Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಹಿರಿಯ ಕಾಂಗ್ರೆಸ್ ಮುಖಂಡ ಜಿ. ರಾಮ ಭಟ್ ಮೀಯಪದವು ಇನ್ನಿಲ್ಲ.

ಹಿರಿಯ ಕಾಂಗ್ರೆಸ್ ಮುಖಂಡ ಜಿ. ರಾಮ ಭಟ್ ಮೀಯಪದವು ಇನ್ನಿಲ್ಲ.
ಮಂಜೇಶ್ವರ: ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರೂ,ಹಿರಿಯ ಕಾಂಗ್ರೆಸ್ ಮುಖಂಡರಾಗಿರುವ ಮೀಯಪದವು ಬಳಿಯ ಗುಳಿಮನೆ ನಿವಾಸಿ ಜಿ. ರಾಮ ಭಟ್ (73) ನಿಧನರಾದರು. ಇವರು ಮೀಯಪದವು ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿದ್ದರು. ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಇಂದು (ಜೂ.18) ಬೆಳಿಗ್ಗೆ 12:00 ಗಂಟೆಗೆ ನಿಧನ ಹೊಂದಿದ್ದಾರೆ. ಮೃತರು ಮೀಯಪದವು ಬಳಿಯ ಗುಳಿಮನೆ ನಿವಾಸಿ ದಿವಂಗತರಾದ ಗೋವಿಂದ ಭಟ್ - ಗೌರಿ ದಂಪತಿಗಳ ಪುತ್ರನಾಗಿದ್ದು, ಪತ್ನಿ: ಗೋಪಿ, ಮಕ್ಕಳಾದ: ಗೋವಿಂದ ಪ್ರಸಾದ್ (ಸ್ವಿಜೆರ್ ಲೆಂಡ್), ಚೇತನ, ಸೊಸೆ : ವಾಣಿ, ಅಳಿಯ: ವೆಂಕಟೇಶ್ ಕಿನ್ನಿoಗಾರ್, ಸಹೋದರ - ಸಹೋದರಿಯರಾದ: ಗಣಪತಿ ಭಟ್, ಕೃಷ್ಣ ಕುಮಾರ್ ಭಟ್ , ನಾರಾಯಣ ಭಟ್, ಸುಬ್ರಮಣ್ಯ ಭಟ್, ಉದಯಕುಮಾರ್ ಭಟ್, ಜಯಂತಿ, ಭವಾನಿ, ಮನೋರಮಾ ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಇದೀಗ ಮೃತದೇಹ ಪುತ್ತೂರಿನ ಆಸ್ಪತ್ರೆಯಲ್ಲಿದ್ದು, ನಾಳೆ (19-06-2025 ಗುರುವಾರ) ಸಂಜೆ 4 ಗಂಟೆಗೆ ಮೀಯಪದವಿನ ಮನೆಗೆ ತರಲಾಗುವುದು. ಬಳಿಕ ಮನೆ ಪರಿಸರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಪುತ್ರಿ ಚೇತನಾ "ನಮ್ಮ ಮಂಜೇಶ್ವರ" ನ್ಯೂಸ್ ಗೆ ಖುದ್ದಾಗಿ ತಿಳಿಸಿದ್ದಾರೆ. ಜಿ. ರಾಮ ಭಟ್ ಅವರ ಅಕಾಲಿಕ ನಿಧನಕ್ಕೆ ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ಅಗಾಧ ಸಂತಾಪ ವ್ಯಕ್ತಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.