ಮೂಡಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ವಾಚನ ದಿನಾಚರಣೆ.
ಜೂನ್ 19, 2025
0
ಮೂಡಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ವಾಚನ ದಿನಾಚರಣೆ.
ಮಂಜೇಶ್ವರ: ಸರಕಾರಿ ಪ್ರೌಢಶಾಲೆ ಮೂಡಂಬೈಲಿನಲ್ಲಿ ವಾಚನ ವಾರದ ಉದ್ಘಾಟನೆಯು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಚುಟುಕು ಕವಿ ಹಾಗೂ ಅಧ್ಯಾಪಕರಾದ ಹರೀಶ್ ಸುಲಾಯ ಒಡ್ಡoಬೆಟ್ಟುರವರು ದೀಪ ಬೆಳಗಿಸಿ, ಬಳಿಕ ಮಾತನಾಡಿದರು. ಈ ವೇಳೆ ಸಿ ಆರ್ ಸಿ ಕೊರ್ಡಿನೇಟರ್ ಮೋಹಿನಿಯವರು ಅಭಿನಂದನೆ ಸಲ್ಲಿಸಿದರು. ಪಿಟಿಎ ಅಧ್ಯಕ್ಷರಾದ ಅಬ್ದುಲ್ಲಾ ಪಜಿಂಗಾರು ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ದಯಾವತಿ ಸ್ವಾಗತಿಸಿ, ಆಧ್ಯಾಪಿಕೆ ರೆಹನಾ ಧನ್ಯವಾದವಿತ್ತರು. ಆಧ್ಯಾಪಿಕೆ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.



