು, ರಾಜೇಶ್ ಆಚಾರ್ಯ ಮನ್ನಿಪ್ಪಾಡಿ, ವರಪ್ರಸಾದ್ ಆಚಾರ್ಯ ಕಂಬಾರು, ಮಂಜುನಾಥ ಆಚಾರ್ಯ ಪೆರುವಾಯಿ, ಮಹೇಶ್ ಆಚಾರ್ಯ ಮಧೂರು, ಪುಷ್ಪಲತಾ ಪುರುಶೋತ್ತಮ ಆಚಾರ್ಯ ಬದಿಯಡ್ಕ, ವಾಸುದೇವ ಪುರೋಹಿತ್ ನೀರ್ಚಾಲು, ಮೌನೇಶ್ ಪುರೋಹಿತ್ ಪುತ್ತಿಗೆ, ರಾಘವ ಆಚಾರ್ಯ ಕರಂದಕ್ಕಾಡು, ತುಕಾರಾಮ ಆಚಾರ್ಯ ಕೆರೆಮನೆ, ಪರಮೇಶ್ವರ ಆಚಾರ್ಯ ನೀರ್ಚಾಲು, ಉಮೇಶ್ ಆಚಾರ್ಯ ಪೋಳ್ಯ, ಸುರೇಂದ್ರ ಆಚಾರ್ಯ ಪುತ್ತೂರು, ದೇಶಮಂಗಲ ಗೋಪಾಲಕೃಷ್ಣ ಆಚಾರ್ಯ ಪುತ್ತೂರು,ನಿರಂಜನ ಆಚಾರ್ಯ ಪುತ್ತೂರು, ಮುರಳಿ ಆಚಾರ್ಯ ಪುತ್ತೂರು, ಹೇಮಂತ ಆಚಾರ್ಯ ಪುತ್ತೂರು, ಭರತ್ ಆರ್ ಆಚಾರ್ಯ ಕರಂದಕ್ಕಾಡು, ಶೀತಲ್ ಎಸ್ ಆಚಾರ್ಯ ಕಾಸರಗೋಡು, ಮೌನೇಶ್ ಆಚಾರ್ಯ ಜೆ.ಪಿ ನಗರ, ನಾಗೇಶ್ ಆಚಾರ್ಯ ಪುತ್ತಿಗೆ, ವಿಷ್ಣು ಆಚಾರ್ಯ ಪೆರ್ಣೆ, ಆಡಳಿತ ಸಮಿತಿ, ಮಹಿಳಾ ಸಮಿತಿ, ಭಜನಾ ಸಮಿತಿ ಪದಾಧಿಕಾರಿಗಳು ಸದಸ್ಯರು ಉಪಸ್ತಿತರಿದ್ದರು .
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ ಆಚಾರ್ ಕಂಬಾರು ಪದಾಧಿಕಾರಿಗಳಾದ, ಜನಾರ್ಧನ ಆಚಾರ್ಯ ಕನ್ಯಾನ, ನಿವೃತ್ತ ಸುಬೇಧಾರ್ ವೈ ಧರ್ಮೇಂದ್ರ ಆಚಾರ್ಯ ಪರಕ್ಕಿಲ ಗಣೇಶ್ ಆಚಾರ್ಯ ಕೆಮ್ಮಣ್ಣು, ಗುರುರಾಜ ಕೆ.ಜೆ ಆಚಾರ್ಯ ಮಂಗಳೂರು, ಜನಾರ್ಧನ ಆಚಾರ್ಯ ಬಜಕೂಡ್ಲು, ಬಿ.ವಿಘ್ನೇಶ್ ಆಚಾರ್ಯ ಕಾಸರಗೋಡು, ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು ಭಾಗವಹಿಸಿದರು
ಮಧೂರು ಶ್ರೀ ಕಾಳಿಕಾಂಬಾ ಮಠಕ್ಕೆಆಗಮಿಸಿದ ಆನೆಗುಂದಿ ಶ್ರೀಗಳವರನ್ನು ಆಡಳಿತ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ. ಪ್ರಭಾಕರ ಆಚಾರ್ಯ ಕೋಟೆಕಾರು ಇವರು ಸ್ವಾಗತಿಸಿದರು.,ನ್ಯಾಯವಾದಿ ಕೆ. ಎಂ ಗಂಗಾಧರ ಆಚಾರ್ಯ ಕೊಂಡೆವೂರು ಪ್ರಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ಕೆ. ಎಂ ಜಗದೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಎಂ. ತಾರನಾಥ ಆಚಾರ್ಯ ವಂದಿಸಿದರು.




