Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಉಪ್ಪಳ ಬಳಿಯ ದಡ್ಡoಗಡಿ ಕಂಚಿಲ ನಿವಾಸಿ, ಇಲೆಕ್ಟ್ರಿಶಿಯನ್ ಚರಣ್ ರಾಜ್ (35) ನೇಣು ಬಿಗಿದ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆ.

ಇಲೆಕ್ಟ್ರಿಶಿಯನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ.
ಮಂಜೇಶ್ವರ: ಉಪ್ಪಳ ಬಳಿಯ ದಡ್ಡoಗಡಿ ಕಂಚಿಲ ನಿವಾಸಿ, ಟೈಲರ್ ದೂಮಣ್ಣ ಶೆಟ್ಟಿಗಾರ್ ರ ಪುತ್ರ, ಇಲೆಕ್ಟ್ರಿಶಿಯನ್ ವೃತ್ತಿಯಲ್ಲಿ ತೊಡಗಿಕೊಂಡಿರುವ ಚರಣ್ ರಾಜ್ (35) ಇಂದು ಬೆಳಗ್ಗೆ ಮನೆಯೊಳಗೆ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೂಡಲೇ ಮನೆಯವರು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ಚರಣ್ ರಾಜ್ ರನ್ನು ಕುಣಿಕೆಯಿಂದ ಕೆಳಗಿಳಿಸಿ ಉಪ್ಪಳದ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ಚರಣ್ ರಾಜ್ ಮೃತಪಟ್ಟಿದ್ದಾನೆ. ಇದೀಗ ಮೃತದೇಹವನ್ನು ಮಂಗಲ್ಪಾಡಿಯ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ನೇಣು ಬಿಗಿಯಲು ಕಾರಣ ಏನೆಂಬುದು ತಿಳಿದು ಬಂದಿಲ್ಲ. ಮೃತಪಟ್ಟ ಚರಣ್ ರಾಜ್ ಅವಿವಾಹಿತರಾಗಿದ್ದು, ತಂದೆ, ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರದ ಸಕ್ರೀಯ ಕಾರ್ಯಕರ್ತನಾಗಿರುವ ಚರಣ್ ರಾಜ್ ಇತ್ತೀಚಿಗೆ ನಡೆದ ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ಹಗಲು ರಾತ್ರಿ ಕರ ಸೇವಕನಾಗಿ ಸೇವೆ ಸಲ್ಲಿಸಿದ್ದನು. ಅಲ್ಲದೇ ಟೀಮ್ ಗರುಡ ಸಂತಡ್ಕದ ಸದಸ್ಯನಾಗಿದ್ದಾನೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.