ಕೇರಳ ಗ್ರಾಮೀಣ ಬ್ಯಾಂಕಿನ ಪಾವೂರು ಶಾಖೆಯ 13 ನೇ ವಾರ್ಷಿಕೋತ್ಸವ.
ಜುಲೈ 08, 2025
0
ಕೇರಳ ಗ್ರಾಮೀಣ ಬ್ಯಾಂಕಿನ ಪಾವೂರು ಶಾಖೆಯ
13 ನೇ ವಾರ್ಷಿಕೋತ್ಸವ.
ಮಂಜೇಶ್ವರ: ಕೇರಳ ಗ್ರಾಮೀಣ ಬ್ಯಾಂಕಿನ ಪಾವೂರು ಶಾಖೆಯ
13 ನೇ ವಾರ್ಷಿಕೋತ್ಸವವನ್ನು ಪಾವೂರು ಗ್ರಾಮೀಣ ಬ್ಯಾಂಕಿನಲ್ಲಿ ಆಚರಿಸಲಾಯಿತು. ಶಾಖಾ ಮೆನೇಜರ್ ಶ್ರುತಿಯವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತ್ಯಾಂಪಣ್ಣ ರೈ ಮುಟ್ಲ, ಇಸ್ಮಾಯಿಲ್ ಜಮಾಲ್, ಅಸಿಸ್ಟೆಂಟ್ ಮೆನೇಜರ್ ರಾಜನ್, ಬ್ಯಾಂಕ್ ಸಿಬ್ಬಂದಿಗಳಾದ ಶಾನೇಶ್, ವೀಣಾ ಅಶೋಕ ಆಚಾರ್ಯ ಹಾಗೂ ಸಾರ್ವಜನಿಕರು ಭಾಗವಹಿಸಿದರು. 13 ನೇ ವಾರ್ಷಿಕೋತ್ಸವವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಣೆ ಮಾಡಲಾಯಿತು.










