Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಯಾವುದೇ ಶೀರ್ಷಿಕೆಯಿಲ್ಲ

ಅಗಲಿದ ಕಾಂಗ್ರೆಸ್ ಮುಖಂಡ, ಸಹಕಾರಿ ಧುರೀಣ ಜಿ. ರಾಮ ಭಟ್ ಅವರಿಗೆ ಅಂತಿಮ ನಮನ.
ಮಂಜೇಶ್ವರ : ಅಗಲಿದ ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರೂ, ಮೀಯಪದವು ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರೂ ಆದ ಜಿ. ರಾಮ್ ಭಟ್ ಅವರಿಗೆ ನೂರಾರು ಮಂದಿ ಅಂತಿಮ ನಮನ ಸಲ್ಲಿಸಿದರು. ಮೀಯ ಪದವಿನಲ್ಲಿ ಸಾರ್ವಜನಿಕ ದರ್ಶನದ ಬಳಿಕ, ಬೋರ್ಕಳದ ಸ್ವಗೃಹದ ಸಮೀಪ ಅಂತ್ಯಕ್ರಿಯೆ ನಡೆಯಿತು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಬ್ಲಾಕ್ ಪಂಚಾಯತ್ ಸದಸ್ಯ ರಾಧಾಕೃಷ್ಣ ಕೆ. ವಿ., ಮೀಯಪದವು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ರಘುನಾಥ ಕೋಮ್ಮಂಗಳ, ಮಾಜಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಶಾಲಾ ಸಂಚಾಲಕರಾದ ಡಾ. ಜಯ ಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ಡಿಎಂಕೆ, ಉಪಾಧ್ಯಕ್ಷ ಪಿ.ಸೋಮಪ್ಪ, ಮಂಡಲ ಕಾಂಗ್ರೆಸ್ ಅಧ್ಯಕ್ಷ ದಾಮೋದರ ಮಾಸ್ತರ್, ಮಾಜಿ ಪಂಚಾಯತ್ ಅಧ್ಯಕ್ಷ ಬಿ.ಮೊಹಮ್ಮದ್ ಕುಂಞ, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೊಹಮ್ಮದ್ ಹನೀಫ್, ಕಾಂಗ್ರೆಸ್ ಮುಖಂಡರಾದ ಕಂಚಿಲ ಮೊಹಮ್ಮದ್, ಕಾಯಿಂಞ ಹಾಜಿ ತಲೇಕಳ, ಸೀತಾರಾಮ ಬೇರಿಕೆ, ಗಂಗಾಧರ ಕೆ, ಪಳ್ಳಿಕುಂಞ ತಲೇಕಳ, ದಿವಾಕರ ಎಸ್. ಜೆ, ಹಮೀದ್, ಶೇಕ್ ಅಬ್ಬಾಸ್, ನಫೀಸತ್ ಮಿಸ್ರಿಯಾ, ಬೌತಿಸ್ ಡಿ'ಸೋಜಾ, ಜೋಕಿಂ ಡಿಸೋಜ, ಶಾಫೀ ತಲೇಕಳ, ಇನಾಸ್ ಡಿ.ಸೋಜ, ಡೆನ್ನಿಸ್ ಡಿ.ಸೋಜ, ಫ್ರಾನ್ಸಿನ್ ಡಿ.ಸೋಜ, ಮುಸ್ಲಿಂ ಲೀಗ್ ಮುಖಂಡರಾದ ತಾಜುದ್ದೀನ್ ಕಡಂಬಾರು, ಸಿದ್ದೀಕ್ ಮೀಯಪದವು, ಸಿರಾಜ್ ಮಾಸ್ತರ್, ಶರೀಫ್ ಚಿನಾಲ, ನಿವೃತ್ತ ಎಸಿಪಿ ಬಶೀರ್ ಅಹ್ಮದ್, ಸಿಪಿಎಂ ಮುಖಂಡ ರಾಮಚಂಧ್ರ, ಬಿಜೆಪಿ ಮುಖಂಡ ಪದ್ಮನಾಭ ರೈ, ಮರ್ಚೆಂಟ್ ಅಸೋಸಿಯೇಷನ್ ಪ್ರತಿನಿಧಿಗಳಾದ ಎಸ್ ಟಿ ಇಬ್ರಾಹಿಂ ಚಂದ್ರಶೇಖರ ಮೀಯಪದವು, ಬಸ್ಸು ಮಾಲಕರ ಸಂಘದ ಸುಬ್ಬಣ್ಣ ಆಳ್ವ, ನಿವೃತ್ತ ಮುಖ್ಯೋಪಾಧ್ಯಾಯ ಶಿವಶಂಕರ್ ಭಟ್, ಸೇವಾ ಸಹಕಾರಿ ಬ್ಯಾಂಕಿನ ಸಿಬ್ಬಂದಿಗಳು ಮುಂತಾದವರು ಅಂತಿಮ ದರ್ಶನಗೈದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಸಿ. ಪ್ರಭಾಕರ್ ಅವರು ಪಕ್ಷದ ತ್ರಿವರ್ಣ ಧ್ವಜವನ್ನು ಹೊದಿಸಿ, ಗೌರವ ಸಮರ್ಪಿಸಿದರು. ಅರ್ಜುನ ತಾಯಲಂಗಾಡಿ, ದಾಮೋದರ ಮಾಸ್ತರ್, ಹರ್ಷಾದ್ ವರ್ಕಾಡಿ ಸಿದ್ಧಿಕ್ ಮೀಯಪದವು ಈ ಸಂದರ್ಭದಲ್ಲಿ ಉಪಸಿತರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.