Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸ್ನೇಹಿತರ ಜತೆ ಮಾತಾಡುತ್ತಾ ಕುಳಿತಿದ್ದ ಯುವಕನನ್ನು ಕಾರಿನಲ್ಲಿ ಬಂದ ತಂಡ ಅಪಹರಣ.

ಸ್ನೇಹಿತರ ಜತೆ ಮಾತಾಡುತ್ತಾ ಕುಳಿತಿದ್ದ ಯುವಕನನ್ನು ಕಾರಿನಲ್ಲಿ ಬಂದ ತಂಡ ಅಪಹರಣ. ಪೊಲೀಸರ ಬೆನ್ನಟ್ಟುವಿಕೆ ತಿಳಿದು ಕಾರು ಹಾಗೂ ಯುವಕನನ್ನು ನಾಯಮ್ಮರ್ ಮೂಲೆಯಲ್ಲಿ ಉಪೇಕ್ಷಿಸಿ ತಂಡ ಪರಾರಿ.
ಮಂಜೇಶ್ವರ: ಸ್ನೇಹಿತರ ಜತೆ ಮಾತಾಡುತ್ತಾ ಕುಳಿತಿದ್ದ ಯುವಕನನ್ನು ಕಾರಿನಲ್ಲಿ ಆಗಮಿಸಿದ ತಂಡ ಅಪಹರಿಸಿದ ಘಟನೆ ನಿನ್ನೆ ರಾತ್ರಿ ಮಂಜೇಶ್ವರ ಗೋವಿಂದ ಪೈ ಕಾಲೇಜು ಬಳಿ ನಡೆದಿದೆ. ಮಾಹಿತಿ ತಿಳಿದ ಪೊಲೀಸರು ಹಿಂಬಾಲಿಸಿದಾಗ ಕಾರು ಹಾಗೂ ಯುವಕನನ್ನು ಕಾಸರಗೋಡು ನಾಯನ್ಮಾರಮೂಲೆ ಬಳಿ ಉಪೇಕ್ಷಿಸಿ, ತಂಡ ಪರಾರಿಯಾಗಿದೆ. ಮಂಜೇಶ್ವರ ಗೇರುಕಟ್ಟೆ ಬಳಿಯ ಅಬೂಬಕರ್ ಸಿದ್ದಿಖ್ ಯಾನೆ ಸದ್ದಾಂ (33) ಅಪಹರಣಕ್ಕೀಡಾದ ವ್ಯಕ್ತಿಯಾಗಿದ್ದಾನೆ. ರಸ್ತೆ ಬದಿಯಲ್ಲಿ ಈತ ತನ್ನ ಸ್ನೇಹಿತರ ಜತೆ ಮಾತಾಡುತ್ತಿದ್ದಾಗ ಕಾರಿನಲ್ಲಿ ಆಗಮಿಸಿದ ತಂಡ ಸದ್ದಾಂನನ್ನು ಬಲವಂತವಾಗಿ ಹಿಡಿದು ಕಾರಿನೊಳಗೆ ಹಾಕಿ ಮುಂದಕ್ಕೆ ಸಾಗಿದೆ. ಈ ಬಗ್ಗೆ ಸದ್ಧಾಂನ ಸಹೋದರಿ ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದರು ಅದರಂತೆ ಪೊಲೀಸರು ಹಿಂಬಾಲಿಸಿದಾಗ ನಾಯನ್ಮಾರಮೂಲೆಯಲ್ಲಿ ಕಾರು ಮತ್ತು ಸದ್ದಾಂನನ್ನು ಉಪೇಕ್ಷಿಸಿ ತಂಡ ಪರಾರಿಯಾಗಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.