Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಜೇಶ್ವರದೆಲ್ಲೆಡೆ ಸಂಭ್ರಮದ ಬಕ್ರೀದ್ ಹಬ್ಬ.

ಮಂಜೇಶ್ವರದೆಲ್ಲೆಡೆ ಸಂಭ್ರಮದ ಬಕ್ರೀದ್ ಹಬ್ಬ.
ಮಂಜೇಶ್ವರ: ಮಂಜೇಶ್ವರದ ಎಲ್ಲೆಡೆ ಇಂದು ಮುಂಜಾನೆಯಿಂದಲೇ ಅತ್ಯಂತ ಸಡಗರ, ಸಂಭ್ರಮದಿಂದ ಈದುಲ್ ಅಝ್ಹಾ(ಬಕ್ರೀದ್) ಅನ್ನು ಆಚರಿಸಲಾಗುತ್ತಿದೆ. ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಮುಸ್ಲಿಮರು ಮಸೀದಿ, ಈದ್ದಾಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಿ, ಈದ್ ಖುತ್ಸಾ ಮತ್ತು ಪ್ರವಚನ ಆಲಿಸಿ, ಈದ್ ಸಂದೇಶ ಸ್ವೀಕರಿಸುವುದು ಹಾಗೂ ನೆರೆಮನೆ, ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುತ್ತಿರುವುದು ಕಂಡುಬಂತು. ತೂಮಿನಾಡು ಅಲ್ ಫತಾಃ ಜುಮಾ ಮಸೀದಿ, ಕುಂಜತ್ತೂರು ಮಸ್ಜಿದ್ ನೂರ್, ದಾರುಸ್ಸಲಾಂ ಸಲಫಿ ಮಸೀದಿ, ಕುಂಜತ್ತೂರು ಜುಮಾ ಮಸೀದಿ, ಉದ್ಯಾವರ ಜುಮಾ ಮಸೀದಿ, ಪೊಸೋಟು ಜುಮಾ ಮಸೀದಿ, ಪಾಂಡ್ಯಾಲ್ ಜುಮಾ ಮಸೀದಿ ಸಹಿತ ಮಂಜೇಶ್ವರದ ವಿವಿಧ ಜುಮಾ ಮಸ್ಜಿದ್ ಹಾಗೂ ಈದ್ಗಾ ನಮಾಝ್, ಖುತ್ಬಾ ನೆರವೇರಿಸಲಾಯಿತು. ಹಿರಿಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಹೊಸ ಬಟ್ಟೆಬರೆ ಧರಿಸಿ, ಸುಗಂಧ ದ್ರವ್ಯ ಹಚ್ಚಿ ನಾನಾ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸಿದರು. ಈದ್ ನಮಾಝ್-ಖುತ್ಬಾದ ಬಳಿಕ ಕುಟುಂಬಸ್ಥರು, ಸ್ನೇಹಿತರು ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಷಯ ತಿಳಿಸಿದರು. ಇನ್ನು ಕುಂಜತ್ತೂರು ಮಸ್ಜಿದುನ್ನೂರ್ ಜುಮಾ ಮಸೀದಿಯಲ್ಲಿ ಹಿರಿಯ ವಿದ್ವಾಂಸ ಖತೀಬ್ ನೌಫಲ್ ಒಟ್ಟುಮಾಲ್ ಅವರ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತ್ಬಾ ಪಾರಾಯಣ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.