ಹೊಸಂಗಡಿಯ ಖ್ಯಾತ ಬ್ಯುಲ್ಡಿಂಗ್ ಕಂಟ್ರಾಕ್ಟರ್, ಕಟ್ಟೆ ಬಜಾರ್ ನಿವಾಸಿ ವೆಂಕಟೇಶ್ (58) ಹೃದಯಾಘಾತದಿಂದ ನಿಧನ.
ಜೂನ್ 12, 2025
0
ಹೊಸಂಗಡಿಯ ಖ್ಯಾತ ಬ್ಯುಲ್ಡಿಂಗ್ ಕಂಟ್ರಾಕ್ಟರ್, ಕಟ್ಟೆ ಬಜಾರ್ ನಿವಾಸಿ ವೆಂಕಟೇಶ್ (58) ಹೃದಯಾಘಾತದಿಂದ ನಿಧನ.
ಮಂಜೇಶ್ವರ: ಹೊಸಂಗಡಿಯಲ್ಲಿ ಬ್ಯುಲ್ಡಿಂಗ್ ಕಂಟ್ರಾಕ್ಟರ್ ರಾಗಿ ಖ್ಯಾತಿ ಪಡೆದಿರುವ ಹೊಸಂಗಡಿ ಬಳಿಯ ಕಟ್ಟೆ ಬಜಾರ್ ನಿವಾಸಿ ವೆಂಕಟೇಶ್ (58) ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಕಟ್ಟೆ ಬಜಾರ್ ನಲ್ಲಿರುವ ಚರ್ತುಮುಖ ಜೈನ ಬಸದಿಯ ಮುಂಭಾಗದ ನಿವಾಸಿ: ದಿ. ಸೀತಾರಾಮ - ದಿ. ಲೀಲಾವತಿ ದಂಪತಿಗಳ ಪುತ್ರನಾಗಿರುವ ವೆಂಕಟೇಶ್, ಪತ್ನಿ: ಸಜಿನ, ಮಕ್ಕಳಾದ: ಶರಣ್, ಅರ್ಜುನ್, ಸಹೋದರ - ಸಹೋದರಿಯಾರಾದ: ಅಶೋಕ್, ರಜನಿ, ಶಶಿಕಲಾ ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಹೊಸಂಗಡಿ ಪೇಟೆಯಲ್ಲಿ ಕಳೆದ 25 ವರ್ಷಗಳಿಂದ ಬ್ಯುಲ್ಡಿಂಗ್ ಕಂಟ್ರಾಕ್ಟರ್ ರಾಗಿ ಹೆಸರುವಾಸಿಯಾಗಿರುವ ವೆಂಕಟೇಶ್ ರವರು ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದು, ಇಂದು ಬೆಳಗ್ಗೆ ಮಂಚದಿಂದ ಕೆಳಗೆ ಕುಸಿದು ಬಿದ್ದ ಸ್ಥಿತಿಯಲ್ಲಿದ್ದರು. ಕೂಡಲೇ ಪತ್ನಿ, ಮಗ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳೀಯರು ಹೊಸಂಗಡಿಯ ಖಾಸಗಿ ಆಸ್ಪತ್ರೆ, ಬಳಿಕ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ವೆಂಕಟೇಶ್ ಮೃತಪಟ್ಟಿದ್ದಾರೆ. ಇದೀಗ ಮೃತದೇಹವನ್ನು ಮನೆಗೆ ತರಲಾಗಿದ್ದು, ಅಪರಾಹ್ನ 3.00 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

