Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕಾಂತರ -1 ಚಲನಚಿತ್ರದ ಸಹ ಕಲಾವಿದ, ಕೇರಳದ ತ್ರಿಶೂರು ನಿವಾಸಿ ಮಿಮಿಕ್ರಿ ಕಲಾವಿದ ವಿಜು ವಿ. ಕೆ ಹೃದಯಾಘಾತದಿಂದ ನಿಧನ.

ಕಾಂತರ -1 ಚಲನಚಿತ್ರದ ಸಹ ಕಲಾವಿದ, ಕೇರಳದ ತ್ರಿಶೂರು ನಿವಾಸಿ ಮಿಮಿಕ್ರಿ ಕಲಾವಿದ ವಿಜು ವಿ. ಕೆ ಹೃದಯಾಘಾತದಿಂದ ನಿಧನ.
ಮಂಗಳೂರು: ಕಾಂತರ -1 ಚಲನಚಿತ್ರದ ಸಹ ಕಲಾವಿದ, ಕೇರಳದ ತ್ರಿಶೂರು ನಿವಾಸಿ ಮಿಮಿಕ್ರಿ ಕಲಾವಿದ ವಿಜು ವಿ. ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆಗುಂಬೆ ಹೋಂ ಸ್ಟೇಯಲ್ಲಿ ನಿಧನರಾಗಿರುವುದು "ಕಾಂತಾರ" ಸಿನಿಮಾ ಶೂಟಿಂಗ್ ವೇಳೆ ಇದು ಮೂರನೇ ಮೃತಪಟ್ಟ ಘಟನೆಯಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಕಾಂತರ1 ರ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಕಾಂತರ ಚಲನಚಿತ್ರಕ್ಕಾಗಿ ಆಗುಂಬೆ ಸಮೀಪದ ಹೋಂ ಸ್ಟೇ ಒಂದರಲ್ಲಿ ವಿಜು ತಂಗಿದ್ದರು. ಅವರಿಗೆ ನಿನ್ನೆ ರಾತ್ರಿ ಏಕಏಕಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ. ಕೇರಳದಿಂದ ಕುಟುಂಬಸ್ಥರು ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.